ಪ್ರಧಾನಿ ಮೋದಿ ಉದ್ಘಾಟಿಸಿದ ತೂತುಕುಡಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ವೈಭವ ನೋಡಿ!
ಈ ಹೊಸ ಟರ್ಮಿನಲ್ ಕಟ್ಟಡವನ್ನು ತಮಿಳುನಾಡು ರಾಜ್ಯದ ಅಭಿವೃದ್ಧಿಯಲ್ಲಿ ಒಂದು "ದೊಡ್ಡ ಹೆಜ್ಜೆ" ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಹಿಂದಿನ 3 ಲಕ್ಷಕ್ಕೆ ಹೋಲಿಸಿದರೆ ಈ ಹೊಸ ಟರ್ಮಿಲ್ನಲ್ಲಿ ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದ್ದಾರೆ. 17,340 ಚದರ ಮೀಟರ್ ವಿಸ್ತೀರ್ಣದ ಈ ಟರ್ಮಿನಲ್ ಅನ್ನು 1,350 ಪ್ರಯಾಣಿಕರನ್ನು ಮತ್ತು ವಾರ್ಷಿಕವಾಗಿ 20 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.
ತೂತುಕುಡಿ, ಜುಲೈ 26: ತಮಿಳುನಾಡು ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತೂತುಕುಡಿ ವಿಮಾನ ನಿಲ್ದಾಣದ (Thoothukudi Airport New Terminal) ಹೊಸ ಟರ್ಮಿನಲ್ ಅನ್ನು ಉದ್ಘಾಟನೆ ಮಾಡಿದ್ದಾರೆ. ಈ ಟರ್ಮಿನಲ್ ಅನ್ನು 450 ಕೋಟಿ ರೂ.ಗಳ ವೆಚ್ಚದಲ್ಲಿ ನರ್ಮಿಸಲಾಗಿದೆ. ಈ ಹೊಸ ಟರ್ಮಿನಲ್ ಕಟ್ಟಡವನ್ನು ತಮಿಳುನಾಡು ರಾಜ್ಯದ ಅಭಿವೃದ್ಧಿಯಲ್ಲಿ ಒಂದು “ದೊಡ್ಡ ಹೆಜ್ಜೆ” ಎಂದು ಪ್ರಧಾನಿ ಮೋದಿ (PM Modi in Tamil Nadu) ಶ್ಲಾಘಿಸಿದ್ದಾರೆ. ಹಿಂದಿನ 3 ಲಕ್ಷಕ್ಕೆ ಹೋಲಿಸಿದರೆ ಈ ಹೊಸ ಟರ್ಮಿಲ್ನಲ್ಲಿ ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಮೋದಿ ಹೇಳಿದ್ದಾರೆ. 17,340 ಚದರ ಮೀಟರ್ ವಿಸ್ತೀರ್ಣದ ಈ ಟರ್ಮಿನಲ್ ಅನ್ನು 1,350 ಪ್ರಯಾಣಿಕರನ್ನು ಮತ್ತು ವಾರ್ಷಿಕವಾಗಿ 20 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. 100% ಎಲ್ಇಡಿ ದೀಪಗಳು, ಇಂಧನ-ಸಮರ್ಥ ವಿದ್ಯುತ್ ಮತ್ತು ಯಾಂತ್ರಿಕ ವ್ಯವಸ್ಥೆಗಳು ಮತ್ತು ಆನ್-ಸೈಟ್ ಒಳಚರಂಡಿ ಸಂಸ್ಕರಣಾ ಘಟಕದ ಮೂಲಕ ಸಂಸ್ಕರಿಸಿದ ನೀರಿನ ಮರುಬಳಕೆಯನ್ನು ಒಳಗೊಂಡಿರುವ ಟರ್ಮಿನಲ್ ಅನ್ನು GRIHA-4 ಸುಸ್ಥಿರತೆ ರೇಟಿಂಗ್ ಸಾಧಿಸಲು ನಿರ್ಮಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ