Shyam Singha Roy Teaser: ಶ್ಯಾಮ್ ಸಿಂಗಾ ರಾಯ್ ಟೀಸರ್ ರಿಲೀಸ್; ನಾನಿ, ಸಾಯಿ ಪಲ್ಲವಿ ನಟನೆಗೆ ಫ್ಯಾನ್ಸ್ ಫಿದಾ

Sai Pallavi: ನಾನಿ, ಸಾಯಿ ಪಲ್ಲವಿ ಹಾಗೂ ಕೃತಿ ಶೆಟ್ಟಿ ಅಭಿನಯ ಬಹು ನಿರೀಕ್ಷಿತ ‘ಶ್ಯಾಮ್ ಸಿಂಗ್ ರಾಯ್‘ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೊಂಡಿರುವ ಟೀಸರ್​, ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

Shyam Singha Roy Teaser: ಶ್ಯಾಮ್ ಸಿಂಗಾ ರಾಯ್ ಟೀಸರ್ ರಿಲೀಸ್; ನಾನಿ, ಸಾಯಿ ಪಲ್ಲವಿ ನಟನೆಗೆ ಫ್ಯಾನ್ಸ್ ಫಿದಾ
‘ಶ್ಯಾಮ್ ಸಿಂಗಾ ರಾಯ್’ ಚಿತ್ರದ ಪೋಸ್ಟರ್
Follow us
TV9 Web
| Updated By: shivaprasad.hs

Updated on: Nov 18, 2021 | 1:00 PM

ಟಾಲಿವುಡ್ ನಟ ನಾನಿ (Nani) ‘ಶ್ಯಾಮ್ ಸಿಂಗ್ ರಾಯ್’ ಚಿತ್ರದ ಮೂಲಕ ವೃತ್ತಿ ಜೀವನದ ಮತ್ತೊಂದು ಆಯಾಮಕ್ಕೆ ತೆರೆದುಕೊಂಡಿದ್ದಾರೆ. ಬಹು ನಿರೀಕ್ಷಿತ, ಬಿಗ್ ಬಜೆಟ್ ಚಿತ್ರವಾಗಿರುವ ‘ಶ್ಯಾಮ್ ಸಿಂಗ್ ರಾಯ್’ (Shyam Singh Roy) ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ. ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿರುವ ನಾನಿ ಅಭಿನಯಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಅಚ್ಚರಿಯ ವಿಚಾರವೆಂದರೆ ಬಂಗಾಳಿ ನೆಲದಲ್ಲಿ ನಡೆಯುವ ಈ ಕತೆಗೆ ನಾನಿ ಬಂಗಾಳಿ ಸಂಭಾಷಣೆ ಹೇಳಿರುವ ತುಣುಕು ಟೀಸರ್​ನಲ್ಲಿದ್ದು, ಅವರ ಸ್ಪಷ್ಟತೆಗೆ ವೀಕ್ಷಕರಿಂದ ಫುಲ್ ಮಾರ್ಕ್ಸ್ ಸಿಕ್ಕಿದೆ. ಟೀಸರ್​ನಲ್ಲಿ ಎಲ್ಲರ ಗಮನ ಸೆಳೆದಿರುವ ಮತ್ತೊಂದು ವಿಚಾರವೆಂದರೆ ಸಾಯಿ ಪಲ್ಲವಿ (Sai Pallavi) ಹಾಗೂ ಕೃತಿ ಶೆಟ್ಟಿ (Kriti Shetty) ಅಭಿನಯ. ಈಗಾಗಲೇ ವಿಶಿಷ್ಟ ಪಾತ್ರಗಳಿಂದ ತಮ್ಮದೇ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿರುವ ಸಾಯಿ ಪಲ್ಲವಿ ಈ ಚಿತ್ರದಲ್ಲೂ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಟೀಸರ್ ಒಟ್ಟು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಕನ್ನಡದಲ್ಲೂ ಗುಣಮಟ್ಟದ ಟೀಸರ್ ಮೂಡಿಬಂದಿದೆ. ರಾಹುಲ್ ಸಾಂಕೃತ್ಯಾನ್ (Rahul Sankrityan) ನಿರ್ದೇಶಿಸಿರುವ ಈ ಚಿತ್ರವನ್ನು ವೆಂಕಟ್ ಬೋಯನಪಲ್ಲಿ (Venkat Boyanapalli) ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಮೂರು ಮಂದಿ ನಾಯಕಿಯರು ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ, ಕೃತಿ ಶೆಟ್ಟಿ ಅವರೊಂದಿಗೆ ಮಡೋನ್ನಾ ಸೆಬಾಸ್ಟಿಯನ್ (Madonna Sebastian) ಕೂಡ ಬಣ್ಣಹಚ್ಚಿದ್ದಾರೆ.

ಚಿತ್ರದ ಕನ್ನಡ ಟೀಸರ್ ಇಲ್ಲಿದೆ:

ಶ್ಯಾಮ್ ಸಿಂಗ್ ರಾಯ್ ಚಿತ್ರದ ಮೂಲ ತೆಲುಗು ಟೀಸರ್ ಇಲ್ಲಿದೆ:

‘ಶ್ಯಾಮ್ ಸಿಂಗ್ ರಾಯ್’ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಬಂಗಾಳಿ ನೆಲದಲ್ಲಿ ಕತೆ ನಡೆಯುವುದಿದ್ದರೂ ಕೂಡ ಚಿತ್ರ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ತೆಲುಗು, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಡಿಸೆಂಬರ್ 24ರಂದು ಚಿತ್ರ ತೆರೆಗೆ ಬರಲಿದೆ.

ಟೀಸರ್ ಕುರಿತು ನಾನಿ ಹಂಚಿಕೊಂಡ ಟ್ವೀಟ್:

ರಾಹುಲ್ ರವೀಂದ್ರನ್, ಮುರಳಿ ಶರ್ಮ, ಅಭಿನವ್ ಗೊಮತಮ್ ಮೊದಲಾದ ಕಲಾವಿದರು ಚಿತ್ರದಲ್ಲಿ ಬಣ್ಣಹಚ್ಚಲಿದ್ದಾರೆ. ಕ್ರಿಸ್​ಮಸ್ ಸಂದರ್ಭದಲ್ಲಿ ಸಾಲುಸಾಲು ರಜೆ ಇರುವ ಕಾರಣ, ಅದೇ ಅವಧಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ. ಕ್ರಿಸ್​ಮಸ್ ಸಮಯದಲ್ಲಿಯೇ ಹಲವು ಬಿಗ್ ಬಜೆಟ್ ಚಿತ್ರಗಳೂ ಬಿಡುಗಡೆಯಾಗಲಿವೆ.

ಇದನ್ನೂ ಓದಿ:

Nayanthara- Vignesh Shivan: ಹುಟ್ಟುಹಬ್ಬಕ್ಕೆ ಗೆಳೆಯ ನೀಡಿದ ಅದ್ದೂರಿ ಸರ್ಪ್ರೈಸ್​ಗೆ ನಯನತಾರಾ ಫಿದಾ; ವಿಡಿಯೋ ನೋಡಿ

ಅಪ್ರಾಪ್ತೆ ಬಟ್ಟೆ ಧರಿಸಿದ್ದಾಗ ಆಕೆಯ ಖಾಸಗಿ ಅಂಗ ಸ್ಪರ್ಶಿಸಿದರೂ ಪೋಕ್ಸೋ ಕಾಯ್ದೆಯಡಿಯೇ ಕೇಸ್​ ದಾಖಲಾಗಬೇಕು: ಸುಪ್ರೀಂಕೋರ್ಟ್​

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ