ಅಪ್ರಾಪ್ತೆ ಬಟ್ಟೆ ಧರಿಸಿದ್ದಾಗ ಆಕೆಯ ಖಾಸಗಿ ಅಂಗ ಸ್ಪರ್ಶಿಸಿದರೂ ಪೋಕ್ಸೋ ಕಾಯ್ದೆಯಡಿಯೇ ಕೇಸ್​ ದಾಖಲಾಗಬೇಕು: ಸುಪ್ರೀಂಕೋರ್ಟ್​

ಬಾಂಬೆ ಹೈಕೋರ್ಟ್​​ನ ತೀರ್ಪಿನ ಮರುಪರಿಶೀಲನೆ ಮಾಡಿದ ಸುಪ್ರೀಂಕೋರ್ಟ್​​, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಬಂದಿರುವ ಕಾಯ್ದೆಯನ್ನು ಹೀಗೆ ಅರ್ಥೈಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಅಪ್ರಾಪ್ತೆ ಬಟ್ಟೆ ಧರಿಸಿದ್ದಾಗ ಆಕೆಯ ಖಾಸಗಿ ಅಂಗ ಸ್ಪರ್ಶಿಸಿದರೂ ಪೋಕ್ಸೋ ಕಾಯ್ದೆಯಡಿಯೇ ಕೇಸ್​ ದಾಖಲಾಗಬೇಕು: ಸುಪ್ರೀಂಕೋರ್ಟ್​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Nov 18, 2021 | 12:33 PM

ದೇಹವನ್ನು ಕೇವಲ ತಡವುವುದು, ಸವರುವುದು ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ. ಅದನ್ನು ಪೋಕ್ಸೋ ಕಾಯ್ದೆಯಡಿ ಪರಿಗಣಿಸಲು ಸಾಧ್ಯವಿಲ್ಲ.  ಲೈಂಗಿಕ ವಾಂಛೆಗಳನ್ನಿಟ್ಟುಕೊಂಡು, ನೇರವಾಗಿ ದೇಹಸಂಪರ್ಕ ಮಾಡುವುದು, ಚರ್ಮದಿಂದ ಚರ್ಮಕ್ಕೆ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಾಗಿದ್ದು, ಈ ಸಂಬಂಧ ಘಟನೆ ನಡೆದಾಗ ಮಾತ್ರ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು  ಎಂದು 2021ರ ಜನವರಿಯಲ್ಲಿ ಬಾಂಬೆ ಹೈಕೋರ್ಟ್​ನ ನಾಗ್ಪುರ ಪೀಠ​ ತೀರ್ಪು ನೀಡಿತ್ತು. ಈ ತೀರ್ಪು ಸ್ವಲ್ಪ ವಿವಾದ ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಂತೂ ಸಿಕ್ಕಾಪಟೆ ಚರ್ಚೆಗೆ ಕಾರಣವಾಗಿತ್ತು. ಆದರೆ ಬಾಂಬೆ ಹೈಕೋರ್ಟ್​​ನ ಆ ತೀರ್ಪನ್ನು ಈಗ ಸುಪ್ರೀಂಕೋರ್ಟ್​ ರದ್ದುಗೊಳಿಸಿದೆ. 

ಬಾಂಬೆ ಹೈಕೋರ್ಟ್​​ನ ತೀರ್ಪಿನ ಮರುಪರಿಶೀಲನೆ ಮಾಡಿದ ಸುಪ್ರೀಂಕೋರ್ಟ್​​ ನ್ಯಾಯಮೂರ್ತಿಗಳಾದ ಯುಯು ಲಲಿತ್​, ಎಸ್​.ರವೀಂದ್ರ ಭಟ್​ ಮತ್ತು ಬೇಲಾ ತ್ರಿವೇದಿ ಅವರನ್ನೊಳಗೊಂಡ ಪೀಠ,  ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಾಗಿ ಬಂದಿರುವ ಕಾಯ್ದೆಯನ್ನು ಹೀಗೆ ಅರ್ಥೈಸುವುದು ಸರಿಯಲ್ಲ. ಇಲ್ಲಿ ಸ್ಪರ್ಶ ಎಂಬ ಶಬ್ದವನ್ನು ಕೇವಲ ಚರ್ಮದಿಂದ ಚರ್ಮಕ್ಕೆ (Skin to Skin)ಎಂದು ಸೀಮಿತವಾಗಿ ಬಳಸಬಾರದು. ಹೀಗೆ ಮಾಡುವುದು ತೀರ ಸಂಕುಚಿತ ಮತ್ತು ಅಸಂಬದ್ಧ ವ್ಯಾಖ್ಯಾನ ಎನ್ನಿಸಿಕೊಳ್ಳುತ್ತದೆ. ಕಾಯ್ದೆಯ ಉದ್ದೇಶವೇ ನಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಲೈಂಗಿಕವಾಗಿ ಬಳಸಿಕೊಳ್ಳುವ ಆಶಯವನ್ನಿಟ್ಟುಕೊಂಡು, ಅಪ್ರಾಪ್ತೆಯನ್ನು ಆಕೆ ತೊಟ್ಟಿದ್ದ ಬಟ್ಟೆಯ ಮೇಲಿಂದ ಸ್ಪರ್ಶಿಸಿದರೂ ಅದು ಪೋಕ್ಸೋ ಕಾಯ್ದೆಯಡಿಯೇ ಅಪರಾಧವೆನಿಸಿಕೊಳ್ಳುತ್ತದೆ. ಅತ್ಯಂತ ಸರಳವಾಗಿ ಇರುವ ವಿಷಯಗಳಲ್ಲಿ ಅಸ್ಪಷ್ಟತೆಯನ್ನು ಹುಡುಕುವ ಕೆಲಸವನ್ನು ನ್ಯಾಯಾಲಯಗಳು ಎಂದಿಗೂ ಮಾಡಬಾರದು ಎಂದು ಹೇಳಿರುವ ಸುಪ್ರೀಂಕೋರ್ಟ್​, ನಿಬಂಧನೆಗಳ ಉದ್ದೇಶವನ್ನೇ ಮರೆಮಾಚುವ ಸಂಕುಚಿತ ವ್ಯಾಖ್ಯಾನಗಳುಳ್ಳ ತೀರ್ಪುಗಳನ್ನು ಯಾವ ಕಾರಣಕ್ಕೂ ಮಾನ್ಯ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಈ ಬಾರಿಯ ಜನವರಿ 12ರಂದು ಬಾಂಬೆ​ ಹೈಕೋರ್ಟ್​ನ ನಾಗ್ಪುರ ಪೀಠದ ನ್ಯಾಯಾಧೀಶರಾದ ಪುಷ್ಪಾ ಗನೇಡಿವಾಲಾ ಎಂಬುವರು ಹೀಗೊಂದು ತೀರ್ಪು ಪ್ರಕಟಿಸಿದ್ದರು. 12 ವರ್ಷದ ಬಾಲಕಿಗೆ ಪೇರಲೆ ಹಣ್ಣಿನ ಆಮಿಷ ತೋರಿಸಿ ಮನೆಗೆ ಕರೆದಿದ್ದ ವ್ಯಕ್ತಿಯೊಬ್ಬ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಹೀಗೆಂದು ಬಾಲಕಿಯ ತಾಯಿಯೇ ದೂರು ನೀಡಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾ.ಪುಷ್ಪಾ ಗನೇಡಿವಾಲಾ, ಅಪ್ರಾಪ್ತೆ ಜತೆ ಬಲವಂತವಾಗಿ ಸಂಭೋಗ ನಡೆಸುವುದು, ಆಕೆಯ ಖಾಸಗಿ ಅಂಗಗಳನ್ನು ಲೈಂಗಿಕ ಉದ್ದೇಶದಿಂದ ಸ್ಪರ್ಶಿಸುವುದು ಮತ್ತು ಅಪ್ರಾಪ್ತೆಯಿಂದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗಗಳನ್ನು ಸ್ಪರ್ಶಿಸಿಕೊಳ್ಳುವುದು POCSOಕಾಯ್ದೆಯಡಿ ಅಪರಾಧ ಎನಿಸಿಕೊಳ್ಳುತ್ತದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ ನ್ಯಾಯಾಧೀಶೆ ಪುಷ್ಪಾ, ಪ್ರಸ್ತುತ ಪ್ರಕರಣ ಹೀಗಿಲ್ಲ. ಇಲ್ಲಿ ಆರೋಪಿಯು 12 ವರ್ಷದ ಬಾಲಕಿಯ ಸ್ತನವನ್ನು ಸ್ಪರ್ಶಿಸುವಾಗ ಆಕೆಯ ಬಟ್ಟೆಯನ್ನು ತೆಗೆಯಲಿಲ್ಲ. ನೇರವಾಗಿ ದೈಹಿಕ ಸಂಪರ್ಕ ಹೊಂದಲಿಲ್ಲ. ಹಾಗಾಗಿ ಈ ಪ್ರಕರಣ POCSO ಕಾಯ್ದೆಯಡಿ ಬರುವುದಿಲ್ಲ ಎಂದಿದ್ದರು.

ಆದರೆ ಈ ತೀರ್ಪಿನ ವಿರುದ್ಧ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಎನ್‌ಸಿಡಬ್ಲ್ಯೂ ಮತ್ತು ಮಹಾರಾಷ್ಟ್ರ ರಾಜ್ಯ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದವು.  ಅದಾದ ಬಳಿಕ ಬಾಂಬೆ ಹೈಕೋರ್ಟ್​​ನ ತೀರ್ಪಿಗೆ ತಾತ್ಕಾಲಿಕ ತಡೆಯನ್ನೂ ಸರ್ವೋಚ್ಛ ನ್ಯಾಯಾಲಯ ನೀಡಿತ್ತು. ಇದೀಗ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠ, ಬಾಂಬೆ ಹೈಕೋರ್ಟ್​​ನ ತೀರ್ಪನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಪ್ರಸ್ತುತ ಪ್ರಕರಣ ಪೋಕ್ಸೋ ಕಾಯ್ದೆಯಡಿಯೇ ಬರುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ವಸೂಲಿಗಿಳಿದು ತಗಲಾಕ್ಕೊಂಡ ಹೊಯ್ಸಳ ಸಿಬ್ಬಂದಿ; ವಿಡಿಯೋ ವೈರಲ್

Published On - 12:32 pm, Thu, 18 November 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ