‘ದಯವಿಟ್ಟು ಬಿಟ್ಟುಬಿಡಿ’; ಕೈ ಮುಗಿದು ಬೇಡಿಕೊಂಡ ಸಂಜನಾ ಗಲ್ರಾನಿ ತಾಯಿ ರೇಷ್ಮಾ ಗಲ್ರಾನಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜನಾ ಗಲ್ರಾನಿ ತಾಯಿ ರೇಷ್ಮಾ ಗಲ್ರಾನಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಮಗೆ ಸಾಕಾಗಿದೆ. ದಯವಿಟ್ಟು ಬಿಟ್ಟುಬಿಡಿ’ ಎಂದು ಕೈ ಮುಗಿದು ಕೋರಿದ್ದಾರೆ.
ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಡ್ರಗ್ಸ್ ತೆಗೆದುಕೊಂಡಿದ್ದರು ಎನ್ನುವ ವಿಚಾರ ದೃಢವಾಗಿದೆ. ಸಂಜನಾ ಗಲ್ರಾನಿ, ರಾಗಿಣಿ ತಲೆ ಕೂದಲನ್ನು 2020ರ ಅಕ್ಟೋಬರ್ನಲ್ಲಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಬರೋಬ್ಬರಿ 10 ತಿಂಗಳ ಬಳಿಕ ಎಫ್ಎಸ್ಎಲ್ ರಿಪೋರ್ಟ್ ಬಂದಿದೆ. ಇದರಲ್ಲಿ ಅವರು ಡ್ರಗ್ ಸೇವನೆ ಮಾಡಿದ್ದು ಹೌದು ಎಂಬುದು ಗೊತ್ತಾಗಿದೆ. ಈ ಮೂಲಕ ನಟಿಯರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಇನ್ನು, ಕುಟುಂಬದವರು ಮತ್ತೆ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜನಾ ಗಲ್ರಾನಿ ತಾಯಿ ರೇಷ್ಮಾ ಗಲ್ರಾನಿ ಪ್ರತಿಕ್ರಿಯೆ ನೀಡಿದ್ದಾರೆ. ‘ನಮಗೆ ಸಾಕಾಗಿದೆ. ದಯವಿಟ್ಟು ಬಿಟ್ಟುಬಿಡಿ’ ಎಂದು ಕೈ ಮುಗಿದು ಕೋರಿದ್ದಾರೆ.
ಇದನ್ನೂ ಓದಿ: Sandalwood Drug Scandal: ರಾಗಿಣಿ ದ್ವಿವೇದಿ , ಸಂಜನಾ ಗಲ್ರಾನಿ ಡ್ರಗ್ ಸೇವಿಸಿದ್ದು ನಿಜ: FSL ವರದಿಯಲ್ಲಿ ದೃಢ
ರಾಗಿಣಿ ಹಾಗೂ ಸಂಜನಾ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ FSL ವರದಿ ನೋಡಿ ಸಮಾಧಾನವಾಗಿದೆ: ಇಂದ್ರಜಿತ್ ಲಂಕೇಶ್