AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾಗುವುದಾಗಿ ಮಹಿಳೆಯರಿಗೆ ವಂಚನೆ; ಪಿಎಸ್​ಐ ವಿರುದ್ಧ ಹಲವು ಮಹಿಳೆಯರಿಂದ ಆರೋಪ

ಪಿಎಸ್ಐ ಸುಮಾರು ನಾಲ್ಕೈದು ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಸ್​ಪಿ ಕಚೇರಿಗೆ ಆಗಮಿಸಿ ಮಹಿಳೆಯರು ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ವಧು ನೋಡುವ ನೆಪದಲ್ಲಿ ಬಂದು ಮುತ್ತಣ್ಣ ಯಾಮಾರಿಸುತ್ತಿದ್ದ ಎಂದು ಹೇಳಲಾಗುತ್ತಿದೆ.

ಮದುವೆಯಾಗುವುದಾಗಿ ಮಹಿಳೆಯರಿಗೆ ವಂಚನೆ; ಪಿಎಸ್​ಐ ವಿರುದ್ಧ ಹಲವು ಮಹಿಳೆಯರಿಂದ ಆರೋಪ
ಪಿಎಸ್ಐ ಮುತ್ತಪ್ಪ
TV9 Web
| Edited By: sandhya thejappa|

Updated on:Dec 19, 2021 | 1:14 PM

Share

ಕೊಪ್ಪಳ: ಪಿಎಸ್ಐ ಮಹಿಳೆಯರಿಗೆ ಮದುವೆಯಾಗುವುದಾಗಿ ನಂಬಿಸಿ, ವಂಚಿಸಿದ ಆರೋಪ ಕೇಳಿಬಂದಿದೆ. ಪಿಎಸ್ಐ ಮುತ್ತಪ್ಪ ವಿರುದ್ಧ ಹಲವು ಮಹಿಳೆಯರು ಆರೋಪಿಸಿದ್ದಾರೆ. ಕೊಪ್ಪಳ ಫಿಂಗರ್ ಪ್ರಿಂಟ್ ವಿಭಾಗದ ಪಿಎಸ್ಐ ಮುತ್ತಪ್ಪ ಬಡಿಗೇರ್ ವಿರುದ್ಧ ಮೋಸ ಹೋದವರು ಎಸ್​ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆ ಪಿಎಸ್ಐ ವಿರುದ್ಧ ಕ್ರಮಕ್ಕೆ ಫಿಂಗರ್ ಪ್ರಿಂಟ್ ವಿಭಾಗದ ಎಡಿಜಿಗೆ ಪತ್ರ ಬರೆಯಲಾಗಿದೆ. ಈ ಹಿಂದೆ ಮುತ್ತಪ್ಪನಿಗೆ ಕೊಪ್ಪಳ ಎಸ್​ಪಿ ಟಿ.ಶ್ರೀಧರ್ 2 ಬಾರಿ ವಾರ್ನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪಿಎಸ್ಐ ಸುಮಾರು ನಾಲ್ಕೈದು ಮಹಿಳೆಯರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಸ್​ಪಿ ಕಚೇರಿಗೆ ಆಗಮಿಸಿ ಮಹಿಳೆಯರು ನ್ಯಾಯ ಕೊಡಿಸುವಂತೆ ಕೇಳಿದ್ದಾರೆ. ವಧು ನೋಡುವ ನೆಪದಲ್ಲಿ ಬಂದು ಮುತ್ತಪ್ಪ ಯಾಮಾರಿಸುತ್ತಿದ್ದ ಎಂದು ಹೇಳಲಾಗುತ್ತಿದೆ. ನಿನ್ನೆ ಮಹಿಳೆಯೊಬ್ಬರ ಕುಟುಂಬದಿಂದ ಎಸ್​ಪಿ ಅವರಿಗೆ ಮೌಖಿಕ ದೂರು ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಎಸ್​ಪಿ ಕಚೇರಿಯಿಂದ ಮುತ್ತಣ್ಣ ಬಡಿಗೇರ್ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನ ಶಿವಮೊಗ್ಗದ ರೈಲ್ವೆ ಸ್ಟೇಷನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. 1 ಕೆಜಿ 59 ಗ್ರಾಂ ತೂಕದ ಒಣ ಗಾಂಜಾ, 5 ಮೊಬೈಲ್ ಫೋನ್, 500 ರೂ. ನಗದು ಮತ್ತು ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನವೀನ್, ಪ್ರದೀಪ್, ಗಿರೀಶ್, ಬಸವರಾಜಪ್ಪ ವಿರುದ್ಧ ಎನ್​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಮಹಾನ್ ನಾಯಕರ ಹೆಸರಿನಲ್ಲಿ ಬಡಿದಾದುವುದು ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಅನ್ಯಾಯ ಮಾಡಿದಂತೆ; ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್

ಮೈಸೂರು: ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ; 100 ಕೋಟಿ ರೂ. ಮೌಲ್ಯದ 5.14 ಎಕರೆ ಒತ್ತುವರಿ ಜಾಗ ತೆರವು

Published On - 1:10 pm, Sun, 19 December 21

Follow Us
TV9 Web
TV9 Web

TV9 Kannada

Read More
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
‘ಆ ಹೊಗಳಿಕೆಯನ್ನು ಹೇಳೋಕೆ ಮುಜುಗರ ಆಗುತ್ತೆ’; ರಮಿಕಾಶ ಶಿವು
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು