ಒಮಿಕ್ರಾನ್ ಬರದಂತೆ ಔಷಧಿ ಕೊಡುತ್ತೇನೆ ಎಂದು ವಂಚನೆ; ನಕಲಿ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ

ಸಣ್ಣ ಜ್ವರಕ್ಕೂ ಓಮಿಕ್ರಾನ್ ಲಕ್ಷಣ ಎಂದು ಹೆದರಿಸುತಿದ್ದ ನಕಲಿ ವೈದ್ಯ ಸಾದತ್ ಕ್ಲಿನಿಕ್​ ಮೇಲೆ ಇಂದು (ಡಿಸೆಂಬರ್​ 19) ಡಿಹೆಚ್​ಒ ಡಾ.ನಾಗೇಂದ್ರಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ನಕಲಿ ವೈದ್ಯ ಸಾದತ್ ಪರಾರಿಯಾಗಿದ್ದಾನೆ.

ಒಮಿಕ್ರಾನ್ ಬರದಂತೆ ಔಷಧಿ ಕೊಡುತ್ತೇನೆ ಎಂದು ವಂಚನೆ; ನಕಲಿ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ
ನಕಲಿ ವೈದ್ಯ ಸಾದತ್
Follow us
TV9 Web
| Updated By: preethi shettigar

Updated on: Dec 19, 2021 | 3:01 PM

ತುಮಕೂರು: ಒಮಿಕ್ರಾನ್ ಬರದಂತೆ ಔಷಧಿ ಕೊಡುತ್ತೇನೆ ಎಂದು ವಂಚನೆ ಮಾಡುತ್ತಿದ್ದ ನಕಲಿ ಕ್ಲಿನಿಕ್​ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ದಸೂಡಿ ಗ್ರಾಮದಲ್ಲಿ ಖಲಂದರಿಯಾ ಮೆಡಿಕಲ್ ಹೆಸರಿನಲ್ಲಿ ಸಾದತ್ ಎಂಬ ನಕಲಿ ವೈದ್ಯ ​ ಚಿಕಿತ್ಸೆ ನೀಡುತ್ತಿದ್ದ. ಸಣ್ಣ ಜ್ವರಕ್ಕೂ ಓಮಿಕ್ರಾನ್ (Omicron) ಲಕ್ಷಣ ಎಂದು ಹೆದರಿಸುತಿದ್ದ ನಕಲಿ ವೈದ್ಯ ಸಾದತ್ ಕ್ಲಿನಿಕ್​ ಮೇಲೆ ಇಂದು (ಡಿಸೆಂಬರ್​ 19) ಡಿಹೆಚ್​ಒ ಡಾ.ನಾಗೇಂದ್ರಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ನಕಲಿ ವೈದ್ಯ ಸಾದತ್ ಪರಾರಿಯಾಗಿದ್ದಾನೆ.

ಬಿಫಾರ್ಮಾ ಮಾಡಿಕೊಂಡಿದ್ದ ಸಾದತ್ ತಾನು ಎಮ್​ಎಸ್​ ಮಾಡಿದ್ದೇನೆಂದು ಸುಳ್ಳು ಹೇಳಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಕಾನೂನು ಸಚಿವ ಮಾಧುಸ್ವಾಮಿ ಕ್ಷೇತ್ರದಲ್ಲಿ ಓಮಿಕ್ರಾನ್ ಹೆಸರಿನಲ್ಲಿ ವಂಚನೆ ಮಾಡುತ್ತಿರುವುದು ಸದ್ಯ ಇನ್ನಿತರ ಜಿಲ್ಲೆಯಲ್ಲಿನ ಇಂತಹ ಕೃತ್ಯಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಕೊಪ್ಪಳ: ಮದುವೆಯಾಗುವುದಾಗಿ ಮಹಿಳೆಯರಿಗೆ ವಂಚನೆ; ಪಿಎಸ್​ಐ ವಿರುದ್ಧ ಹಲವು ಮಹಿಳೆಯರಿಂದ ಆರೋಪ ಪಿಎಸ್ಐ ಮಹಿಳೆಯರಿಗೆ ಮದುವೆಯಾಗುವುದಾಗಿ ನಂಬಿಸಿ, ವಂಚಿಸಿದ ಆರೋಪ ಕೇಳಿಬಂದಿದೆ. ಪಿಎಸ್ಐ ಮುತ್ತಪ್ಪ ವಿರುದ್ಧ ಹಲವು ಮಹಿಳೆಯರು ಆರೋಪಿಸಿದ್ದಾರೆ. ಕೊಪ್ಪಳ ಫಿಂಗರ್ ಪ್ರಿಂಟ್ ವಿಭಾಗದ ಪಿಎಸ್ಐ ಮುತ್ತಪ್ಪ ಬಡಿಗೇರ್ ವಿರುದ್ಧ ಮೋಸ ಹೋದವರು ಎಸ್​ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆ ಪಿಎಸ್ಐ ವಿರುದ್ಧ ಕ್ರಮಕ್ಕೆ ಫಿಂಗರ್ ಪ್ರಿಂಟ್ ವಿಭಾಗದ ಎಡಿಜಿಗೆ ಪತ್ರ ಬರೆಯಲಾಗಿದೆ. ಈ ಹಿಂದೆ ಮುತ್ತಪ್ಪನಿಗೆ ಕೊಪ್ಪಳ ಎಸ್​ಪಿ ಟಿ.ಶ್ರೀಧರ್ 2 ಬಾರಿ ವಾರ್ನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪಿಎಸ್ಐ ಸುಮಾರು ನಾಲ್ಕೈದು ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಸ್​ಪಿ ಕಚೇರಿಗೆ ಆಗಮಿಸಿ ಮಹಿಳೆಯರು ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ವಧು ನೋಡುವ ನೆಪದಲ್ಲಿ ಬಂದು ಮುತ್ತಪ್ಪ ಯಾಮಾರಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ನಿನ್ನೆ ಮಹಿಳೆಯೊಬ್ಬರ ಕುಟುಂಬದಿಂದ ಎಸ್​ಪಿ ಅವರಿಗೆ ಮೌಖಿಕ ದೂರು ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಎಸ್​ಪಿ ಕಚೇರಿಯಿಂದ ಮುತ್ತಣ್ಣ ಬಡಿಗೇರ್ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ ಶಿವಮೊಗ್ಗದ ರೈಲ್ವೆ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. 1 ಕೆಜಿ 59 ಗ್ರಾಂ ತೂಕದ ಒಣ ಗಾಂಜಾ, 5 ಮೊಬೈಲ್ ಫೋನ್, 500 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವೀನ್, ಪ್ರದೀಪ್, ಗಿರೀಶ್, ಬಸವರಾಜಪ್ಪ ವಿರುದ್ಧ ಎನ್​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮದುವೆಯಾಗುವುದಾಗಿ ಮಹಿಳೆಯರಿಗೆ ವಂಚನೆ; ಪಿಎಸ್​ಐ ವಿರುದ್ಧ ಹಲವು ಮಹಿಳೆಯರಿಂದ ಆರೋಪ

ನಕಲಿ ಚಿನ್ನದ ನಾಣ್ಯ ಮಾರಾಟ: 1 ಕೆಜಿ ನಾಣ್ಯವನ್ನು 11 ಲಕ್ಷ ರೂ.ಗೆ ನೀಡಿ ರೈತರಿಬ್ಬರಿಗೆ ವಂಚನೆ

ಇರೋದು 4 ಆದ್ರೆ 35 ವಿದ್ಯಾರ್ಥಿನಿಯರ ಹಾಜರಾತಿ ತೋರಿಸಿ ಸರ್ಕಾರಕ್ಕೆ ವಂಚನೆ, ತಹಶೀಲ್ದಾರ್ ದಾಳಿಯಿಂದ ಅಕ್ರಮ ಬಯಲು

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್