ರೂ. 4,000 ದೊಳಗೆ ಸ್ಮಾರ್ಟ್ ಪೋನ್ ಬೇಕೇ? ಸ್ವಲ್ಪ ದಿನ ಕಾಯಿರಿ, ಮುಕೇಶ್ ಅಂಬಾನಿ ಅದನ್ನು ನೀಡಲಿದ್ದಾರೆ!
ಜಿಯೋಸ್ಮಾರ್ಟ್ ಪೋನ್ ಕುರಿತು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುತ್ತಿರುವುದು ಸೋರಿಕೆಯಾಗಿರುವ ಮಾಹಿತಿ. ಟ್ವಿಟರ್ನಲ್ಲಿ ಇತ್ತೀಚಿಗೆ ಲೀಕ್ ಆಗಿರುವ ಮಾಹಿತಿಯಿಂದ ಅದರ ಬೆಲೆಯೂ ಗೊತ್ತಾಗಿದೆ.
ಭಾರತದ ಮೊಬೈಲ್ ಪೋನ್ ಮತ್ತು ಅವುಗಳ ಸೇವೆಯ ನೆಟ್ವರ್ಕ್ ಗಳಿಗೆ ಸಂಬಂಧಿಸಿದಂತೆ ರಿಲಯನ್ಸ್ ಕಮ್ಯುನಿಕೇಶನ್ಸ್ ನ ಒಡೆಯ ಮುಕೇಶ್ ಅಂಬಾನಿ ಕ್ರಾಂತಿ ಸೃಷ್ಟಿಸಿದ್ದಾರೆ ಎಂದರೆ ಉತ್ಪ್ರೇಕ್ಷೆ ಅನಿಸದು. ಹೊಸ ಸೇವೆಗಳು, ಪ್ಲ್ಯಾನ್ಗಳನ್ನು ಆಗಿಂದಾಗ್ಗೆ ಪರಿಚಯಿಸುವ ಮೂಲಕ ಅವರ ತಮ್ಮ ಪ್ರತಿಸ್ಪರ್ಧಿಗಳನ್ನು ಚಕಿತಗೊಳಿಸುತ್ತಾರೆ ಮತ್ತು ಮೊಬೈಲ್ ಸೇವೆಗಳು ಅಗ್ಗಗೊಳ್ಳುವಂತೆ ಮಾಡಿ ಜನಾನುರಾಗಿಯೂ ಅಗಿದ್ದಾರೆ. ಕೆಲ ದಿನಗಳ ಹಿಂದೆ ಮುಕೇಶ್ ಜಿಯೋಫೋನ್ ನೆಕ್ಸ್ಟ್ ಲಾಂಚ್ ಮಾಡುವ ಬಗ್ಗೆ ಹೇಳಿದ್ದರು. ಕಂಪನಿಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಜಿಯೋಫೋನ್ ನೆಕ್ಸ್ಟ್ ಸೆಪ್ಟೆಂಬರ್ನಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಎರಡು ತಿಂಗಳು ಹಿಂದೆ 44 ನೇ ರಿಲಯನ್ಸ್ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಜಿಯೋ ಸ್ಮಾರ್ಟ್ಫೋನನ್ನು ಗೂಗಲ್ ಸಹಯೋಗದೊಂದಿಗೆ ತಯಾರಿಸಲಾಗಿದೆ.
ಹಾಗೆ ನೋಡಿದರೆ, ಸ್ಮಾರ್ಟ್ಫೋನ್ ಬಗ್ಗೆ ರಿಲಯನ್ಸ್ ಸಂಸ್ಥೆ ಯಾವುದೇ ವಿವರವನ್ನು ಬಹಿರಂಗಪಡಿಸಿಲ್ಲ. ಜಿಯೋಸ್ಮಾರ್ಟ್ ಪೋನ್ ಕುರಿತು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುತ್ತಿರುವುದು ಸೋರಿಕೆಯಾಗಿರುವ ಮಾಹಿತಿ. ಟ್ವಿಟರ್ನಲ್ಲಿ ಇತ್ತೀಚಿಗೆ ಲೀಕ್ ಆಗಿರುವ ಮಾಹಿತಿಯಿಂದ ಅದರ ಬೆಲೆಯೂ ಗೊತ್ತಾಗಿದೆ.
ಸದರಿ ಟ್ವೀಟ್ ಪ್ರಕಾರ ಜಿಯೋ ಫೋನ್ ನೆಕ್ಸ್ಟ್ ಬೆಲೆ ಕೇವಲ ರೂ 3,499 ಆಗಿರಲಿದೆ. ಕ್ವಾಲ್ಕಮ್ ಪ್ರವೇಶ ಹಂತ ಸ್ನಾಪ್ಡ್ರಾಗನ್ 215 ರಿಂದ ಸ್ಮಾರ್ಟ್ ಫೋನ್ ಚಾಲನೆಗೊಳ್ಳಲಿದೆ ಎಂದು ಲೀಕ್ ಅದ ಟ್ವೀಟ್ನಿಂದ ಗೊತ್ತಾಗಿದೆ. ಇದಲ್ಲದೆ, ಜಿಯೋಫೋನ್ ನೆಕ್ಸ್ಟ್ 2 ಜಿಬಿ ಮತ್ತು 3 ಜಿಬಿ RAM ರೂಪಾಂತರಗಳಲ್ಲಿ ದೊರೆಯಲಿದ್ದು 16 ಜಿಬಿ ಮತ್ತು 32 ಜಿಬಿ ಸ್ಟೋರೇಜ್ಗೆ ಹೊಂದಿಸಲಾಗಿದೆ. ಇದರ ಜೊತೆಯಲ್ಲಿ, ಜಿಯೋಫೋನ್ ನೆಕ್ಸ್ಟ್ 5.5 ಇಂಚಿನ ಡಿಸ್ಪ್ಲೇ ಮತ್ತು 2500mAh ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಕೊನೆಯದಾಗಿ, ಈ ಫೋನ್ 13 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್ ಶೂಟರ್ ಹೊಂದಿರಲಿದೆ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: ಕೊವಿಡ್ ವ್ಯಾಕ್ಸಿನೇಶನ್ ಪಡೆದ ಕ್ಯೂಆರ್ ಕೋಡ್ಅನ್ನು ಕೈಮೇಲೆ ಟ್ಯಾಟೂ ಹಾಕಿಸಿಕೊಂಡ ಯುವಕ; ವಿಡಿಯೋ ವೈರಲ್