ಮುಂದುವರಿದ ಎಮ್ಇಎಸ್ ಪುಂಡರ ಪುಂಡಾಟಿಕೆ! ಬಸ್​ಗೆ ಎಮ್ಇಎಸ್ ಧ್ವಜ ಕಟ್ಟಿ, ಮಸಿ ಬಳಿದ ಪುಂಡರು; ವಿಡಿಯೋ ವೈರಲ್

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಮೇಲೆ ಜೈ ಶಿವಾಜಿ ಅಂತಾ ಬರೆದಿದ್ದಾರೆ. ಕಳೆದ ರಾತ್ರಿ ಮುಂಬೈನಲ್ಲಿ ಈ ಘಟನೆ ನಡೆದಿದೆ. ಮುಂಬೈನಿಂದ ಕಲಬುರಗಿಗೆ ಆಗಮಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್​ಗೆ ಎಮ್ಇಎಸ್ ಧ್ವಜ ಕಟ್ಟಿ, ಬಸ್​ಗೆ ಮಸಿ ಬಳೆದಿದ್ದಾರೆ.

ಮುಂದುವರಿದ ಎಮ್ಇಎಸ್ ಪುಂಡರ ಪುಂಡಾಟಿಕೆ! ಬಸ್​ಗೆ ಎಮ್ಇಎಸ್ ಧ್ವಜ ಕಟ್ಟಿ, ಮಸಿ ಬಳಿದ ಪುಂಡರು; ವಿಡಿಯೋ ವೈರಲ್
ಬಸ್​ಗೆ ಮಸಿ ಬಳಿದು, ಶಿವಾಜಿ ಧ್ವಜ ಕಟ್ಟುತ್ತಿದ್ದಾರೆ
Follow us
TV9 Web
| Updated By: Digi Tech Desk

Updated on:Jan 08, 2022 | 5:11 PM

ಕಲಬುರಗಿ: ಈಗಾಗಲೇ ರಾಜ್ಯದಲ್ಲಿ ಕನ್ನಡಿಗರು ಎಮ್ಇಎಸ್ ಪುಂಡರ ಪುಂಡಾಟಿಕೆ ವಿರುದ್ಧ ಗರಂ ಆಗಿದ್ದಾರೆ. ಎಮ್ಇಎಸ್ ಮತ್ತು ಶಿವಸೇನೆಯನ್ನು ನಿಷೇಧಿಸಬೇಕೆಂದು ನಿನ್ನೆ (ಡಿ.20) ಕರವೇ ಕಾರ್ಯಕರ್ತರು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಕರ್ನಾಟಕ ಸರ್ಕಾರಕ್ಕೆ ಇಂದು ಸಂಜೆವರೆಗೆ ಗಡುವು ನೀಡಿದ್ದಾರೆ. ಎಮ್ಇಎಸ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕರ್ನಾಟಕ ಬಂದ್​ಗೆ ಕರೆ ನೀಡಲಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ. ಇಷ್ಟಾದರೂ ಎಮ್ಇಎಸ್ ಪುಂಡರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪುಂಡಾಟಿಕೆಯನ್ನು ಮುಂದುವರಿಸಿದ್ದಾರೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ಮೇಲೆ ಜೈ ಶಿವಾಜಿ ಅಂತಾ ಬರೆದಿದ್ದಾರೆ. ಕಳೆದ ರಾತ್ರಿ ಮುಂಬೈನಲ್ಲಿ ಈ ಘಟನೆ ನಡೆದಿದೆ. ಮುಂಬೈನಿಂದ ಕಲಬುರಗಿಗೆ ಆಗಮಿಸುತ್ತಿದ್ದ ಸಾರಿಗೆ ಸಂಸ್ಥೆ ಬಸ್​ಗೆ ಎಮ್ಇಎಸ್ ಧ್ವಜ ಕಟ್ಟಿ, ಬಸ್​ಗೆ ಮಸಿ ಬಳೆದಿದ್ದಾರೆ. ಚಾಲಕನ ಕೈಗೆ ಎಮ್ಇಎಸ್ ಧ್ವಜ ಕೊಟ್ಟು ಬಲವಂತವಾಗಿ ಜೈ ಶಿವಾಜಿ ಅಂತಾ ಹೇಳಿಸಿ ಘೋಷಣೆ ಕೂಗಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಲಬುರಗಿ ಜನರು ಎಮ್ಇಎಸ್ ಪುಂಡಾಟಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪರ ಸಂಘಟನೆ ಸದಸ್ಯನ ಮೇಲೆ ಹಲ್ಲೆ ಮಹಾರಾಷ್ಟ್ರದಲ್ಲಿ ಕನ್ನಡಪರ ಸಂಘಟನೆ ಸದಸ್ಯನ ಮೇಲೆ ಹಲ್ಲೆ ನಡೆದಿದೆ. ನಿನ್ನೆ ಮಧ್ಯರಾತ್ರಿ ಶಿವಕುಮಾರ್ ನಾಯ್ಕ್ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರ ಸಿಎಂ ಮನೆ ಮುಂದೆ ಧರಣಿ ನಡೆಸಲು ತೆರಳಿದ್ದರು. ಈ ವೇಳೆ ಶಿವಕುಮಾರ್ ನಾಯ್ಕ್ ಇದ್ದ ಹೋಟೆಲ್‌ಗೆ ಹೋಗಿ ಹಲ್ಲೆ ಮಾಡಿದ್ದಾರೆ. ಸಂಘಟನೆ ಸದಸ್ಯರು ಒಂದು ವಾರದ ಹಿಂದೆ ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ತೆರಳಿದ್ದರು.

ಎಂಇಎಸ್ ಅಂದ್ರೆ ಮಹಾ ಎಡವಟ್ಟು ಸಂಘ; ಶ್ರೀರಾಮುಲು ಪುಂಡಾಟಿಕೆ, ಹೇಡಿ ಕೃತ್ಯ, ನಾಟಕಕ್ಕೆ ಸರ್ಕಾರದಿಂದ ಪ್ರತ್ಯುತ್ತರ ಸಿಗುತ್ತದೆ. ಎಂಇಎಸ್ ಅಂದ್ರೆ ಮಹಾ ಎಡವಟ್ಟು ಸಂಘ ಅಂತ ಗದಗ ನಗರದಲ್ಲಿ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ. ಎಮ್​ಇಎಸ್​ ನಿಷೇಧದ ಕುರಿತು ಸಿಎಂ ಪರಾಮರ್ಶೆ ಮಾಡುತ್ತಿದ್ದಾರೆ. ಇನ್ಮುಂದೆ ರಾಜ್ಯದಲ್ಲಿ ಎಂಇಎಸ್ ಆಟಗಳು ನಡೆಯೋದಿಲ್ಲ ಅಂತ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ನೋಂದಣಿಯ ವಾಹನಗಳ ಮೇಲೆ ಕಲ್ಲು ತೂರಾಟ ಮಹಾರಾಷ್ಟ್ರದಲ್ಲಿ ಕರ್ನಾಟಕ ನೋಂದಣಿಯ ವಾಹನಗಳ ಮೇಲೆ ಪುಂಡರು ಕಲ್ಲು ತೂರಾಟ ಮಾಡುತ್ತಿದ್ದಾರೆ. ಗೋಕಾಕ್‌ನ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಮಹಾರಾಷ್ಟ್ರದ ಮಿರಜ್ ಪಟ್ಟಣದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಸೈನಿಕರನ್ನ ಬಿಟ್ಟು ಬರಲು ಮಿರಜ್​ಗೆ ಹೋಗಿದ್ದ ಕಾರಿನ ಗಾಜನ್ನು ಒಡೆದಿದ್ದಾರೆ.

ಇದನ್ನೂ ಓದಿ

ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ಸ್ವಂತ ಹಣ ಖರ್ಚು ಮಾಡಿ, ಸರ್ಕಾರಿ ಶಾಲೆಯ ಅಭಿವೃದ್ಧಿ ಮಾಡಿದ ಪರಮೇಶ್ವರ್ ಟೀಚರ್!

ನಡುಗಿಸುವ ಚಳಿ ಮಧ್ಯೆ ಈಶಾನ್ಯ ರಾಜ್ಯಗಳಲ್ಲಿ ಮಳೆಯ ಮುನ್ಸೂಚನೆ; ಹಿಮಪಾತವೂ ತಪ್ಪಿದ್ದಲ್ಲ

Published On - 11:59 am, Tue, 21 December 21

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು