AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಡ್ಡಿಲ್ಲ ಎಂದು ಗಂಡನನ್ನೇ ಬಿಟ್ಟು ಹೋದ ಪತ್ನಿ? ಗೋಳು ತೋಡಿಕೊಳ್ಳುತ್ತಿರುವ ಕನ್ನಡದ ಹಾಸ್ಯ ಕಲಾವಿದ ರವಿ

ದುಡ್ಡಿಲ್ಲ ಎಂದು ಗಂಡನನ್ನೇ ಬಿಟ್ಟು ಹೋದ ಪತ್ನಿ? ಗೋಳು ತೋಡಿಕೊಳ್ಳುತ್ತಿರುವ ಕನ್ನಡದ ಹಾಸ್ಯ ಕಲಾವಿದ ರವಿ

TV9 Web
| Updated By: ಮದನ್​ ಕುಮಾರ್​|

Updated on: Aug 23, 2021 | 10:33 PM

Share

ಫೋಟೋಗ್ರಾಫರ್​ ಆಗಿದ್ದ ರವಿ ಅವರು ರಿಯಾಲಿಟಿ ಶೋವೊಂದರಲ್ಲಿ ಹಾಸ್ಯ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದರು. ಗಂಟಲು ಆಪರೇಷನ್​ ಮತ್ತು ಲಾಕ್​ಡೌನ್​ನಿಂದಾಗಿ ಅವರ ಬದುಕಿನಲ್ಲಿ ಕಷ್ಟ ಶುರುವಾಯಿತು.

ಹಾಸ್ಯ ಕಲಾವಿದ, ಕಾಳಸಿದ್ದನಹುಂಡಿ ಗ್ರಾಮದ ರವಿಯನ್ನು ಯುವತಿಯೊಬ್ಬಳು ಪ್ರೀತಿಸಿದ್ದಳು. ಇಬ್ಬರ ಕುಟುಂಬದಲ್ಲೂ ಆ ಪ್ರೀತಿಗೆ ವಿರೋಧವಿತ್ತು. ಹೆತ್ತವರನ್ನು ಎದುರು ಹಾಕಿಕೊಂಡೇ ಈ ಜೋಡಿ ಮದುವೆ ಆಗಿತ್ತು. ರಿಜಿಸ್ಟರ್​ ಮ್ಯಾರೇಜ್​ ಆದ ಬಳಿಕ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ಇಬ್ಬರೂ ನಾಲ್ಕು ವರ್ಷ ಸಂಸಾರ ಮಾಡಿದ್ದರು. ಆದರೆ ಈಗ ಪತ್ನಿಯಿಂದ ತನಗೆ ಮೋಸ ಆಗಿದೆ ಎಂದು ರವಿ ಗೋಳು ತೋಡಿಕೊಳ್ಳುತ್ತಿದ್ದಾರೆ. ರವಿ ಬಳಿ ಈಗ ಹಣ ಇಲ್ಲ ಎಂಬ ಕಾರಣಕ್ಕೆ ಆ ಯುವತಿ ಬೇರೆ ವ್ಯಕ್ತಿ ಜೊತೆ ಮದುವೆ ಆಗಿದ್ದಾಳಂತೆ!

ಫೋಟೋಗ್ರಾಫರ್​ ಆಗಿ ಕೆಲಸ ಮಾಡುತ್ತಿದ್ದ ರವಿ ಅವರು ರಿಯಾಲಿಟಿ ಶೋವೊಂದರಲ್ಲಿ ಹಾಸ್ಯ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದರು.  ಗಂಟಲು ಆಪರೇಷನ್​ ಬಳಿಕ ರವಿಗೆ ಕಿರುತೆರೆಯಲ್ಲಿ ಬೇಡಿಕೆ ಕಡಿಮೆ ಆಯಿತು. ಲಾಕ್​ಡೌನ್​ನಿಂದಾಗಿ ಫೋಟೋಗ್ರಾಫರ್​ ಕೆಲಸವೂ ಇಲ್ಲದಾಯಿತು. ಹಾಗಾಗಿ ತಮ್ಮ ಬಳಿ ಹಣ ಇಲ್ಲ ಎಂಬ ಕಾರಣಕ್ಕೆ ಪತ್ನಿ ಬಿಟ್ಟುಹೋಗಿದ್ದಾಳೆ ಎಂದು ರವಿ ಆರೋಪ ಮಾಡುತ್ತಿದ್ದಾರೆ.

‘ಅವರ ಸಂಬಂಧಿಕರೋ ಏನೋ ನನಗೆ ಗೊತ್ತಿಲ್ಲ. ಮಂಡ್ಯದ ಸ್ವರ್ಣಸಂದ್ರದಲ್ಲಿ ವಾಸವಾಗಿದ್ದಾರೆ. ಅವರು ಸರ್ಕಾರಿ ನೌಕರ. ಅವರನ್ನು ಈಕೆ ಮದುವೆ ಆಗಿದ್ದಾಳೆ. ಇಂಥ ಮನಸ್ಥಿತಿ ಇರುವ ಹುಡುಗಿಯರಿಗೆ ಪಾಠ ಆಗಬೇಕು’ ಎಂದು ಪತ್ನಿ ವಿರುದ್ಧ ಕಾನೂನು ಹಾದಿಯಲ್ಲಿ ಹೋರಾಡಲು ರವಿ ಮುಂದಾಗಿದ್ದಾರೆ.

ಇದನ್ನೂ ಓದಿ:

‘ಪ್ರೀತಿಸಿದ ಬಳಿಕ ಮೋಸ ಮಾಡ್ಬೇಡಿ ಪ್ಲೀಸ್​’; ಕಣ್ಣೀರು ಹಾಕುತ್ತ ನೋವಿನ ಘಟನೆ ಹೇಳಿಕೊಂಡ ನಿರಂಜನ್​

ಮುದ್ದಿನ ಪತ್ನಿ ಸಾಯೆಶಾಗೆ ಬರ್ತ್​ಡೇ ವಿಶ್​ ಮಾಡಿದ ಆರ್ಯ ಪರಸ್ತ್ರೀ ಮೇಲೂ ಕಣ್ಣು ಹಾಕಿ ಮೋಸ ಮಾಡಿದ್ರಾ?