ಬಸ್​ನ ಮೆಟ್ಟಿಲ ಮೇಲೆ ನಿಂತು ಪ್ರಯಾಣ ಮಾಡಿದ ನಯನತಾರಾ-ಸಮಂತಾ; ವಿಡಿಯೋ ವೈರಲ್​

ತಮಿಳಿನ ವಿಘ್ನೇಶ್​ ಶಿವನ್​ ನಿರ್ದೇಶನದ ‘ಕಾದು ವಾಕುಲಾ ರೆಂಡು ಕಾದು’ ಸಿನಿಮಾದಲ್ಲಿ ನಯನತಾರಾ, ವಿಜಯ್​ ಸೇತುಪತಿ ಹಾಗೂ ಸಮಂತಾ ನಟಿಸುತ್ತಿದ್ದಾರೆ.

ಬಸ್​ನ ಮೆಟ್ಟಿಲ ಮೇಲೆ ನಿಂತು ಪ್ರಯಾಣ ಮಾಡಿದ ನಯನತಾರಾ-ಸಮಂತಾ; ವಿಡಿಯೋ ವೈರಲ್​
ಬಸ್​ನ ಮೆಟ್ಟಿಲ ಮೇಲೆ ನಿಂತು ಪ್ರಯಾಣ ಮಾಡಿದ ನಯನತಾರಾ-ಸಮಂತಾ; ವಿಡಿಯೋ ವೈರಲ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 24, 2021 | 3:26 PM

ಸೆಲೆಬ್ರಿಟಿ ಪಟ್ಟ ಸಿಕ್ಕ ನಂತರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಕಾಣಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಕಾರಣ, ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿರುತ್ತದೆ. ಪಬ್ಲಿಕ್​ನಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳು ಆಟೋಗ್ರಾಫ್​, ಸೆಲ್ಫಿ ಎಂದು ಮುಗಿ ಬೀಳುತ್ತಾರೆ. ಈ ಕಾರಣಕ್ಕೆ ಸೆಲೆಬ್ರಿಟಿಗಳು ಇಂಥ ಸಾಹಸಕ್ಕೆ ಮುಂದಾಗುವುದಿಲ್ಲ. ಆದರೆ, ಟಾಲಿವುಡ್​ ನಟಿ ಸಮಂತಾ ಅಕ್ಕಿನೇನಿ, ತಮಿಳು ಲೇಡಿ ಸೂಪರ್​ಸ್ಟಾರ್​ ನಯನತಾರಾ ಹಾಗೂ ನಟ ವಿಜಯ್​ ಸೇತುಪತಿ ಈಗ ಬಸ್​ನ ಮೆಟ್ಟಿಲ ಮೇಲೆ ನಿಂತು ಪ್ರಯಾಣ ಮಾಡಿದ್ದಾರೆ. ಸದ್ಯ, ಈ ವಿಡಿಯೋ ಸಖತ್​​ ವೈರಲ್​ ಆಗುತ್ತಿದೆ. ಹಾಗಂತ ಈ ಮೂವರು ಎಲ್ಲಿಯೋ ಪ್ರಯಾಣಕ್ಕೆ ಹೊರಟಿಲ್ಲ. ಬದಲಿಗೆ, ಸಿನಿಮಾಗಾಗಿ ಈ ರೀತಿ ಮಾಡಿದ್ದಾರೆ.

ತಮಿಳಿನ ವಿಘ್ನೇಶ್​ ಶಿವನ್​ ನಿರ್ದೇಶನದ ‘ಕಾದು ವಾಕುಲಾ ರೆಂಡು ಕಾದು’ ಸಿನಿಮಾದಲ್ಲಿ ನಯನತಾರಾ, ವಿಜಯ್​ ಸೇತುಪತಿ ಹಾಗೂ ಸಮಂತಾ ನಟಿಸುತ್ತಿದ್ದಾರೆ. ಈ ಮೂವರನ್ನು ಇದೇ ಮೊದಲ ಬಾರಿಗೆ ಒಂದೇ ಫ್ರೆಮ್​ನಲ್ಲಿ ತರಲಾಗಿದೆ. ಗೋವಾದಲ್ಲಿ ಸಿನಿಮಾ ಶೂಟಿಂಗ್ ಪ್ರಗತಿಯಲ್ಲಿದೆ. ಸದ್ಯ, ಸೆಟ್​ನ ವಿಡಿಯೋ ಲೀಕ್​ ಆಗಿದೆ. ಇದರಲ್ಲಿ, ಬಸ್​ ಫುಟ್​ಬೋರ್ಡ್​ ಮೇಲೆ ನಿಂತು ಈ ಮೂವರು ಸಾಗುತ್ತಿದ್ದಾರೆ.

ನಯನತಾರಾ ಹಾಗೂ ಸಮಂತಾ ಒಂದೇ ತೆರನಾದ ಸೀರೆ ಉಟ್ಟಿದ್ದಾರೆ. ವಿಜಯ್​ ಸೇತುಪತಿ ಬಿಳಿ ಬಣ್ಣದ ಶರ್ಟ್​ ತೊಟ್ಟು ಅದಕ್ಕೆ ಫಾರ್ಮಲ್​ ಪ್ಯಾಂಟ್​ ಧರಿಸಿದ್ದಾರೆ. ಈ ಸಿನಿಮಾ ರೆಟ್ರೋ ಲುಕ್​ನಲ್ಲಿ ಮೂಡಿ ಬರಲಿದೆ ಎನ್ನಲಾಗಿದೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಸಿನಿಮಾ ದೃಶ್ಯಗಳು ಲೀಕ್​ ಆದ ಬಗ್ಗೆ ಚಿತ್ರತಂಡಕ್ಕೆ ಚಿಂತೆ ಕಾಡಿದೆ.

ವಿಘ್ನೇಶ್​ ಶಿವನ್​ ಮತ್ತು ನಯನತಾರಾ ನಡುವಿನ ಪ್ರೇಮ್​ ಕಹಾನಿ ಗುಟ್ಟಾಗಿ ಉಳಿದಿಲ್ಲ. ಪರಸ್ಪರ ಜೊತೆಯಾಗಿ ಕಾಲ ಕಳೆಯುತ್ತಿರುವ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲವನ್ನೂ ಬಹಿರಂಗ ಪಡಿಸಿದ್ದಾರೆ. ಅವರು ಗುಟ್ಟಾಗಿ ಎಂಗೇಜ್​ಮೆಂಟ್​ ಕೂಡ ಮಾಡಿಕೊಂಡಿದ್ದಾರೆ. ಈಗ ಇಬ್ಬರೂ ಮತ್ತೆ ಒಂದೇ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ.

ಇದನ್ನೂ ಓದಿ:Nayanthara: ಗುಟ್ಟಾಗಿ ಎಂಗೇಜ್​ಮೆಂಟ್ ಆದ ನಯನತಾರಾ ಮದುವೆಗೆ ಎಲ್ಲರನ್ನೂ ಕರೀತಾರಂತೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ