AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nayanthara- Vignesh Shivan: ಹುಟ್ಟುಹಬ್ಬಕ್ಕೆ ಗೆಳೆಯ ನೀಡಿದ ಅದ್ದೂರಿ ಸರ್ಪ್ರೈಸ್​ಗೆ ನಯನತಾರಾ ಫಿದಾ; ವಿಡಿಯೋ ನೋಡಿ

Nayanthara Birthday: ಗೆಳತಿ ನಯನತಾರಾ ಜನ್ಮದಿನವನ್ನು ವಿಘ್ನೇಶ್ ಶಿವನ್ ಅದ್ದೂರಿಯಾಗಿ ಆಯೋಜಿಸಿದ್ದು, ಹಲವು ಸರ್ಪ್ರೈಸ್​ಗಳನ್ನು ನೀಡಿದ್ದಾರೆ. ಅಲ್ಲದೇ ಹೊಸ ಚಿತ್ರದಲ್ಲಿ ನಯನತಾರಾ ಪಾತ್ರವನ್ನೂ ಪರಿಚಯಿಸಿದ್ದಾರೆ.

Nayanthara- Vignesh Shivan: ಹುಟ್ಟುಹಬ್ಬಕ್ಕೆ ಗೆಳೆಯ ನೀಡಿದ ಅದ್ದೂರಿ ಸರ್ಪ್ರೈಸ್​ಗೆ ನಯನತಾರಾ ಫಿದಾ; ವಿಡಿಯೋ ನೋಡಿ
ನಯನತಾರಾ- ವಿಘ್ನೇಶ್ ಶಿವನ್, ‘ಕಾಥುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಯನತಾರಾ
TV9 Web
| Updated By: shivaprasad.hs|

Updated on:Nov 18, 2021 | 12:01 PM

Share

‘ಲೇಡಿ ಸೂಪರ್​ಸ್ಟಾರ್’ (Lady Superstar) ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ನಯನತಾರಾ (Nayanthara) ಜನ್ಮದಿನವಿಂದು. ನಟಿ ಇಂದು (ನವೆಂಬರ್ 18) 37ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಸರ್ಪ್ರೈಸ್ ಪಾರ್ಟಿಯ ಮೂಲಕ, ಅದ್ದೂರಿ ಜನ್ಮದಿನ ಆಚರಿಸಲು ಕಾರಣರಾದವರು, ನಯನತಾರಾ ಗೆಳೆಯ ವಿಘ್ನೇಶ್ ಶಿವನ್ (Vighnesh Sivan). ಕೇಕ್ ಕಟ್ ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ನಯನತಾರಾ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ಜೋಡಿ ಜನ್ಮದಿನ ಆಚರಿಸುತ್ತಿರುವ ವಿಡಿಯೋಗಳು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅಲ್ಲದೇ ವಿಘ್ನೇಶ್ ಶಿವನ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನಯನತಾರಾ ಕಾಣಿಸಿಕೊಳ್ಳಲಿದ್ದು, ಸುಂದರವಾದ ಪೋಸ್ಟರ್ ಮುಖಾಂತರವೂ ವಿಘ್ನೇಶ್ ಶುಭಾಶಯ ಕೋರಿದ್ದಾರೆ. ಈ ಮೂಲಕ ತಮ್ಮ ಗೆಳತಿಯ ಜನ್ಮದಿನವನ್ನು ಸ್ಮರಣೀಯವಾಗಿಸಿದ್ದಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ‘ನಾನು ರೌಡಿದಾನ್’ ಚಿತ್ರದ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದಿದ್ದರು. ಬರೋಬ್ಬರಿ ಆರು ವರ್ಷಗಳ ಕಾಲ ಜೊತೆಯಲ್ಲೇ ಸುತ್ತಾಡಿದ್ದ ಈ ಜೋಡಿ, ಈ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಅದಾಗ್ಯೂ ಮದುವೆಯ ದಿನಾಂಕವನ್ನು ಮಾತ್ರ ಇನ್ನೂ ಘೋಷಿಸಿಲ್ಲ. ‘ನಿಶ್ಚಿತಾರ್ಥದಂತೆ, ಮದುವೆಯನ್ನು ಗುಟ್ಟಾಗಿ ಮಾಡಿಕೊಳ್ಳುವುದಿಲ್ಲ. ಎಲ್ಲರಿಗೂ ತಿಳಿಸಿಯೇ ಮದುವೆಯಾಗುತ್ತೇವೆ’ ಎಂದು ನಯನತಾರಾ ಈ ಹಿಂದೆ ಹೇಳಿದ್ದರು.

ನಯನತಾರಾ ಅದ್ದೂರಿ ಜನ್ಮದಿನಾಚರಣೆಯ ಝಲಕ್ ಇಲ್ಲಿದೆ:

ಪೋಸ್ಟರ್ ಮೂಲಕ ಮತ್ತೊಂದು ಬಿಗ್ ಸರ್ಪ್ರೈಸ್ ನೀಡಿದ ವಿಘ್ನೇಶ್ ಶಿವನ್: ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳುತ್ತಿರುವ ‘ಕಾಥುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ನಯನತಾರಾ ಬಣ್ಣಹಚ್ಚುತ್ತಿದ್ದಾರೆ. ಅದರಲ್ಲಿ ‘ಕಣ್ಮಣಿ’ ಎಂಬ ಪಾತ್ರ ಮಾಡುತ್ತಿರುವ ಅವರಿಗೆ, ವಿಘ್ನೇಶ್ ಶಿವನ್ ಸರ್ಪ್ರೈಸ್ ಪೋಸ್ಟರ್ ಮೂಲಕ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ‘ಚಿತ್ರದಲ್ಲಿರುವ ನನ್ನ ಕಣ್ಮಣಿಯನ್ನು ನಿಮಗೆ ಪರಿಚಯಿಸುತ್ತಿದ್ದೇನೆ’ ಎಂದು ಬರೆದಿರುವ ವಿಘ್ನೇಶ್ ಶಿವನ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಈ ಮೂಲಕ ನಯನತಾರಾಗೆ ಸಾಲು ಸಾಲು ಸರ್ಪ್ರೈಸ್​ಗಳನ್ನು ವಿಘ್ನೇಶ್ ಶಿವನ್ ನೀಡಿದ್ದಾರೆ.

ವಿಘ್ನೇಶ್ ಶಿವನ್ ಹಂಚಿಕೊಂಡ ಪೋಸ್ಟರ್ ಇಲ್ಲಿದೆ:

‘ಕಾಥುವಾಕುಲ ರೆಂಡು ಕಾದಲ್’ ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಖ್ಯಾತ ಕಲಾವಿದರ ದಂಡೇ ಚಿತ್ರದಲ್ಲಿದೆ. ವಿಜಯ್ ಸೇತುಪತಿ, ಸಮಂತಾ ಹಾಗೂ ನಯನತಾರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಡಿಸೆಂಬರ್​​ನಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ:

ಪ್ರಿಯಕರನ​ ಬದಲು ಮರದ ಜತೆ ನಯನತಾರಾ ಮದುವೆ; ಏನಿದು ಸಮಾಚಾರ?

ಬಸ್​ನ ಮೆಟ್ಟಿಲ ಮೇಲೆ ನಿಂತು ಪ್ರಯಾಣ ಮಾಡಿದ ನಯನತಾರಾ-ಸಮಂತಾ; ವಿಡಿಯೋ ವೈರಲ್​

Published On - 11:37 am, Thu, 18 November 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು