ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ತಂಗಿ ಪೂಜಾ; ಅಕ್ಕನಂತೆ ಮಿಂಚಲು ಸಾಧ್ಯವೇ?

Sai Pallavi | Pooja Kannan: ಸಾಯಿ ಪಲ್ಲವಿ ಮತ್ತು ಪೂಜಾ ಕಣ್ಣನ್​ ಅವರು ನೋಡಲು ಒಂದೇ ರೀತಿ ಇದ್ದಾರೆ. ತಕ್ಷಣಕ್ಕೆ ನೋಡಿದರೆ ಇವರಲ್ಲಿ ಸಾಯಿ ಪಲ್ಲವಿ ಯಾರು ಎಂದು ಪ್ರಶ್ನೆ ಮೂಡುವಷ್ಟು ಸಾಮ್ಯತೆ ಅವರಿಬ್ಬರಲ್ಲಿ ಇದೆ.

ಚಿತ್ರರಂಗಕ್ಕೆ ಕಾಲಿಟ್ಟ ಸಾಯಿ ಪಲ್ಲವಿ ತಂಗಿ ಪೂಜಾ; ಅಕ್ಕನಂತೆ ಮಿಂಚಲು ಸಾಧ್ಯವೇ?
ಪೂಜಾ ಕಣ್ಣನ್, ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ (Sai Pallavi) ಅವರು ಚಿತ್ರರಂಗದಲ್ಲಿ ಮಾಡಿರುವ ಸಾಧನೆ ದೊಡ್ಡದು. ಈಗಾಗಲೇ ಅವರು ಬಹುಭಾಷಾ ಕಲಾವಿದೆಯಾಗಿ ಮಿಂಚಿದ್ದಾರೆ. ಟಾಲಿವುಡ್​, ಕಾಲಿವುಡ್​, ಮಲಯಾಳಂ ಸಿನಿಮಾಗಳಲ್ಲಿ ಸ್ಟಾರ್​ ನಟರಿಗೆ ಅವರು ಜೋಡಿಯಾಗಿ ನಟಿಸಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಸಖತ್​ ಕಾಳಜಿ ವಹಿಸುತ್ತಾರೆ. ಅತಿಯಾದ ಗ್ಲಾಮರ್​ ಎಂದರೆ ಅವರಿಗೆ ಅಲರ್ಜಿ. ನಟನೆಯ ಮೂಲಕವೇ ಅವರು ಜನರ ಮನ ಗೆದ್ದಿದ್ದಾರೆ. ವಿಶೇಷ ಏನೆಂದರೆ ಈಗ ಅವರ ಸಹೋದರಿ ಪೂಜಾ ಕಣ್ಣನ್​ (Pooja Kannan) ಅವರು ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರ ಮೊದಲ ಸಿನಿಮಾ ‘ಚಿತ್ತಿರ ಚೆವ್ವಾನಂ’ (Chithirai Sevvanam) ರಿಲೀಸ್​ಗೆ ಸಿದ್ಧವಾಗಿದೆ. ಆ ಮೂಲಕ ಅವರು ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಅಕ್ಕ ಸಾಯಿ ಪಲ್ಲವಿ ರೀತಿಯೇ ಪೂಜಾ ಕೂಡ ಮಿಂಚುತ್ತಾರಾ ಎಂಬ ಕೌತುಕ ಎಲ್ಲರಲ್ಲೂ ಮನೆ ಮಾಡಿದೆ.

ವಿಶೇಷ ಏನೆಂದರೆ ಸಾಯಿ ಪಲ್ಲವಿ ಮತ್ತು ಪೂಜಾ ಕಣ್ಣನ್​ ಅವರು ನೋಡಲು ಒಂದೇ ರೀತಿ ಇದ್ದಾರೆ. ತಕ್ಷಣಕ್ಕೆ ನೋಡಿದರೆ ಇವರಲ್ಲಿ ಸಾಯಿ ಪಲ್ಲವಿ ಯಾರು ಎಂಬ ಪ್ರಶ್ನೆ ಮೂಡುವಷ್ಟು ಸಾಮ್ಯತೆ ಅವರಿಬ್ಬರಲ್ಲಿ ಇದೆ. ಇದು ಪೂಜಾಗೆ ಪ್ಲಸ್​ ಮತ್ತು ಮೈನಸ್​ ಎರಡೂ ಆಗಬಹುದು. ಅಕ್ಕನ ಜೊತೆಗೆ ಅವರನ್ನು ಹೋಲಿಸುವ ಸಾಧ್ಯತೆ ದಟ್ಟವಾಗಿರುತ್ತದೆ. ಆ ಎಲ್ಲ ಸವಾಲನ್ನು ಸ್ವೀಕರಿಸಲು ಸಿದ್ಧರಾಗಿಯೇ ಪೂಜಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಈಗ ‘ಚಿತ್ತಿರ ಚೆವ್ವಾನಂ’ ಸಿನಿಮಾದ ಫಸ್ಟ್​ ಲುಕ್ ಮೋಷನ್​ ಪೋಸ್ಟರ್​​ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಖ್ಯಾತ ನಟ-ನಿರ್ದೇಶಕ ಸಮುದ್ರಖಣಿ ಅವರು ಪೂಜಾ ಕಣ್ಣನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಂದೆ-ಮಗಳ ಪಾತ್ರದಲ್ಲಿ ಅವರಿಬ್ಬರು ಅಭಿನಯಿಸಿದ್ದಾರೆ. ಸಾಹಸ ನಿರ್ದೇಶಕ ಸ್ಟಂಟ್​ ಸಿಲ್ವಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಾಯಿ ಪಲ್ಲವಿ ಸಹೋದರಿಯ ಈ ಸಿನಿಮಾಗೆ ಎಲ್ಲ ಭಾಷೆಯ ಸ್ಟಾರ್​ ಕಲಾವಿದರಿಂದ ಬೆಂಬಲ ಸಿಗುತ್ತಿದೆ. ಮಾಲಿವುಡ್​ ಸ್ಟಾರ್​ ನಟ ಮೋಹನ್​ಲಾಲ್ ಮತ್ತು ಕಾಲಿವುಡ್​ ನಟ ಧನುಷ್​​​​ ಅವರು ಈ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ.

 

View this post on Instagram

 

A post shared by Pooja Kannan (@poojakannan_97)

ಸ್ಯಾಮ್​ ಸಿ.ಎಸ್​. ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ನೇರವಾಗಿ ಓಟಿಟಿ ಪ್ಲಾಟ್​ಫಾರ್ಮ್​ ಮೂಲಕ ಬಿಡುಗಡೆ ಆಗಲಿದೆ. ಡಿ.3ರಿಂದ ಜೀ5 ಆ್ಯಪ್​ನಲ್ಲಿ ‘ಚಿತ್ತಿರ ಚೆವ್ವಾನಂ’ ಚಿತ್ರ ವೀಕ್ಷಣಗೆ ಲಭ್ಯವಾಗಲಿದೆ. ನಟಿ ಅನುಪಮಾ ಪರಮೇಶ್ವರನ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪೂಜಾ ಕಣ್ಣನ್​ಗೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

ಇದನ್ನೂ ಓದಿ:

Shyam Singha Roy Teaser: ಶ್ಯಾಮ್ ಸಿಂಗಾ ರಾಯ್ ಟೀಸರ್ ರಿಲೀಸ್; ನಾನಿ, ಸಾಯಿ ಪಲ್ಲವಿ ನಟನೆಗೆ ಫ್ಯಾನ್ಸ್ ಫಿದಾ

‘ನೀವು ಸಾಯಿ ಪಲ್ಲವಿಯನ್ನು ಮದುವೆಯಾಗಿ, ಅವರೇ ಸರಿಯಾದ ಜೋಡಿ’; ವಿಚ್ಛೇದನದ ದಿನವೇ ನಾಗ ಚೈತನ್ಯಗೆ ಹೊಸ ಸಲಹೆ

Click on your DTH Provider to Add TV9 Kannada