ಟಾಟಾ ಪಂಚ್ ಮೈಕ್ರೊ-ಎಸ್ ಯು ವಿ ಕಾರಿನ ಬಗ್ಗೆ ನಿಮಗೆ ಗೊತ್ತಿರದ ಕೆಲ ಅಂಶಗಳು ಇಲ್ಲಿವೆ
ಟಾಟಾ ಪಂಚ್ ಮಿನಿ-ಎಸ್‌ಯುವಿ ಒಳಭಾಗದಲ್ಲಿ, ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ನಿಜವಾದ ಸ್ಪರ್ಧಾತ್ಮಕ ಉತ್ಪನ್ನವನ್ನಾಗಿ ಮಾಡಲು ಎಲ್ಲಾ ಇತ್ತೀಚಿನ ವ್ಯವಸ್ಥೆಗಳನ್ನು ಮಾಡುವ ನಿರೀಕ್ಷೆಯಿದೆ
ಟಾಟಾ ಪಂಚ್ ಮೈಕ್ರೊ-ಎಸ್ಯುವಿ ಕಾರನ್ನು ಟಾಟಾ ಮೋಟಾರ್ಸ್ ಸಂಸ್ಥೆಯು 2019ರಲ್ಲ್ಲಿ ನಡೆದ ಜಿನೀವಾ ಮೋಟಾರ್ ಶೋನಲ್ಲಿ ಟಾಟಾ H2X ಆಗಿ ಮತ್ತು ಟಾಟಾ HBX ಮೈಕ್ರೊ-SUV ಆಗಿ ಆಟೋ ಎಕ್ಸ್ಪೋ 2020 ರಲ್ಲಿ ಪರಿಚಯಿಸಿದ್ದು ನಿಮಗೆ ನೆನಪಿರಬಹುದು. ಭಾರತದಲ್ಲಿ ಚಿಕ್ಕ ಮತ್ತು ಕಂಪ್ಯಾಕ್ಟ್ SUV ಎನಿಸಿಕೊಂಡಿರುವ, ನಿಸ್ಸಾನ್ ಮ್ಯಾಗ್ನೈಟ್, ರಿನಾಲ್ಟ್ ಕಿಗರ್, ಮಾರುತಿ ಸುಜಿಕಿ ಇಗ್ನಿಸ್ ಮತ್ತು ಹ್ಯುಂಡೈನ ಬರಲಿರುವ AX1 ಮಿನಿ- SUVಗಳಿಗೆ ಪ್ರತಿಸ್ಫರ್ಧಿಯಾಗಿ ಟಾಟಾ ಮೋಟಾರ್ಸ್ SUV ಪಂಚ್ ನಿಲ್ಲಲಿದೆ. ಭಾರತದ SUV ವಾಹನಗಳ ಸೆಗ್ಮೆಂಟ್ನಲ್ಲಿ ಟಾಟಾದ ಹೊಸ ಪಂಚ್, ಟಾಟಾ ನೆಕ್ಸಾನ್ SUV ಗಿಂತ ಕಡಿಮೆಯಾಗಿದ್ದರೂ ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಗಳ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ನಾಲ್ಕು ಚಕ್ರ ವಾಹನಗಳ ಪರಿಣಿತರ ಪ್ರಕಾರ ಭಾರತದಲ್ಲಿ ಟಾಟಾ ಪಂಚ್ ಮೈಕ್ರೊ-ಎಸ್ ಯು ವಿ ಕಾರಿನ ಎಕ್ಸ್ ಶೋರೂಮ್ ಬೆಲೆ ರೂ. 5-10 ಲಕ್ಷಗಳವರೆಗೆ ಇರಲಿದೆ.
ಟಾಟಾ ಪಂಚ್ ಮಿನಿ-ಎಸ್‌ಯುವಿ ಒಳಭಾಗದಲ್ಲಿ, ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ನಿಜವಾದ ಸ್ಪರ್ಧಾತ್ಮಕ ಉತ್ಪನ್ನವನ್ನಾಗಿ ಮಾಡಲು ಎಲ್ಲಾ ಇತ್ತೀಚಿನ ವ್ಯವಸ್ಥೆಗಳನ್ನು ಮಾಡುವ ನಿರೀಕ್ಷೆಯಿದೆ. ಟಾಟಾ ಪಂಚ್‌ನ ಒಳಭಾಗವನ್ನು ಆಧುನಿಕ ಏರೋ ಕಮಾಂಡ್ ಸೆಂಟರ್‌ನಂತೆ ತಡೆರಹಿತ ಕಾಕ್‌ಪಿಟ್ ರೀತಿಯ ಥೀಮ್‌ನೊಂದಿಗೆ ಅಳವಡಿಸಲಾಗುತ್ತಿದೆ.
ಇದು 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ ಮತ್ತು ಟಿಎಫ್ಟಿ ಕ್ಲಸ್ಟರ್ ಡಿಸ್‌ಪ್ಲೇಯನ್ನು ಎಚ್‌ಎಂಐ ಜೊತೆಗೆ ಹೈಟೆಕ್ ಲುಕ್ ಮತ್ತು ಫೀಲ್ ನೀಡುತ್ತದೆ. ವರ್ಧಿತ ಹ್ಯಾಪ್ಟಿಕ್ಸ್ ಮತ್ತು ಪ್ರೀಮಿಯಂ ವಸ್ತುಗಳು ಪಂಚ್ ಮಿನಿ- SUVಗೆ ಪ್ರೀಮಿಯಂ ಫೀಲ್ ನೀಡುವುದು ಖಚಿತ. ಹಿಂಭಾಗದ ಪ್ರಯಾಣಿಕರಿಗೆ ಭುಜ, ಮೊಣಕಾಲು ಮತ್ತು ತಲೆ ಮೊದಲಾದ ಭಾಗಳಿಗೆ ಸಾಕಷ್ಟು ಸ್ಥಳಾವಕಾಶವನ್ನು ಟಾಟಾ ಪಂಚ್ ಮೈಕ್ರೊ-ಎಸ್ಯುವಿ ಒದಗಿಸುತ್ತದೆ.
ಇದನ್ನೂ ಓದಿ: Viral Video: ರಾಖಿ ಕಟ್ಟಿದವನನ್ನೇ ಕಚ್ಚಿ ಕೊಂದ ಹಾವುಗಳು!; ಈ ವಿಡಿಯೋ ನೋಡಿದರೆ ಬೆಚ್ಚಿ ಬೀಳ್ತೀರಿ