ಕ್ರಿಶ್ಚಿಯನ್ ಹೆಸರುಗಳ ಹಿಂದೆ ಬಿದ್ದಿರುವುದೇಕೆ ಸ್ಯಾಂಡಲ್ವುಡ್? ಗಾಂಧಿನಗರದಲ್ಲಿ ಇದು ಹೊಸ ಟ್ರೆಂಡ್
ಸದ್ಯದ ಪರಿಸ್ಥಿತಿ ಗಮನಿಸಿದರೆ ಗಾಂಧಿನಗರದಲ್ಲಿ ಕ್ರಿಶ್ಚಿಯನ್ ಹೆಸರುಗಳನ್ನು ಸಿನಿಮಾಗೆ ಶೀರ್ಷಿಕೆಯನ್ನಾಗಿರುವ ಟ್ರೆಂಡ್ ಚಾಲ್ತಿಗೆ ಬಂದಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಈ ರೀತಿಯ ಹೆಸರುಗಳನ್ನು ಇಟ್ಟುಕೊಳ್ಳುತ್ತಿವೆ.
ಒಂದು ಸಿನಿಮಾದ ಶೀರ್ಷಿಕೆ ಆಕರ್ಷಕವಾಗಿದ್ದರೆ ಆ ಸಿನಿಮಾ ಅರ್ಧ ಗೆದ್ದಂತೆಯೇ ಸರಿ. ಹಾಗಾಗಿ ತಮ್ಮ ಚಿತ್ರಕ್ಕೆ ಟೈಟಲ್ ಇಡುವಾಗ ನಿರ್ದೇಶಕರು ಸಖತ್ ಎಚ್ಚರಿಕೆ ವಹಿಸುತ್ತಾರೆ. ಇನ್ನೂ ಕೆಲವೊಮ್ಮೆ ಫ್ಯಾನ್ಸಿ ಟೈಟಲ್ಗಳ ಮೊರೆ ಹೋಗಲಾಗುತ್ತದೆ. ಆಯಾ ಕಾಲಕ್ಕೆ ತಕ್ಕಂತೆ ಸಿನಿಮಾ ಹೆಸರುಗಳ ಟ್ರೆಂಡ್ ಬದಲಾಗುತ್ತವೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಗಾಂಧಿನಗರದಲ್ಲಿ ಕ್ರಿಶ್ಚಿಯನ್ ಹೆಸರುಗಳನ್ನು ಸಿನಿಮಾಗೆ ಶೀರ್ಷಿಕೆಯನ್ನಾಗಿರುವ ಟ್ರೆಂಡ್ ಚಾಲ್ತಿಗೆ ಬಂದಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಈ ರೀತಿಯ ಹೆಸರುಗಳನ್ನು ಇಟ್ಟುಕೊಳ್ಳುತ್ತಿವೆ. ಎಲ್ಲ ಭಾಷೆಯಲ್ಲಿ, ಅಂದರೆ ಪ್ಯಾನ್ ಇಂಡಿಯಾ ಮಾರುಕಟ್ಟೆಗೆ ಸೂಕ್ತ ಆಗಬೇಕು ಎಂಬ ಕಾರಣಕ್ಕೆ ಇಂಥ ಟೈಟಲ್ಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿವೆ ಎಂಬ ಮಾತು ಕೇಳಿಬರುತ್ತಿದೆ.
ದರ್ಶನ್ ನಟನೆಯ ‘ರಾಬರ್ಟ್’, ಪುನೀತ್ ರಾಜ್ಕುಮಾರ್ ಅಭಿನಯಿಸುತ್ತಿರುವ ‘ಜೇಮ್ಸ್’, ರಕ್ಷಿತ್ ಶೆಟ್ಟಿ ನಟನೆಯ ‘ರಿಚರ್ಡ್ ಆ್ಯಂಟೊನಿ’ ಮತ್ತು ‘777 ಚಾರ್ಲಿ’ ಸಿನಿಮಾಗಳು ಈ ಟ್ರೆಂಡ್ ಫಾಲೋ ಮಾಡಿವೆ. ಅಷ್ಟೇ ಅಲ್ಲ, ಧ್ರುವ ಸರ್ಜಾ ಮತ್ತು ಎ.ಪಿ. ಅರ್ಜುನ್ ಕಾಂಬಿನೇಷನ್ನ ಹೊಸ ಚಿತ್ರಕ್ಕೆ ‘ಮಾರ್ಟಿನ್’ ಎಂದು ಹೆಸರು ಇಡಲಾಗಿದೆ.
ಇದನ್ನೂ ಓದಿ:
‘ನಾನು ಮಾರ್ಟಿನ್ ಅಲ್ಲ’; ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ ಧ್ರುವ ಸರ್ಜಾ: ಯಾರು ನಿಜವಾದ ಮಾರ್ಟಿನ್?
‘ಮಾರ್ಟಿನ್ ಚಿತ್ರಕ್ಕಾಗಿ ಧ್ರುವ ಸರ್ಜಾ ಡಿಫರೆಂಟ್ ಹೇರ್ ಸ್ಟೈಲ್: ಇಲ್ಲಿದೆ ಮೇಕಿಂಗ್ ವಿಡಿಯೋ