ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ವಸೂಲಿಗಿಳಿದು ತಗಲಾಕ್ಕೊಂಡ ಹೊಯ್ಸಳ ಸಿಬ್ಬಂದಿ; ವಿಡಿಯೋ ವೈರಲ್

ಅಂಗಡಿ ಮಾಲೀಕರಿಂದ ಪೊಲೀಸ್ ಹಣ ವಸೂಲಿ ಮಾಡಿದ ಸ್ಥಳದಲ್ಲೇ ಯುವಕ ಪಡೆದ ಹಣವನ್ನ ವಾಪಾಸ್ ಕೊಡಿಸಿದ್ದಾನೆ. ಮಹಿಳೆ ಹೊಯ್ಸಳ ಸಿಬ್ಬಂದಿಗೆ ಹಣ ನೀಡಿದ್ದಾರೆ.

TV9kannada Web Team

| Edited By: sandhya thejappa

Nov 18, 2021 | 2:07 PM

ಬೆಳ್ಳಂಬೆಳಗ್ಗೆ ಹಣ ವಸೂಲಿಗಿಳಿದು ಓರ್ವ ಪೊಲೀಸ್ ತಗಲಾಕ್ಕೊಂಡಿದ್ದಾರೆ. ಅಂಗಡಿ ಮಾಲೀಕರಿಂದ ಪೊಲೀಸರು ಹಣ ವಸೂಲಿ ಮಾಡಿದ್ದರು. ಆದರೆ ಯುವಕನೊಬ್ಬ ಹೊಯ್ಸಳ ಸಿಬ್ಬಂದಿಯಿಂದ ಹಣವನ್ನು ವಾಪಾಸ್ ಕೊಡಿಸಿದ್ದಾನೆ. ಅಂಗಡಿ ಮಾಲೀಕರಿಂದ ಪೊಲೀಸ್ ಹಣ ಪಡೆಯುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಮಾರತ್ತಹಳ್ಳಿ ಫ್ಲೈಓವರ್ ಬಳಿ ಈ ಘಟನೆ ನಡೆದಿದೆ. ಅಂಗಡಿ ಮಾಲೀಕರಿಂದ ಪೊಲೀಸ್ ಹಣ ವಸೂಲಿ ಮಾಡಿದ ಸ್ಥಳದಲ್ಲೇ ಯುವಕ ಪಡೆದ ಹಣವನ್ನ ವಾಪಾಸ್ ಕೊಡಿಸಿದ್ದಾನೆ. ಮಹಿಳೆ ಹೊಯ್ಸಳ ಸಿಬ್ಬಂದಿಗೆ ಹಣ ನೀಡಿದ್ದಾರೆ. ಹಣ ನೀಡಿ ವಾಪಾಸ್ ಹೋಗುತ್ತಿದ್ದಂತೆ ಪೊಲೀಸ್ ಬಳಿ ಯುವಕ ಹೋಗಿ ಸರ್ ಸರ್ ಎಂದು ಕರೆದು ಏನ್ ತೆಗೆದುಕೊಂಡಿದ್ದೀರಿ ಅಂತ ಕೇಳಿದ್ದಾನೆ. ನಂತರ ತೆಗೆದುಕೊಂಡ ಹಣ ವಾಪಾಸ್ ಕೊಡಿ ಅಂತ ಯುವಕ ಕೇಳಿದ್ದಾನೆ. ಯುವಕ ಹೇಳುತ್ತದ್ದಂತೆ ವಸೂಲಿ ಮಾಡಿದ್ದ ಹಣವನ್ನು ಪೊಲೀಸ್ ಮಹಿಳೆಗೆ ವಾಪಾಸ್ ನೀಡಿ ಹೊರಟಿದ್ದಾರೆ.

Follow us on

Click on your DTH Provider to Add TV9 Kannada