ಕನ್ನಡದ ಬಾವುಟವನ್ನು ತೊಟ್ಟ ಅಂಗಿಯೊಳಗೆ ಬಚ್ಚಿಟ್ಟುಕೊಂಡು ಬೆಳಗಾವಿಯ ಸುವರ್ಣ ಸೌಧ ಪ್ರವೇಶಿಸಿದರು ಜೆಡಿ(ಎಸ್) ಶಾಸಕ ಅನ್ನದಾನಿ

ಅವರ ವರ್ತನೆ ನೋಡಿ ಸುವರ್ಣ ಸೌಧದ ಬೌನ್ಸರ್​ಗಳಿಗೂ ಆಶ್ಚರ್ಯವಾಗಿದೆ. ಯಾಕೆ ಹಾಗೆ ಅಂತ ಮಾಧ್ಯಮದವರು ಕೇಳಿದಾಗ, ಎಮ್ ಈ ಎಸ್ ಪುಂಡರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಲು ಅಂತ ಅವರು ಹೇಳಿದರು.

TV9kannada Web Team

| Edited By: Arun Belly

Dec 21, 2021 | 12:47 AM

ಮಹಾರಾಷ್ಟ್ರ ಏಕೀಕರಣ ಸಮಿತಿಯ ಸದಸ್ಯರು ನಡೆಸಿರುವ ಪುಂಡಾಟದ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂಬ ಒತ್ತಾಯ ದಿನೇದಿನೆ ಹೆಚ್ಚುತ್ತಿದೆ. ಕನ್ನಡ ಪರ ಸಂಘಟನೆಗಳು ಬೆಳಗಾವಿ ಮಾತ್ರವಲ್ಲದೆ ಬೇರೆ ಬೇರೆ ನಗರಗಳಲ್ಲೂ ಪ್ರತಿಭಟನೆ ಮಾಡುತ್ತಿವೆ. ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಎಮ್ ಈ ಎಸ್ ಅನ್ನು ಹೇಗೆ ಸದೆಬಡಿಯಲಿದೆ ಎನ್ನುವುದನ್ನು ಇಡೀ ಕರ್ನಾಟಕ ಮಾತ್ರವಲ್ಲದೆ ಪಕ್ಕದ ಮಹಾರಾಷ್ಟ್ರ ಸಹ ಕಾತುರದಿಂದ ಎದುರು ನೋಡುತ್ತಿದ್ದವು. ಕರ್ನಾಟಕದೆಲ್ಲೆಡೆ ಎಮ್ ಈ ಎಸ್ ವಿರುದ್ಧ ವ್ಯಕ್ತವಾಗಿರುವ ರೊಚ್ಚಿಗೆ ತಕ್ಕನಾಗಿಯೇ ಬೊಮ್ಮಾಯಿ ಅವರು ಸೋಮವಾರ ಸದನದಲ್ಲಿ ಉತ್ತರ ಕೊಟ್ಟರು. ಎಮ್ ಈ ಎಸ್ ಪುಂಡರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಹೇಳಿದ ಮುಖ್ಯಮಂತ್ರಿಗಳು, ಈಗಾಗಲೇ ಬಂಧಿತರಾಗಿರುವ ಆರೋಪಿಗಳಿಗೆ ಜಾಮೀನು ಸಿಗದಂತೆ ಅವರ ವಿರುದ್ಧ ದೇಶದ್ರೋಹ ಮತ್ತು ಗೂಂಡಾ ಕಾಯ್ದೆ ಅಡಿ ಪ್ರಕರಣಗಳನ್ನು ದಾಖಲಿಲಾಗುವುದು ಎಂದು ಹೇಳಿದರು.

ಅದೆಲ್ಲ ಸರಿ, ಸೋಮವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರ ನಡೆದ ಅಧಿವೇಶನಕ್ಕೆ ಮಂಡ್ಯ ಜಿಲ್ಲೆ ಮಳವಳ್ಳಿಯ ಜೆಡಿ(ಎಸ್) ಶಾಸಕ ಅನ್ನದಾನಿ ಹಾಜರಾಗಿದ್ದು ಆಶ್ಚರ್ಯ ಹುಟ್ಟಿಸುವಂತಿತ್ತು. ಅವರು ಕನ್ನಡದ ಬಾವುಟವನ್ನು ತಮ್ಮ ಅಂಗಿಯೊಳಗೆ ಬಚ್ಟಿಟ್ಟುಕೊಂಡು ಹೋಗಿದ್ದು ಮಾಧ್ಯಮದ ಕೆಮೆರಾಗಳಲ್ಲಿ ಸೆರೆಯಾಗಿದೆ.

ಅವರ ವರ್ತನೆ ನೋಡಿ ಸುವರ್ಣ ಸೌಧದ ಬೌನ್ಸರ್​ಗಳಿಗೂ ಆಶ್ಚರ್ಯವಾಗಿದೆ. ಯಾಕೆ ಹಾಗೆ ಅಂತ ಮಾಧ್ಯಮದವರು ಕೇಳಿದಾಗ, ಎಮ್ ಈ ಎಸ್ ಪುಂಡರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಲು ಅಂತ ಅವರು ಹೇಳಿದರು.

ಒಟ್ಟಿನಲ್ಲಿ ಶಾಸಕರು ಯಾವ ಪಕ್ಷದವರಾದರೇನು, ಎಲ್ಲರ ಬಾಯಲ್ಲೂ ಒಂದೇ ಮಾತು-ಎಮ್ ಈ ಎಸ್ ಗೂಂಡಾಗಳಿಗೆ ತಕ್ಕ ಶಾಸ್ತಿಯಾಗಬೇಕು.

ಇದನ್ನೂ ಓದಿ:    ‘ನ್ಯಾಷನಲ್​ ಕ್ರಶ್​ ಅಂದಿದ್ದು ಯಾರು? ಬರೀ ಓವರ್​ ಆ್ಯಕ್ಟಿಂಗ್​’; ರಶ್ಮಿಕಾ ವಿಡಿಯೋಗೆ ನೆಗೆಟಿವ್​ ಕಮೆಂಟ್​ಗಳ ಸುರಿಮಳೆ

Follow us on

Click on your DTH Provider to Add TV9 Kannada