ಹೊತ್ತಿಕೊಂಡಿದ್ದ ಕಾರು ಅಗ್ನಿಶಾಮಕ ದಳ ಬಂದು ಬೆಂಕಿ ಅರಿಸುವಾಗಲೇ ಬ್ಲಾಸ್ಟ್ ಆಗಿದ್ದು ದುರಾದೃಷ್ಟವೇ!

ಮನೆಯಲ್ಲಿ ಮಲಗಿದ್ದ ಕುಟುಂಬದ ಸದಸ್ಯರಿಗೆ ಅದು ಗೊತ್ತಾಗಿ ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದಾರೆ. ಫೈರ್ ಎಂಜಿನ್ ಕೂಡಲೇ ಸ್ಥಳಕ್ಕೆ ಧಾವಿಸಿದೆ. ಸಿಬ್ಬಂದಿ ಕಾರಿಗೆ ಹೊತ್ತಿದ್ದ ಬೆಂಕಿಯನ್ನು ಆರಿಸಲು ಮುಂದಾಗುತ್ತಿದ್ದಂತೆಯೇ ಕಾರು ಬ್ಲಾಸ್ಟ್ ಆಗಿಬಿಟ್ಟಿದೆ.

ಚಲಿಸುತ್ತಿರುವ ಕಾರಿಗೆ ಧಗ್ಗನೆ ಬೆಂಕಿ ಹೊತ್ತಿಕೊಳ್ಳೋದು, ಅದೃಷ್ಟವಂತರು ಅಪಾಯದಿಂದ ಪಾರಾಗುವುದು, ಅದೃಷ್ಟಹೀನರು ಮೈಕೈ ಸುಟ್ಟುಕೊಂಡು ಆಸ್ಪತ್ರೆ ಸೇರುವುದು, ತೀರ ಅಪಾಯಕಾರಿ ಸಂದರ್ಭಗಳಲ್ಲಿ ಕಾರಿನ ಜೊತೆ ಬೆಂಕಿಗಾಹಾಹುತಿ ಆಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಹಾಗೆಯೇ ಮನೆ ಮುಂದೆ ಪಾರ್ಕ್ ಮಾಡಿರುವ ಕಾರುಗಳಿಗೆ ಕೆಲ ವಿಕೃತಿ ಮನಸ್ಥಿತಿಯ ಜನರು ಕೊಳ್ಳಿ ಇಡುವ ಸಂಗತಿಗಳು ಸಹ ಬೆಂಗಳೂರು ಮತ್ತು ಇತರ ಸ್ಥಳಗಳಲ್ಲಿ ವರದಿಯಾಗುತ್ತಿವೆ. ಕಾರು ಪ್ರತಿಷ್ಠೆಯ ಪ್ರತೀಕ ಎನ್ನುತ್ತ್ತಿದ್ದ ಕಾಲ ಹಿಂದೆ ಉಳಿದು ಬಿಟ್ಟಿದೆ. ಜಮಾನಾ ಈಗ ಬದಲಾಗಿದ್ದು ಕಾರು ನಮ್ಮ ಅಗತ್ಯಗಳ ಭಾಗವಾಗಿಬಿಟ್ಟಿದೆ. ಹಾಗಾಗೇ, ಜನ ಸಾಲ ಸೋಲ ಮಾಡಿ ಕಾರನ್ನು ಕೊಳ್ಳುತ್ತಾರೆ. ಅದು ಮನೆಯಿಂದ ಬಂದು ನಿಂತಾಗ ಹೆಮ್ಮೆಯಿಂದ ಬೀಗುತ್ತಾರೆ.

ಒಮ್ಮೆ ಕಾರು ಮನೆಗೆ ಬಂತು ಅಂತಾದರೆ, ಸಹಜವಾಗೇ ನಮ್ಮ ಗಮನ ಅದರ ಮೇಲಿರುತ್ತದೆ. ಅದನ್ನು ಬಹಳ ಜತನದಿಂದ ಇಟ್ಟುಕೊಳ್ಳುತ್ತೇವೆ. ಅದರೆ, ರಾತ್ರಿ ಸಮಯದಲ್ಲಿ ಮನೆ ಮುಂದೆ ಪಾರ್ಕ್ ಆಗಿದ್ದ ನಮ್ಮ ಕಾರಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡರೆ ನಮಗೆ ಬಹಳ ದುಃಖ ಮತ್ತು ಸಂಕಟವಾಗುತ್ತದೆ. ಬೆಂಗಳೂರು ನಗರ ಇಟ್ಟಮಡು ಏರಿಯಾದ ಮಂಜುನಾಥ ನಗರದಲ್ಲಿ ಆಗಿದ್ದು ಅದೇ.

ಕಾರಿನ ಮಾಲೀಕರು ಬುಧವಾರ ರಾತ್ರಿ ತಮ್ಮ ಮನೆಯಲ್ಲಿ ಮಲಗಿದ್ದಾಗ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿ ಮಲಗಿದ್ದ ಕುಟುಂಬದ ಸದಸ್ಯರಿಗೆ ಅದು ಗೊತ್ತಾಗಿ ಅಗ್ನಿಶಾಮಕ ದಳಕ್ಕೆ ಫೋನ್ ಮಾಡಿದ್ದಾರೆ. ಫೈರ್ ಎಂಜಿನ್ ಕೂಡಲೇ ಸ್ಥಳಕ್ಕೆ ಧಾವಿಸಿದೆ. ಸಿಬ್ಬಂದಿ ಕಾರಿಗೆ ಹೊತ್ತಿದ್ದ ಬೆಂಕಿಯನ್ನು ಆರಿಸಲು ಮುಂದಾಗುತ್ತಿದ್ದಂತೆಯೇ ಕಾರು ಬ್ಲಾಸ್ಟ್ ಆಗಿಬಿಟ್ಟಿದೆ.

ಇದು ನಿಜಕ್ಕೂ ದುರಾದೃಷ್ಟವೇ. ಕಾರಿನ ಮಾಲೀಕರು ತಲೆಮೇಲೆ ಕೈಹೊತ್ತು ಕೂತಿದ್ದನ್ನು ನೋಡಿದವರಿಗೆ ವಿಷಾದವೆನಿಸುತ್ತಿತ್ತು.

ಇದನ್ನೂ ಓದಿ:   Nayanthara- Vignesh Shivan: ಹುಟ್ಟುಹಬ್ಬಕ್ಕೆ ಗೆಳೆಯ ನೀಡಿದ ಅದ್ದೂರಿ ಸರ್ಪ್ರೈಸ್​ಗೆ ನಯನತಾರಾ ಫಿದಾ; ವಿಡಿಯೋ ನೋಡಿ

Click on your DTH Provider to Add TV9 Kannada