ಮನಸ್ಸಿನ ದುಗುಡ, ಯಾತನೆಯಿಂದ ಹಗುರವಾಗಲು, ಡಾ ಸೌಜನ್ಯ ವಶಿಷ್ಠ ಸುಲಭ ಉಪಾಯವನ್ನು ಹೇಳಿದ್ದಾರೆ

ಮನಸ್ಸಿನ ದುಗುಡ, ಯಾತನೆಯಿಂದ ಹಗುರವಾಗಲು, ಡಾ ಸೌಜನ್ಯ ವಶಿಷ್ಠ ಸುಲಭ ಉಪಾಯವನ್ನು ಹೇಳಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 24, 2021 | 8:55 PM

ಸಂತೋಷಕ್ಕೆ ಹಲವಾರು ನೆಂಟರು ಅದರೆ ದುಃಖ ಅನಾಥ ಅಂತ ಒಂದು ಗಾದೆ ಮಾತಿದೆ. ದುಃಖವನ್ನು, ಮನಸ್ಸಿನ ಭಾರವನ್ನು ಯಾರೊಂದಿಗಾದರೂ ಹಂಚಿಕೊಂಡರೆ ಮನಸ್ಸು ಹಗುರವಾಗುತ್ತದೆ. ಇದು ಅಕ್ಷರಶಃ ಸತ್ಯ.

ವರ್ಷಗಳಿಂದ ಮನದಲ್ಲಿ ಅಡಗಿರುವ ಒಂದು ಕಹಿ ಘಟನೆಯನ್ನು, ದುಃಖ ಅಥವಾ ವಿಷಾದಕರ ಸಂಗತಿಯನ್ನು ಯಾರ ಹತ್ತಿರವೂ ಹೇಳಿಕೊಳ್ಳಲಾಗದೆ ನಾವು ತೊಳಲಾಡುತ್ತೇವೆ. ಯಾರ ಹತ್ತಿರವಾದರೂ ಹೇಳಿಕೊಂಡರೆ ಅವರು ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೋ ಎಂಬ ಅಳುಕು ಕಾಡುತ್ತಿರುತ್ತದೆ. ಇಂಥ ಸ್ಥಿತಿಯಿಂದ ಮುಕ್ತಿ ಪಡೆಯುವ ಉಪಾಯ ಹೇಗೆ ಅನ್ನುವ ಬಗ್ಗೆ ಡಾ ಸೌಜನ್ಯ ವಶಿಷ್ಠ ಇಂದು ಮಾತಾಡಿದ್ದಾರೆ.

ಸಂತೋಷಕ್ಕೆ ಹಲವಾರು ನೆಂಟರು ಅದರೆ ದುಃಖ ಅನಾಥ ಅಂತ ಒಂದು ಗಾದೆ ಮಾತಿದೆ. ದುಃಖವನ್ನು, ಮನಸ್ಸಿನ ಭಾರವನ್ನು ಯಾರೊಂದಿಗಾದರೂ ಹಂಚಿಕೊಂಡರೆ ಮನಸ್ಸು ಹಗುರವಾಗುತ್ತದೆ. ಇದು ಅಕ್ಷರಶಃ ಸತ್ಯ. ಆದರೆ ನಮಗೆ ಹಿಂಜರಿಕೆ. ಮನಸ್ಸಿನ ದುಗುಡ, ದುಮ್ಮಾನ, ಒತ್ತಡ ಮೊದಲಾದವವುಗಳನ್ನು ಹೊರಹಾಕದಿದ್ದರೆ ಅವು ಬೃಹದಾಕಾರವಾಗಿ ಬೆಳೆದು ನಮ್ಮನ್ನು ಇನ್ನಷ್ಟು ಹತಾಷೆ, ಖಿನ್ನತೆಗೆ ನೂಕುತ್ತವೆ ಎಂದು ಡಾ ಸೌಜನ್ಯ ಹೇಳುತ್ತಾರೆ. ಯಾರಲ್ಲೂ ನಾವು ಹೇಳಿಕೊಳ್ಳಲಿಚ್ಛಿಸದ ವೇದನೆಯನ್ನು ದೂರ ಮಾಡಿಕೊಳ್ಳಲು ಅವರು ಸಲಹೆಯನ್ನು ನೀಡುತ್ತಾರೆ.

ಒಂದು ಸಿಂಪಲ್ ಎಕ್ಸರ್ಸೈಜ್ ಮೂಲಕ ಈ ಸಲಹೆಯನ್ನು ಕಾರ್ಯಗತಗೊಳಿಸ ಬೇಕು ಸೌಜನ್ಯ ಹೇಳಿದ್ದಾರೆ. ನಮ್ಮ ಎರಡೂ ಕೈಗಳನ್ನು ಹೊಟ್ಟೆಯ ಮೇಲಿಟ್ಟಕೊಂಡು ಧೀರ್ಘವಾಗಿ ಮೂಗಿನಿಂದ ಉಸಿರೆಳೆದುಕೊಂಡ ಬಳಿಕ ಅದನ್ನು ಬಾಯಿಯ ಮೂಲಕ ಹೊರಹಾಕಬೇಕು. ಉಸಿರೆಳೆದುಕೊಳ್ಳುವಾಗ ಬಿಳಿ ಕಿರಣವನ್ನು ಒಳಗೆಳೆದುಕೊಳ್ಳುತ್ತಿದ್ದೇನೆ ಮತ್ತು ಉಸಿರು ಬಿಡುವಾಗ ಕಪ್ಪು ಕಿರಣವನ್ನು ದೇಹದಿಂದ ಹೊರ ಹಾಕುತ್ತಿದ್ದೇನೆ ಅಂದುಕೊಳ್ಳಬೇಕು ಅಂತ ಸೌಜನ್ಯ ಹೇಳುತ್ತಾರೆ.

ಆದಾದ ಮೇಲೆ, ನಾವು ಮರೆಯಬೇಕೆಂದಿರುವ ದುಗುಡ, ತುಮುಲ, ನೋವು, ಯಾತನೆ, ವಿಷಾದ ಮೊದಲಾದವುಗಳನ್ನು ಒಂದು ಬಿಳಿಹಾಳೆಯಲ್ಲಿ ಬರೆಯುತ್ತಾ ಹೋಗಬೇಕೆಂದು ಅವರು ಹೇಳುತ್ತಾರೆ. ಎಲ್ಲವನ್ನೂ ಬರೆದ ನಂತರ ಆ ಹಾಳೆಯನ್ನು ನಮಗೆ ಸಾಧ್ಯವಾಗುವಷ್ಟು ಚಿಕ್ಕ-ಚಿಕ್ಕ ಚೂರುಗಳಲ್ಲಿ ಹರಿದು, ನೀರು ತುಂಬಿರುವ ಒಂದು ಜಗ್ನಲ್ಲಿ ಹಾಕಿದ ನಂತರ, ನೀರಿನಲ್ಲೂ ಆ ಚೂರುಗಳನ್ನು ನಮಗೆ ಸಾಕೆನಿಸುವವರಗೆ ಕಿವುಚಬೇಕೆಂದು ಸೌಜನ್ಯ ಹೇಳುತ್ತಾರೆ. ಅದಾದ ಬಳಿಕ ಆ ನೀರನ್ನು ಯಾವುದಾದರೂ ಮರಕ್ಕೆ ಹಾಕಬೇಕಂತೆ. ಹೀಗೆ ಮಾಡಿದರೆ, ಆ ಮಾನಸಿಕ ತೊಳಲಾಟವನ್ನು ಹೋಗಲಾಡಿಸಬಹುದು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: WhatsApp: ವಾಟ್ಸ್​ಆ್ಯಪ್​ನಲ್ಲಿ ಆಡಿಯೋ ಅಥವಾ ವಿಡಿಯೋ ಕಾಲ್ ರೆಕಾರ್ಡ್ ಮಾಡುವ ಟ್ರಿಕ್ ನಿಮಗೆ ಗೊತ್ತೇ?