AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿಗಳಿಗಾಗಿ ಇದ್ದ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಅಶ್ಲೀಲ ವಿಡಿಯೋ ಹಾಕಿದ ಶಿಕ್ಷಕ; ವಿಚಾರಣೆ ವೇಳೆ ಆತ ಹೇಳಿದ್ದು ಶಾಕಿಂಗ್​

ಶುಕ್ರವಾರ ರಾತ್ರಿ ಈ ಶಿಕ್ಷಕ ವಾಟ್ಸ್​ಆ್ಯಪ್​ ಗ್ರೂಪ್​​ನಲ್ಲಿ ಅಶ್ಲೀಲ ವಿಡಿಯೋ ಹಾಕಿದ್ದಾರೆ. ಅದನ್ನು ನೋಡಿ ಗ್ರೂಪ್​​ನಲ್ಲಿದ್ದ ವಿದ್ಯಾರ್ಥಿಗಳು, ಉಳಿದ ಶಿಕ್ಷಕರು ಶಾಕ್​ ಆಗಿದ್ದಾರೆ. ಅಷ್ಟೇ ಅಲ್ಲ, ಶಾಲೆಯ ಮೇಲಧಿಕಾರಿಗಳಿಗೂ ವಿಷಯ ತಿಳಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

ವಿದ್ಯಾರ್ಥಿಗಳಿಗಾಗಿ ಇದ್ದ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಅಶ್ಲೀಲ ವಿಡಿಯೋ ಹಾಕಿದ ಶಿಕ್ಷಕ; ವಿಚಾರಣೆ ವೇಳೆ ಆತ ಹೇಳಿದ್ದು ಶಾಕಿಂಗ್​
ಸಾಂಕೇತಿಕ ಚಿತ್ರ
TV9 Web
| Edited By: |

Updated on: Dec 20, 2021 | 4:43 PM

Share

ಚೆನ್ನೈ:  ಖಾಸಗಿ ಶಾಲೆಯ ಶಿಕ್ಷಕರೊಬ್ಬರು ವಿದ್ಯಾರ್ಥಿಗಳಿಗೋಸ್ಕರ ರಚಿಸಲಾಗಿದ್ದ ವಾಟ್ಸ್​ಆ್ಯಪ್​ ಗ್ರೂಪ್​​(WhatsApp Group)ನಲ್ಲಿ ಅಶ್ಲೀಲ ವಿಡಿಯೋ ಹಾಕಿ ವಿವಾದ ಸೃಷ್ಟಿಸಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಇದು 12ನೇ ತರಗತಿ ವಿದ್ಯಾರ್ಥಿಗಳಿಗೋಸ್ಕರ ಇದ್ದ ವಾಟ್ಸ್​ಆ್ಯಪ್​ ಗ್ರೂಪ್​ ಆಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಲೆಯವರೇ ಶಿಕ್ಷಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ನಗರದ ಮಹಿಳಾ ಪೊಲೀಸ್​ ಅಧಿಕಾರಿಗಳು ಶಿಕ್ಷಕನನ್ನು ಬಂಧಿಸಿ, ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ.  ಬಂಧಿತನನ್ನು ಆರ್​. ಮತಿವನನ್​​ ಎಂದು ಗುರುತಿಸಲಾಗಿದೆ. ಚೆನ್ನೈನ ಅಂಬಟ್ಟುರ್ ಪ್ರದೇಶದ ನಿವಾಸಿ. ಸುಮಾರು 10ವರ್ಷಗಳಿಂದ ಗಣಿತ ಶಿಕ್ಷಕರಾಗಿದ್ದಾರೆ. ಅಷ್ಟೇ ಅಲ್ಲ, 12ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್​ ಪರೀಕ್ಷೆಗಳಿಗಾಗಿ ತರಬೇತಿಯನ್ನೂ ನೀಡುತ್ತಿದ್ದರು. 

ಶುಕ್ರವಾರ ರಾತ್ರಿ ಈ ಶಿಕ್ಷಕ ವಾಟ್ಸ್​ಆ್ಯಪ್​ ಗ್ರೂಪ್​​ನಲ್ಲಿ ಅಶ್ಲೀಲ ವಿಡಿಯೋ ಹಾಕಿದ್ದಾರೆ. ಅದನ್ನು ನೋಡಿ ಗ್ರೂಪ್​​ನಲ್ಲಿದ್ದ ವಿದ್ಯಾರ್ಥಿಗಳು, ಉಳಿದ ಶಿಕ್ಷಕರು ಶಾಕ್​ ಆಗಿದ್ದಾರೆ. ಅಷ್ಟೇ ಅಲ್ಲ, ಶಾಲೆಯ ಮೇಲಧಿಕಾರಿಗಳಿಗೂ ವಿಷಯ ತಿಳಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ವಿಚಾರಣೆ ವೇಳೆ ಈ ಶಿಕ್ಷಕ ಹೇಳಿದ ವಿಷಯ ಇನ್ನಷ್ಟು ಶಾಕಿಂಗ್ ಆಗಿದೆ. ನಾನು ಸಂಪೂರ್ಣವಾಗಿ ಮದ್ಯ ಸೇವಿಸಿದ್ದೆ. ಹಾಗಾಗಿ ನಾನು ಗ್ರೂಪ್​​ನಲ್ಲಿ ವಿಡಿಯೋ ಹಾಕಿದ್ದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಸದ್ಯ ಶಿಕ್ಷಕನ ವಿರುದ್ಧ ಪೋಕ್ಸೋ (POCSO)ಕಾಯ್ದೆ ಮತ್ತು ಮಾಹಿತಿ  ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

2016ರಲ್ಲಿ ಶಿಕ್ಷಕನೊಬ್ಬ ಐದು ವರ್ಷದ ಹುಡುಗಿಗೆ ಅಶ್ಲೀಲ ವಿಡಿಯೋ ತೋರಿಸಿ, ಆಕೆಯ ಎದುರು ಹಸ್ತಮೈಥುನ ಮಾಡಿಕೊಂಡಿದ್ದ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಪೋಕ್ಸೋ ನ್ಯಾಯಾಲಯ ಆತನಿಗೆ 1 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, 10 ಸಾವಿರ ರೂಪಾಯಿ ದಂಡವನ್ನೂ ಆತ ತುಂಬಬೇಕಾಗಿದೆ.  ಅಂದು ಆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಈಗ 8ವರ್ಷ, ಅವಳು ನ್ಯಾಯಾಲಯಕ್ಕೆ ಬಂದು ತನ್ನೆದುರು ಶಿಕ್ಷಕ ಏನು ಮಾಡಿದ್ದ ಎಂಬುದನ್ನು ಸಂಪೂರ್ಣವಾಗಿ ವಿವರಿಸಿದ್ದಳು.  ಒಬ್ಬ ಪುರುಷ ಮತ್ತು ಮಹಿಳೆ ಅತ್ಯಂತ ಕಡಿಮೆ ಬಟ್ಟೆಯನ್ನು ಧರಿಸಿ, ಏನೋ ಮಾಡುತ್ತಿದ್ದ ವಿಡಿಯೋವನ್ನು ಶಿಕ್ಷಕ ನನಗೆ ತೋರಿಸಿದ್ದ ಎಂದು ಬಾಲಕಿ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದಳು. ಪ್ರಸ್ತುತ ಕೇಸ್​ನಲ್ಲಿ ಬಾಲಕಿ, ಆಕೆಯ ತಾಯಿ ಮತ್ತು ಪೊಲೀಸ್ ಅಧಿಕಾರಿಯೇ ಸಾಕ್ಷಿಯಾಗಿದ್ದಾರೆ.

ಇದನ್ನೂ ಓದಿ: ಕಲಾಪ ಬಹಿಷ್ಕರಿಸಿ ಹೊರನಡೆದ ಕಾಂಗ್ರೆಸ್: ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್