AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಕನ್ನಡದ ಹುಡುಗ ಯಶ್ ಅಫಘಾನಿಸ್ತಾನದ ಪಂಜಶೀರ್ ಯೋಧರಿಗೂ ಪ್ರೇರಣೆಯಾಗಿದ್ದಾರೆಯೇ?

ನಮ್ಮ ಕನ್ನಡದ ಹುಡುಗ ಯಶ್ ಅಫಘಾನಿಸ್ತಾನದ ಪಂಜಶೀರ್ ಯೋಧರಿಗೂ ಪ್ರೇರಣೆಯಾಗಿದ್ದಾರೆಯೇ?

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 25, 2021 | 5:46 PM

ಅಫಘಾನಿಸ್ತಾನ ಪಂಜಶೀರ್ ಪ್ರಾಂತ್ಯದ ಯೋಧನೊಬ್ಬ ತನ್ನ ಮಶೀನ್ ಗನ್ ಅನ್ನು ಕೆಜಿಎಫ್ ಚಾಪ್ಟರ್ 2 ನಲ್ಲಿ ಥೇಟ್ ಯಶ್ ಅವರು ಮಾಡಿರುವ ರೀತಿಯಲ್ಲೇ ಲೋಡ್ ಮಾಡುತ್ತಿದ್ದಾನೆ. ಈ ಯೋಧನಿಗೂ ನಮ್ಮ ಕನ್ನಡದ ಹುಡುಗ ಸ್ಪೂರ್ತಿಯೇ? ಇದ್ದರೂ ಇರಬಹುದು.

ಎಲ್ಲಿಯ ಅಫಘಾನಿಸ್ತಾನದ ಪಂಜಶೀರ್ ಎಲ್ಲಿಯ ನಮ್ಮ ಕನ್ನಡ ಮೂವೀ ಕೆಜಿಎಫ್ ಚಾಪ್ಟರ್ 2 ಅಂತ ನೀವು ಅಂದುಕೊಳ್ಳುತ್ತಿರಬಹುದು. ಆದರೆ ಯಶ್ ಅಭಿನಯದ ಈ ಚಿತ್ರದ ಟೀಸರ್ ಕರ್ನಾಟಕದೊಂದಿಗೆ ಕೇವಲ ಭಾರತದಲ್ಲಿ ಮಾತ್ರ ಅಲ್ಲ ವಿದೇಶಗಳಲ್ಲೂ ಬಿಡುಗಡೆಯಾಗಿರುವುದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿಯೇ. ನಮಗೆ ಗೊತ್ತಿರುವ ಇನ್ನೊಂದು ವಿಷಯವೆಂದರೆ, ನಮ್ಮ ನೆರೆರಾಷ್ಟ್ರಗಳಲ್ಲಿ ಬಾಲಿವುಡ್ ಸಿನಿಮಾಗಳ ಬಗ್ಗೆ ವಿಪರೀತ ಕ್ರೇಝ್ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 1 ಹಿಂದಿಗೂ ಡಬ್ ಆಗಿ ಜನಪ್ರಿಯಗೊಂಡಿತ್ತು. ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಬಾಲಿವುಡ್ ಸಿನಿಮಾಗಳು ಹೋಗುವಂತೆ ಕೆಜಿಎಫ್ ಸಹ ಹೋಗಿರಬಹುದು.

ನಾವು ಹೀಗೆ ಹೇಳುತ್ತಿರುವುದಕ್ಕೆ ಕಾರಣವಿದೆ ಮಾರಾಯ್ರೇ. ಅದೇನು ಗೊತ್ತಾ? ಇಲ್ಲಿರುವ ವಿಡಿಯೋ ನೋಡಿ. ವಿಡಿಯೋ ಎಡಭಾಗದಲ್ಲಿ ಅಫಘಾನಿಸ್ತಾನ ಪಂಜಶೀರ್ ಪ್ರಾಂತ್ಯದ ಯೋಧನೊಬ್ಬ ತನ್ನ ಮಶೀನ್ ಗನ್ ಅನ್ನು ಕೆಜಿಎಫ್ ಚಾಪ್ಟರ್ 2 ನಲ್ಲಿ ಥೇಟ್ ಯಶ್ ಅವರು ಮಾಡಿರುವ ರೀತಿಯಲ್ಲೇ ಲೋಡ್ ಮಾಡುತ್ತಿದ್ದಾನೆ. ಈ ಯೋಧನಿಗೂ ನಮ್ಮ ಕನ್ನಡದ ಹುಡುಗ ಸ್ಪೂರ್ತಿಯೇ? ಇದ್ದರೂ ಇರಬಹುದು.

ಅಂದಹಾಗೆ, ಕೊವಿಡ್-19 ಪಿಡುಗಿನಿಂದಾಗಿ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೆ ತಡವಾಗುತ್ತಿದೆ. ಕೇವಲ ಯಶ್ ಅಭಿಮಾನಿಗಳು ಮಾತ್ರವಲ್ಲ ಅಸಂಖ್ಯಾತ ಫಿಲ್ಮೀ ಬಫ್ಗಳು ಚಿತ್ರದ ಬಿಡುಗಡೆಯನ್ನು ಬಹಳ ಕಾತುರತೆಯಿಂದ ವೀಕ್ಷಿಸುತ್ತಿದ್ದಾರೆ. ಯಾಕೆಂದರೆ, ಕೆಜಿಎಫ್ ಚಾಪ್ಟರ್ 1 ಚಿತ್ರ ಸೃಷ್ಟಿಸಿದ ಹವಾ ಸಾಮಾನ್ಯವಾದುದಲ್ಲ. ಬೇರೆ ನಟರ ಅಭಿಮಾನಿಗಳು ಸಹ ಚಿತ್ರವನ್ನು ಮುಗಿಬಿದ್ದು ನೋಡಿದ್ದರು.

ಓಕೆ, ಕೆಜಿಎಫ್ ಚಾಪ್ಟರ್ 2 ರಿಲೀಸ್ ಕುರಿತು ಖುದ್ದು ಯಶ್ ಟ್ವೀಟ್ ಮಾಡಿ ಏಪ್ರಿಲ್ 14, 2022 ರಂದು ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ‘ಪ್ರಸಕ್ತ ಸ್ಥಿತಿಯ ಅನಿಶ್ಚಿತತೆಗಳು ನಮ್ಮ ಬದ್ದತೆಯನ್ನು ಮಾತ್ರ ವಿಳಂಬಗೊಳಿಸಬಲ್ಲವು. ಆದರೆ, ಕೊನೆ ಮಾತ್ರ ನಾವು ಪ್ರಾಮಿಸ್ ಮಾಡಿದಂತೆಯೇ ಆಗಲಿದೆ. ಏಪ್ರಿಲ್ 14, 2022 ರಂದು ನಮ್ಮನ್ನು ನೀವು ಚಿತ್ರಮಂದಿರಗಳಲ್ಲಿ ಕಾಣಲಿದ್ದೀರಿ.’ ಎಂದು ಯಶ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ನಾನು ಇಷ್ಟಪಟ್ಟ ಹಾಡನ್ನು ಹಾಕಿದರೆ ಮಾತ್ರ ಮಂಟಪಕ್ಕೆ ಬರುತ್ತೇನೆ ಎಂದು ಮುನಿಸಿಕೊಂಡ ವಧು; ವಿಡಿಯೋ ನೋಡಿ