AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamannaah Bhatia Birthday: 32ನೇ ವಸಂತಕ್ಕೆ ಕಾಲಿಟ್ಟ ತಮನ್ನಾ; ಮಿಲ್ಕಿ ಬ್ಯೂಟಿ ಕುರಿತು ನಿಮಗೆ ತಿಳಿದಿಲ್ಲದ ಸಂಗತಿಗಳು ಇಲ್ಲಿವೆ

Happy Birthday Tamannaah Bhatia: ಭಾರತೀಯ ಚಿತ್ರರಂಗದಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿರುವ ‘ಮಿಲ್ಕಿ ಬ್ಯೂಟಿ’ ತಮನ್ನಾ ಭಾಟಿಯಾ ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಕುರಿತ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

Tamannaah Bhatia Birthday: 32ನೇ ವಸಂತಕ್ಕೆ ಕಾಲಿಟ್ಟ ತಮನ್ನಾ; ಮಿಲ್ಕಿ ಬ್ಯೂಟಿ ಕುರಿತು ನಿಮಗೆ ತಿಳಿದಿಲ್ಲದ ಸಂಗತಿಗಳು ಇಲ್ಲಿವೆ
‘ಬಾಹುಬಲಿ’ ಚಿತ್ರದಲ್ಲಿ ತಮನ್ನಾ ಭಾಟಿಯಾ
TV9 Web
| Updated By: shivaprasad.hs|

Updated on: Dec 21, 2021 | 8:12 AM

Share

ಟಾಲಿವುಡ್ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಇಂದು 32ನೇ ವಸಂತಕ್ಕೆ ಕಾಲಿಟ್ಟಿದ್ದು, ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮುಂಬೈ ಮೂಲದ ಈ ನಟಿ ಹಿಂದಿ ಚಿತ್ರಗಳಿಗಿಂತ ಹೆಚ್ಚಾಗಿ ಗುರುತಿಸಿಕೊಂಡಿದ್ದು ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ. ‘ಬಾಹುಬಲಿ’ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡ ತಮನ್ನಾ, ನಂತರ ‘ಸೈ ರಾ ನರಸಿಂಹ ರೆಡ್ಡಿ’ ಚಿತ್ರದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿ ಭಾರತದ ಮಟ್ಟದಲ್ಲಿ ಸ್ಟಾರ್ ನಟಿಯಾದರು. ಕೆಜಿಎಫ್ ಚಿತ್ರದಲ್ಲಿ ಹಾಡೊಂದರಲ್ಲೂ ಅವರು ಕಾಣಿಸಿಕೊಂಡು ಹೆಜ್ಜೆ ಹಾಕಿ, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಇಷ್ಟೆಲ್ಲಾ ಬೇಡಿಕೆಯಿದ್ದರೂ ಈ ನಟಿ ಪ್ರಸ್ತುತ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವತ್ತ ಒಲವು ತೋರುತ್ತಿದ್ದಾರೆ. ಜತೆಗೆ ಮಹಿಳಾ ಪ್ರಧಾನ ಚಿತ್ರಗಳಲ್ಲೂ ಅವರು ಬಣ್ಣ ಹಚ್ಚುತ್ತಿದ್ದಾರೆ. ತಮನ್ನಾ ಬತ್ತಳಿಕೆಯಲ್ಲಿ ಈಗ ಕನಿಷ್ಠ ಐದಾರು ಚಿತ್ರಗಳಿವೆ. ಅವುಗಳಲ್ಲಿ ವೆಂಕಟೇಶ್ ಜತೆ ಕಾಣಿಸಿಕೊಂಡಿರುವ ‘ಎಫ್ 3’, ಚಿರಂಜೀವಿ ಜತೆ ಬಣ್ಣ ಹಚ್ಚಿರುವ ‘ಭೋಲಾ ಶಂಕರ್’ ಚಿತ್ರಗಳಿವೆ. ಇದಲ್ಲದೇ ‘ಗುರ್ತುಂದಾ ಸೀತಾಕಾಲಮ್’ ಹಾಗೂ ‘ಪ್ಲಾನ್ ಎ ಪ್ಲಾನ್ ಬಿ’ ಎಂಬ ಹಿಂದಿ ಚಿತ್ರದಲ್ಲೂ ತಮನ್ನಾ ಕಾಣಿಸಿಕೊಳ್ಳುತ್ತಿದ್ದಾರೆ.

‘ಮಿಲ್ಕಿ ಬ್ಯೂಟಿ’ (Milky Beauty) ಎಂದು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ತಮನ್ನಾ ಅವರದ್ದು ವೈವಿಧ್ಯಮಯ ವ್ಯಕ್ತಿತ್ವ ಹಾಗೂ ಬಣ್ಣದ ಬದುಕೂ ಕುತೂಹಲಕಾರಿ ಪಯಣ. ಅವರ ಕುರಿತು ಎಲ್ಲರಿಗೂ ತಿಳಿದಿರದ ಅಪರೂಪದ ಸಂಗತಿಗಳು ಇಲ್ಲಿವೆ.

1. ತಮನ್ನಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು ತಮ್ಮ 15ನೇ ವಯಸ್ಸಿನಲ್ಲಿ. ಅದೂ ಹಿಂದಿ ಚಿತ್ರದ ಮೂಲಕ. 2005ರಲ್ಲಿ ‘ಚಾಂದ್ ಸಾ ರೋಷನ್ ಚೆಹ್ರಾ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅದು ಕಮರ್ಷಿಯಲ್ ಸಕ್ಸಸ್ ಆಯಿತು.

2. ತಮನ್ನಾ ಹಿಂದಿ ಚಿತ್ರದ ಮೂಲಕ ಪದಾರ್ಪಣೆ ಮಾಡಿದ ವರ್ಷವೇ ತೆಲುಗು ಚಿತ್ರ ‘ಶ್ರೀ’ ಮೂಲಕ ಟಾಲಿವುಡ್ ಪ್ರವೇಶಿಸಿದರು. 2006ರಲ್ಲಿ ತಮಿಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಅಲ್ಲಿಂದ ಅವರು ಹಿಂತಿರುಗಿ ನೋಡಿದ್ದೇ ಇಲ್ಲ.

3. ನಾಯಕಿಯಾಗಿ ಮನಮೋಹಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತಮನ್ನಾ, ಈ ಪರಂಪರೆಯನ್ನು ಸ್ವತಃ ತಾವೇ ಮುರಿದರು. ರವಿ ಕೃಷ್ಣ ಅವರ ‘ಕೇಡಿ’(KD) ಚಿತ್ರದಲ್ಲಿ ತಮನ್ನಾ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದರು.

4. ಇತರ ಹಲವು ತಾರೆಯರಂತೆ ತಮನ್ನಾ ಕೂಡ ಸಂಖ್ಯಾಶಾಸ್ತ್ರದ ಪ್ರಕಾರ ಹೆಸರನ್ನು ಬದಲಾಯಿಸಿದ್ದಾರೆ. ಅವರು ಸಂಪೂರ್ಣ ಹೆಸರು ಬದಲಾಯಿಸಲ್ಲ, ಆದರೆ ತಮನ್ನಾ (Tamannaah) ಪದದ ಅಕ್ಷರಗಳನ್ನು ಬದಲಾಯಿಸಿಕೊಂಡರು.

5. ತಮನ್ನಾ ಚಿತ್ರರಂಗವಲ್ಲದೇ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಆಭರಣಕ್ಕೆ ಸಂಬಂಧಪಟ್ಟಂತೆ ‘ವೈಟ್ ಆಂಡ್ ಗೋಲ್ಡ್’ ಎಂಬ ಉದ್ಯಮ ಸಂಸ್ಥೆಯನ್ನೂ ಅವರು ಹುಟ್ಟುಹಾಕಿದ್ದಾರೆ.

6. ತಮನ್ನಾ ಬರಹಗಾರ್ತಿಯೂ ಹೌದು. ಅವರ ಮೊದಲ ಪುಸ್ತಕ ‘ಬ್ಯಾಕ್ ಟು ದಿ ರೂಟ್ಸ್’ (Back To the Roots) ಅನ್ನು ಪ್ರತಿಷ್ಠಿತ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದ್ದು (Penguin Random house India), ಈ ವರ್ಷ ಅಂದರೆ 2021ರ ಆಗಸ್ಟ್​​ನಲ್ಲಿ ಪುಸ್ತಕ ಬಿಡುಗಡೆಯಾಗಿದೆ.

ಇದನ್ನೂ ಓದಿ:

1983ರ ವಿಶ್ವಕಪ್​ ಟೀಮ್​ ಆಟಗಾರರಿಗೆ ಈಗ ಸಿಕ್ಕಿದೆ ಕೋಟಿ ಕೋಟಿ ಸಂಭಾವನೆ; ಕಪಿಲ್​ ದೇವ್​ಗೆ 5 ಕೋಟಿ

ಮುಂಬೈನಲ್ಲಿ ಒಟ್ಟಾಗಿ ಡಿನ್ನರ್​ ಮಾಡಿದ ವಿಜಯ್​ ದೇವರಕೊಂಡ-ರಶ್ಮಿಕಾ; ಮತ್ತೆ ಹುಟ್ಟಿತು ಅನುಮಾನ