ವೇದಿಕೆ ಮೇಲೆ ಗಳಗಳನೆ ಅತ್ತ ಸಾಯಿ ಪಲ್ಲವಿ; ಕಣ್ಣೀರು ಹಾಕಿದ್ದಕ್ಕೆ ಕಾರಣ ವಿವರಿಸಿದ ನಟಿ

Sai Pallavi Viral Video: ‘ಶ್ಯಾಮ್​ ಸಿಂಗ​ ರಾಯ್​’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಸಾಯಿ ಪಲ್ಲವಿ ಅವರು ಕಣ್ಣೀರು ಹಾಕಿದ ವಿಡಿಯೋ ಎಲ್ಲ ಕಡೆ ವೈರಲ್​ ಆಗುತ್ತಿದೆ. ಅವರ ಮಾತುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ವೇದಿಕೆ ಮೇಲೆ ಗಳಗಳನೆ ಅತ್ತ ಸಾಯಿ ಪಲ್ಲವಿ; ಕಣ್ಣೀರು ಹಾಕಿದ್ದಕ್ಕೆ ಕಾರಣ ವಿವರಿಸಿದ ನಟಿ
ಸಾಯಿ ಪಲ್ಲವಿ
TV9kannada Web Team

| Edited By: Madan Kumar

Dec 19, 2021 | 12:19 PM

ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಸಾಯಿ ಪಲ್ಲವಿ (Sai Pallavi) ಹೆಸರು ಕೂಡ ಮುಂಚೂಣಿಯಲ್ಲಿದೆ. ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಈ ವರ್ಷ ತೆರೆಕಂಡ ‘ಲವ್​ ಸ್ಟೋರಿ’ ಚಿತ್ರದಿಂದ ಅವರಿಗೆ ಭರ್ಜರಿ ಯಶಸ್ಸು ಸಿಕ್ಕಿತು. ಈಗ ‘ಶ್ಯಾಮ್​ ಸಿಂಗ ರಾಯ್​’ (Shyam Singha Roy) ಚಿತ್ರದ ಬಿಡುಗಡೆಯಾಗಿ ಅವರು ಎದುರು ನೋಡುತ್ತಿದ್ದಾರೆ. ಅಚ್ಚರಿ ಎಂದರೆ ಈ ಚಿತ್ರದ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಸಾಯಿ ಪಲ್ಲವಿ ಗಳಗಳನೆ ಕಣ್ಣೀರು ಹಾಕಿದ್ದಾರೆ. ಬಹಿರಂಗವಾಗಿಯೇ ಅವರು ಅತ್ತಿದ್ದಾರೆ. ಖುಷಿಯಿಂದ ಇರಬೇಕಾದ ಸಂದರ್ಭದಲ್ಲಿ ಅವರು ಕಣ್ಣೀರು ಸುರಿಸಿದ್ದು ಯಾಕೆ ಎಂದು ಒಂದು ಕ್ಷಣ ಎಲ್ಲರಿಗೂ ಅಚ್ಚರಿ ಆಯಿತು. ತಮ್ಮ ಅಳುವಿಗೆ ಕಾರಣ ಏನು ಅಂತ ಅದೇ ವೇದಿಕೆಯಲ್ಲಿ ಸಾಯಿ ಪಲ್ಲವಿ ವಿವರಿಸಿದ್ದಾರೆ. ಅಭಿಮಾನಿಗಳ ಪ್ರೀತಿಯನ್ನು ನೆನೆದು ಅವರು ಈ ಪರಿ ಭಾವುಕರಾಗಿದ್ದಾರೆ.

‘ಶ್ಯಾಮ್​ ಸಿಂಗ ರಾಯ್​’ ಚಿತ್ರಕ್ಕೆ ನಾನಿ ಹೀರೋ. ಅವರ ಜತೆ ಸಾಯಿ ಪಲ್ಲವಿ, ಕೃತಿ ಶೆಟ್ಟಿ, ಮಡೋನ್ನಾ ಸೆಬಾಸ್ಟಿಯನ್​ ಕೂಡ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾತನಾಡಲು ಮೈಕ್​ ಹಿಡಿದುಕೊಳ್ಳುತ್ತಿದ್ದಂತೆಯೇ ಸಾಯಿ ಪಲ್ಲವಿ ಭಾವುಕರಾದರು.

‘ನಿಮ್ಮೆಲ್ಲರ ಮುಂದೆ ನಿಂತುಕೊಳ್ಳಲು ನಾನು ಏನು ಮಾಡಿದ್ದೇನೋ ತಿಳಿದಿಲ್ಲ. ನನ್ನ ತಂದೆ-ತಾಯಿ, ನಿರ್ದೇಶಕರು, ನಿರ್ಮಾಪಕರು, ಸಹ-ಕಲಾವಿದರು, ಕ್ಯಾಮೆರಾ ಹಿಂದಿರುವ ತಂತ್ರಜ್ಞರಿಂದ ಇದೆಲ್ಲ ಸಾಧ್ಯವಾಗಿದೆ. ನೀವೆಲ್ಲ ನನ್ನ ಹೆಸರು ಕೂಗುತ್ತಿರುವಾಗ ನಾನು ಎಮೋಷನಲ್​ ಆದೆ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ‘ಸಿನಿಮಾ ಕ್ಷೇತ್ರದಲ್ಲಿ ಯಶಸ್ವಿ ಆಗಬೇಕು ಅಂತ ಎಷ್ಟೋ ಜನರು ಕಷ್ಟಪಡುತ್ತಾರೆ. ಅದರೆ ಎಲ್ಲರಿಗೂ ಗೆಲುವು ಸಿಗುವುದಿಲ್ಲ. ಅವಕಾಶ ಸಿಗುವುದು ಕೂಡ ಕೆಲವೇ ಮಂದಿಗೆ ಮಾತ್ರ. ನನಗೆ ಮೊದಲ ಸಿನಿಮಾದಿಂದಲೇ ನಿಮ್ಮೆಲ್ಲರ ಪ್ರೀತಿ ಸಿಕ್ಕಿದೆ. ನನ್ನ ಪಾಲಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇರೊಂದಿಲ್ಲ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

‘ಶ್ಯಾಮ್​ ಸಿಂಗ​ ರಾಯ್​’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಸಾಯಿ ಪಲ್ಲವಿ ಅವರು ಕಣ್ಣೀರು ಹಾಕಿದ ವಿಡಿಯೋ ಎಲ್ಲ ಕಡೆ ವೈರಲ್​ ಆಗುತ್ತಿದೆ. ಅವರ ಮಾತುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ‘ಶ್ಯಾಮ್​ ಸಿಂಗ​ ರಾಯ್​’ ಸಿನಿಮಾ ಡಿ.24ರಂದು ಬಿಡುಗಡೆ ಆಗಲಿದೆ. ಪುನರ್ಜನ್ಮದ ಕಥೆಯನ್ನು ಈ ಚಿತ್ರ ಹೊಂದಿದೆ. ರೆಟ್ರೋ ಶೈಲಿಯಲ್ಲಿ ಚಿತ್ರ ಮೂಡಿಬಂದಿದೆ. ಎರಡು ಶೇಡ್​ ಇರುವ ಪಾತ್ರದಲ್ಲಿ ಸಾಯಿ ಪಲ್ಲವಿ ಮತ್ತು ನಾನಿ ನಟಿಸಿದ್ದಾರೆ.

ಇದನ್ನೂ ಓದಿ:

ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ತಂಗಿ ಪೂಜಾ; ಅಕ್ಕನಂತೆ ಮಿಂಚಲು ಸಾಧ್ಯವೇ?

ನಾಗ ಚೈತನ್ಯ ಜತೆ ಸಾಯಿ ಪಲ್ಲವಿ ಲಿಪ್​ ಲಾಕ್​ ಮಾಡಿದ್ದು ನಿಜವೇ? ‘ಲವ್​ ಸ್ಟೋರಿ’ ಹಿಂದಿನ ಸತ್ಯ ಬಾಯ್ಬಿಟ್ಟ ನಟಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada