Govinda Birthday: ಕಡುಕಷ್ಟದಿಂದ ಬೆಳೆದು ಬಾಲಿವುಡ್ ಸ್ಟಾರ್ ಆಗುವ ತನಕ; ನಟ ಗೋವಿಂದ ಯಶಸ್ಸಿನ ಕಥಾನಕ ಇಲ್ಲಿದೆ

Happy Birthday Govinda: ಬಾಲಿವುಡ್ ನಟ ಗೋವಿಂದ ಅವರಿಗೆ ಜನ್ಮದಿನದ ಸಂಭ್ರಮ. ಕಷ್ಟದ ಬದುಕನ್ನು ಮೀರಿ, ಯಶಸ್ಸಿನತ್ತ ಹೆಜ್ಜೆ ಹಾಕಿದ ಅವರ ಪಯಣ ಸಿನಿಮಾದಷ್ಟೇ ರೋಚಕ. ಅವರ ನಿಜ ಬದುಕಿನ ಕತೆ ಇಲ್ಲಿದೆ.

Govinda Birthday: ಕಡುಕಷ್ಟದಿಂದ ಬೆಳೆದು ಬಾಲಿವುಡ್ ಸ್ಟಾರ್ ಆಗುವ ತನಕ; ನಟ ಗೋವಿಂದ ಯಶಸ್ಸಿನ ಕಥಾನಕ ಇಲ್ಲಿದೆ
ನಟ ಗೋವಿಂದ
Follow us
TV9 Web
| Updated By: shivaprasad.hs

Updated on: Dec 21, 2021 | 9:38 AM

 90ರ ದಶಕದಲ್ಲಿ ಬಾಲಿವುಡ್ ನಂಬರ್ 1 ಹೀರೋ ಪಟ್ಟ ಅಲಂಕರಿಸಿದ ನಟ ಗೋವಿಂದ (Govinda) ಅವರ ಬದುಕು ಕೂಡ ಒಂದು ಸಿನಿಮಾ ಕತೆಯೇ ಸರಿ. ಕಡುಕಷ್ಟದಿಂದ ಬೆಳೆದು, ನಂಬರ್ 1 ಪಟ್ಟಕ್ಕೇರಿದ ಅವರ ಬದುಕು ಇಂದಿನ ಅದೆಷ್ಟೋ ಯುವಕರಿಗೆ ಸ್ಪೂರ್ತಿಯೂ ಹೌದು. ಅವರು ನಂಬರ್ 1 ಸ್ಥಾನಕ್ಕೆ ಏರುವ ಮುನ್ನ ಕಡುಕಷ್ಟದ ಸ್ಥಿತಿಗಳನ್ನು ದಾಟಿ ಬಂದವರು. ಇಂತಹ ನಟನ ಬದುಕಿನ ಕತೆ ಇಲ್ಲಿದೆ. ಗೋವಿಂದ ಅವರ ತಂದೆ ಅರುಣ್ ಅಹುಜಾ (Arun Ahuja) ನಿರ್ಮಿಸಿದ್ದ ಚಿತ್ರವೊಂದು ಬಾಕ್ಸಾಫೀಸ್​ನಲ್ಲಿ ದಾರುಣವಾಗಿ ಸೋಲು ಕಂಡಿತು. ಆಗ ಗೋವಿಂದ ಇನ್ನೂ ಸಣ್ಣವರು. 1997 ರಲ್ಲಿ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ, ಗೋವಿಂದ ಅವರು ತಮ್ಮ ಕಷ್ಟದ ದಿನಗಳನ್ನು ಮೆಲುಕು ಹಾಕಿದ್ದರು. ಅದರಲ್ಲಿ ಅವರು, ಜೀವನದಲ್ಲಿ ಒಂದು ಹಂತದಲ್ಲಿ ದಿನಸಿ ಕೊಳ್ಳಲು ಕೂಡ ಹಣವಿರಲಿಲ್ಲ. ಮತ್ತು ಅಂಗಡಿಗಳಲ್ಲಿ ದಿನಸಿಗಾಗಿ ಲೆಕ್ಕ ಬರೆಸಿ ತರುತ್ತಿದ್ದದಾಗ, ಬಾಕಿ ಪೂರೈಸದ ಕಾರಣ ಅವಮಾನಿಸಲ್ಪಟ್ಟಿದ್ದೆ ಎಂದು ಹೇಳಿಕೊಂಡಿದ್ದರು.

ಅಲ್ಲದೇ ಗೋವಿಂದ ಅವರ ಕುಟುಂಬಕ್ಕೆ, ದಿನಸಿ ಕೊಳ್ಳಲು ಹಣವಿಲ್ಲ ಎಂಬುದನ್ನು ತಿಳಿದಿದ್ದ ಅಂಗಡಿ ಮಾಲೀಕರು, ಲೆಕ್ಕ ಬರೆಸುತ್ತಾರೆ ಎಂಬ ಕಾರಣಕ್ಕೆ ಗಂಟೆಗಳ ಕಾಲ ಸುಮ್ಮನೆ ಕಾಯಿಸುತ್ತಿದ್ದರಂತೆ. ಇದನ್ನೆಲ್ಲಾ ಕಂಡ ಅವರು ನಂತರದಲ್ಲಿ ಅಂಗಡಿಗೆ ಹೋಗಲು ನಿರಾಕರಿಸಿದರಂತೆ. ಅದನ್ನು ನೋಡಿ ಅವರ ತಾಯಿ ಅಳಲು ಪ್ರಾರಂಭಿಸಿದರಂತೆ. ‘‘ಆ ವೇಳೆ ನಾನೂ ಅವರೊಂದಿಗೆ ಅಳುತ್ತಿದ್ದೆ’’ ಎಂದು ಗೋವಿಂದ ಹೇಳಿಕೊಂಡಿದ್ದರು. ಈ ಎಲ್ಲಾ ಕಷ್ಟವನ್ನು ಮೆಟ್ಟಿನಿಂತ ಅವರು ನಂತರ ಇತಿಹಾಸ ಸೃಷ್ಟಿಸಿದರು.

ಬಾಲಿವುಡ್ ಸ್ಟಾರ್ ಆದ ಗೋವಿಂದ: ಗೋವಿಂದ 1986 ರಲ್ಲಿ ‘ಲವ್ 86’ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು ಮತ್ತು ಅಲ್ಲಿಂದ ಅವರು ಹಿಂತಿರುಗಿ ನೋಡಲಿಲ್ಲ. ‘ಇಲ್ಜಾಮ್’, ‘ಆಂಖೇನ್’, ‘ರಾಜಾ ಬಾಬು’, ‘ಹೀರೋ ನಂ 1’, ‘ಬಡೇ ಮಿಯಾನ್ ಚೋಟೆ ಮಿಯಾನ್’ ಮತ್ತು ‘ಹಸೀನಾ ಮಾನ್ ಜಾಯೇಗಿ’ಯಂತಹ ಹಿಟ್‌ ಚಿತ್ರಗಳನ್ನು ನೀಡಿ, 80 ಹಾಗೂ 90ರ ದಶಕದ ಪ್ರಮುಖ ಬಾಲಿವುಡ್ ತಾರೆಯಾಗಿ ಗುರುತಿಸಿಕೊಂಡರು. ಅವರ ಕಾಮಿಡಿ ಟೈಮಿಂಗ್ ಮತ್ತು ಡ್ಯಾನ್ಸ್ ಮೂವ್‌ಗಳಿಗಾಗಿ ಅಪಾರ ಅಭಿಮಾನಿ ಬಳಗ ಸೃಷ್ಟಿಯಾಯಿತು.

ಹಿಂದೆ ಒಮ್ಮೆ ಗೋವಿಂದ ಅವರು ಆಸ್ಕರ್ ಗೆಲ್ಲುವ ತಮ್ಮ ಕನಸಿನ ಕುರಿತು ಹೇಳಿಕೊಂಡಿದ್ದರು. ‘‘ಅವನಿಗೆ ನೆಟ್ಟಗೆ ಇಂಗ್ಲೀಷ್ ಕೂಡ ಮಾತನಾಡಲು ಬರುವುದಿಲ್ಲ, ಆಸ್ಕರ್ ಹೇಗೆ ಗೆಲ್ಲುತ್ತಾನೆ ಎಂದು ಜನರು ಮಾತನಾಡಿಕೊಂಡಿದ್ದರು. ಆದರೆ ಏನೂ ಅಲ್ಲದ ನಾನು ಗೋವಿಂದನಾಗಲು ಸಾಧ್ಯವಾಗುವುದಾದರೆ, ಗೋವಿಂದನಿಂದ ಮತ್ತೇನೋ ಆಗಲು ಕೂಡ ಸಾಧ್ಯವಿದೆ’’ ಎಂದಿದ್ದರು.

ಈಗಲೂ ಸಖತ್ ಅಪ್ಡೇಟ್ ಆಗಿದ್ದಾರೆ ನಟ ಗೋವಿಂದ: ಗೋವಿಂದ ಅವರು ಕೊನೆಯದಾಗಿ ಬೆಳ್ಳಿ ತೆರೆಯಲ್ಲಿ ಕಾಣಿಸಿಕೊಂಡಿದ್ದು, ‘ರಂಗೀಲಾ ರಾಜಾ’ ಚಿತ್ರದಲ್ಲಿ. ಪ್ರಸ್ತುತ ಅವರು, ಮ್ಯೂಸಿಕ್ ವಿಡಿಯೋಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದಾರೆ. ಅವರ ‘ಟಿಪ್ ಟಿಪ್ ಪಾನಿ ಬರ್ಸಾ’ ಮೊದಲ ಆಲ್ಬಂ ಸಾಂಗ್ ಆಗಿತ್ತು. ಇದೀಗ ಅವರು ತಮ್ಮ ಮೂರನೆಯ ಹಾಡಾದ ‘ಹೆಲ್ಲೋ’ ಮೂಲಕ ಕಾಣಿಸಿಕೊಳ್ಳಲಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಹೀಗೆ ಕಡುಕಷ್ಟದಿಂದ ಮೇಲೆ ಬಂದು, ಬಾಲಿವುಡ್​ನಲ್ಲಿ ಮೆರೆದ ಗೋವಿಂದ ಅವರು, ಅಪ್ಡೇಟ್ ಆಗಿ, ಹೊಸ ಮಾದರಿಯ ಹಾಡುಗಳೊಂದಿಗೂ ಗುರುತಿಸಿಕೊಂಡಿದ್ದಾರೆ. ಪಕ್ಕಾ ಸಿನಿಮಾ ಕತೆಯಂತೆ, ಸಾಕಷ್ಟು ಏಳುಬೀಳುಗಳಿಂದ ಕೂಡಿದ ಅವರ ನಿಜ ಜೀವನ ಎಷ್ಟೋ ಜನರಿಗೆ ಸ್ಪೂರ್ತಿದಾಯಕವೂ ಹೌದು. ಇಂದು ಅವರು 58ನೇ ವಸಂತಕ್ಕೆ ಕಾಲಿಟ್ಟಿದ್ದು, ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

ಅನಾರೋಗ್ಯದಿಂದ ಬಳಲುತ್ತಿರುವ ಹುಡುಗಿಗೆ ವಿಡಿಯೋ ಕಾಲ್ ಮೂಲಕ ಧೈರ್ಯ ತುಂಬಿದರು ಮೆಗಾಸ್ಟಾರ್ ರಜಿನೀಕಾಂತ್

Tamannaah Bhatia Birthday: 32ನೇ ವಸಂತಕ್ಕೆ ಕಾಲಿಟ್ಟ ತಮನ್ನಾ; ಮಿಲ್ಕಿ ಬ್ಯೂಟಿ ಕುರಿತು ನಿಮಗೆ ತಿಳಿದಿಲ್ಲದ ಸಂಗತಿಗಳು ಇಲ್ಲಿವೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ