ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ಸ್ವಂತ ಹಣ ಖರ್ಚು ಮಾಡಿ, ಸರ್ಕಾರಿ ಶಾಲೆಯ ಅಭಿವೃದ್ಧಿ ಮಾಡಿದ ಪರಮೇಶ್ವರ್ ಟೀಚರ್!
Ghonasagi school teacher Parameshwar Gadyal: ತಾನು ಕಾರ್ಯನಿರ್ವಹಿಸುತ್ತಿರುವ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟ ಯುವ ಶಿಕ್ಷಕ ಸ್ವಂತ ಹಣ ಖರ್ಚು ಮಾಡಿ ಅಂದಚೆಂದಗೊಳಿಸಿ, ಮಕ್ಕಳ ಮನಸ್ಸು ಮುದಗೊಳಿಸಿದ್ದಾರೆ. ಜೊತೆಗೆ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಒಂದು ಪಕ್ಷ ರೂಪಾಯಿ ಸ್ವಂತ ಹಣ ಖರ್ಚು ಮಾಡಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅವರು ನೆರವೇರಿಸಿದ್ದಾರೆ. ಪರಮೇಶ್ವರ ಗದ್ಯಾಳ ಎಂಬ ಯುವ ಶಿಕ್ಷಕ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಘೊಣಸಗಿ ಎಲ್ ಟಿ ನಂಬರ್ 1 ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸೇವೆ ಸಲ್ಲಿಸಿದ್ದಾರೆ.

1 / 5

2 / 5

3 / 5

4 / 5

5 / 5