ಸಿನಿಪ್ರಿಯರಿಗೆ ನಿರಾಸೆ ಮೂಡಿಸಿದ ‘ಆರ್​ಆರ್​ಆರ್​’; ಅಧಿಕೃತವಾಗಿ ಚಿತ್ರದ ರಿಲೀಸ್​ ಡೇಟ್​ ಮುಂದೂಡಿಕೆ

RRR release date postponed: ಬಹುನಿರೀಕ್ಷಿತ ‘ಆರ್​ಆರ್​ಆರ್​’ ಚಿತ್ರದ ಬಿಡುಗಡೆ ದಿನಾಂಕ ಮುಂದೂಡಿಕೆ ಆಗಿದೆ. ಚಿತ್ರತಂಡದ ಈ ನಿರ್ಧಾರದಿಂದ ಸಿನಿಪ್ರಿಯರಿಗೆ ನಿರಾಸೆ ಆಗಿದೆ.

ಸಿನಿಪ್ರಿಯರಿಗೆ ನಿರಾಸೆ ಮೂಡಿಸಿದ ‘ಆರ್​ಆರ್​ಆರ್​’; ಅಧಿಕೃತವಾಗಿ ಚಿತ್ರದ ರಿಲೀಸ್​ ಡೇಟ್​ ಮುಂದೂಡಿಕೆ
ರಾಮ್​ ಚರಣ್​, ಜ್ಯೂ, ಎನ್​ಟಿಆರ್​
Follow us
TV9 Web
| Updated By: ಮದನ್​ ಕುಮಾರ್​

Updated on:Jan 01, 2022 | 5:36 PM

ದೇಶಾದ್ಯಂತ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ (Omicron Cases In India) ಹೆಚ್ಚುತ್ತಿದೆ. ಇದರ ನೇರ ಪರಿಣಾಮ ಅನೇಕ ಉದ್ಯಮಗಳ ಮೇಲೆ ಆಗುತ್ತಿದೆ. ಅದರಲ್ಲೂ ಚಿತ್ರೋದ್ಯಮ ಮತ್ತೆ ಸಂಕಷ್ಟ ಎದುರಿಸುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಅನೇಕ ಸಿನಿಮಾಗಳು ರಿಲೀಸ್​ ದಿನಾಂಕವನ್ನು ಮುಂದೂಡಿಕೊಳ್ಳುತ್ತಿವೆ. ಅದರ ಮೊದಲ ಹಂತವಾಗಿ ‘ಆರ್​ಆರ್​ಆರ್​’ ಚಿತ್ರದ ರಿಲೀಸ್​ ಡೇಟ್​ ಮುಂದೂಡಿಕೆ (RRR movie release date postpone) ಆಗಿದೆ. ಅದನ್ನು ಅಧಿಕೃತವಾಗಿಯೇ ಚಿತ್ರತಂಡ ಘೋಷಿಸಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.7ರಂದು ಈ ಚಿತ್ರ ಬಿಡುಗಡೆ ಆಗಬೇಕಿತ್ತು. ಆದರೆ ಮೂರನೇ ಅಲೆಯ ಆತಂಕದಲ್ಲಿ ‘ಆರ್​ಆರ್​ಆರ್​’ (RRR Movie) ಚಿತ್ರದ ಬಿಡುಗಡೆ ದಿನಾಂಕ ಪೋಸ್ಟ್​ಪೋನ್​ ಆಗಿದೆ. ಈ ಚಿತ್ರಕ್ಕೆ ರಾಜಮೌಳಿ (SS Rajamouli) ನಿರ್ದೇಶನ ಮಾಡಿದ್ದು, ರಾಮ್​ ಚರಣ್​ (Ram Charan) ಮತ್ತು ಜ್ಯೂ. ಎನ್​ಟಿಆರ್​ (Jr NTR) ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಆದಷ್ಟು ಬೇಗ ಈ ಚಿತ್ರವನ್ನು ನೋಡಬೇಕು ಎಂದು ಕಾಯುತ್ತಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದೆ.

ರಾಜಮೌಳಿ ನಿರ್ದೇಶನದ ಸಿನಿಮಾ ಎಂಬ ಕಾರಣ ‘ಆರ್​ಆರ್​ಆರ್​’ ಮೇಲೆ ಹೆಚ್ಚು ನಿರೀಕ್ಷೆ ಇದೆ. ನಟಿ ಆಲಿಯಾ ಭಟ್​ ಅವರು ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟಿದ್ದಾರೆ. ಅಜಯ್​ ದೇವಗನ್​ ಅವರು ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಪ್ಯಾನ್​​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಬೇಕು. ಆದರೆ ಹಲವು ಕಡೆಗಳಲ್ಲಿ ಚಿತ್ರಮಂದಿಗರಳು ಕ್ಲೋಸ್​ ಆಗುತ್ತಿವೆ. ಇನ್ನೂ ಕೆಲವೆಡೆ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಇದೆ. ಇಂಥ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಸೂಕ್ತ ಅಲ್ಲ ಎಂದು ‘ಆರ್​ಆರ್​ಆರ್​’ ತಂಡ ನಿರ್ಧರಿಸಿದೆ.

‘ಎಲ್ಲರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ನಮ್ಮ ಸಿನಿಮಾದ ಬಿಡುಗಡೆಯನ್ನು ಮುಂದೂಡಬೇಕಾಗಿದೆ. ಅಭಿಮಾನಿಗಳ ಮತ್ತು ಪ್ರೇಕ್ಷಕರ ಅಪರಿಮಿತ ಪ್ರೀತಿಗೆ ಧನ್ಯವಾದಗಳು. ನಮ್ಮ ನಿರಂತರ ಪ್ರಯತ್ನಗಳ ಹೊರತಾಗಿಯೂ ಕೆಲವು ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಭಾರತದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳು ಕ್ಲೋಸ್​ ಆಗುತ್ತಿವೆ. ಸಿನಿಮಾ ನೋಡಲು ನೀವು ಇನ್ನಷ್ಟು ದಿನ ಕಾಯಿರಿ ಎಂದು ಹೇಳುವುದರ ಹೊರತಾಗಿ ಬೇರೆ ಆಯ್ಕೆ ಉಳಿದಿಲ್ಲ. ಭಾರತೀಯ ಸಿನಿಮಾರಂಗದ ವೈಭವ ಸರಿಯಾದ ಸಮಯದಲ್ಲಿ ಮತ್ತೆ ಮರಳುವಂತೆ ಮಾಡುತ್ತೇವೆ ಅಂತ ನಾವು ಭರವಸೆ ನೀಡುತ್ತೇವೆ’ ಎಂದು ಆರ್​ಆರ್​ಆರ್​ ಚಿತ್ರದ ಅಧಿಕೃತ ಸೋಶಿಯಲ್​ ಮೀಡಿಯಾ ಖಾತೆ ಮೂಲಕ ಅನೌನ್ಸ್​ ಮಾಡಲಾಗಿದೆ.

ಇದನ್ನೂ ಓದಿ:

‘ಆರ್​ಆರ್​ಆರ್​’ ಚಿತ್ರದಲ್ಲಿ ಆಲಿಯಾ, ಅಜಯ್​ ದೇವಗನ್​ ಅತಿಥಿ ಪಾತ್ರ; ಸತ್ಯ ಬಾಯ್ಬಿಟ್ಟ ರಾಜಮೌಳಿ

‘ಆರ್​ಆರ್​ಆರ್​’ ಬೆಂಗಳೂರು ಪ್ರೀ ರಿಲೀಸ್​ ಇವೆಂಟ್ ಮುಂದಕ್ಕೆ

Published On - 5:17 pm, Sat, 1 January 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ