ನಿಖಿಲ್ ಕುಮಾರ್ಗೆ ಬರ್ತ್ಡೇ ಸಂಭ್ರಮ; ಹೊಸ ಸಿನಿಮಾ ಟೈಟಲ್ ತಿಳಿಯಲು ಅಭಿಮಾನಿಗಳ ಕಾತರ
Happy birthday Nikhil Kumar: ನಿಖಿಲ್ ಕುಮಾರ್ ಅವರಿಗೆ ಕಳೆದ ವರ್ಷ ಮಗು ಜನಿಸಿದೆ. ಮಗು ಜನಿಸಿದ ನಂತರ ಅವರು ಆಚರಿಸಿಕೊಳ್ಳುತ್ತಿರುವ ಮೊದಲ ಬರ್ತ್ಡೇ ಇದು. ಈ ಕಾರಣಕ್ಕೆ ಈ ದಿನ ಅವರಿಗೆ ವಿಶೇಷ ಆಗಬೇಕಿತ್ತು. ಆದರೆ, ಹಾಗಾಗಿಲ್ಲ.
ನಿಖಿಲ್ ಕುಮಾರ್ ಅವರಿಗೆ ಇಂದು (ಜನವರಿ 22) ಬರ್ತ್ಡೇ (Nikhil Kumar Birthday) ಸಂಭ್ರಮ. ಸಿನಿಮಾರಂಗ ಹಾಗೂ ರಾಜಕೀಯ ಎರಡರಲ್ಲೂ ಬ್ಯುಸಿ ಇರುವ ನಿಖಿಲ್ಗೆ ಅಭಿಮಾನಿಗಳು, ರಾಜಕೀಯ ನಾಯಕರು ಹಾಗೂ ಚಿತ್ರರಂಗದವರು ಶುಭಾಶಯ ತಿಳಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (Social Media) ಅಭಿಮಾನಿಗಳು ನಿಖಿಲ್ ಫೋಟೋ ಪೋಸ್ಟ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಅವರ ಹೊಸ ಸಿನಿಮಾ ಟೈಟಲ್ ಇಂದು ರಿವೀಲ್ ಆಗಲಿದೆ. ಇದಕ್ಕಾಗಿ ಅಭಿಮಾನಿಗಳು ಕಾದಿದ್ದಾರೆ. ಚಿತ್ರದ ಟೈಟಲ್ ಏನಿರಬಹುದು ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.
ನಿಖಿಲ್ ಕುಮಾರ್ ಅವರಿಗೆ ಕಳೆದ ವರ್ಷ ಮಗು ಜನಿಸಿದೆ. ಮಗು ಜನಿಸಿದ ನಂತರ ಅವರು ಆಚರಿಸಿಕೊಳ್ಳುತ್ತಿರುವ ಮೊದಲ ಬರ್ತ್ಡೇ ಇದು. ಈ ಕಾರಣಕ್ಕೆ ಈ ದಿನ ಅವರಿಗೆ ವಿಶೇಷ ಆಗಬೇಕಿತ್ತು. ಆದರೆ, ಕೊವಿಡ್ ಪ್ರಕರಣ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಜನರು ಸೇರಿದರೆ ಕೊವಿಡ್ ವೇಗವಾಗಿ ಹೆಚ್ಚಬಹುದು. ಹೀಗಾಗಿ, ಅವರು ಈ ವರ್ಷ ಅಭಿಮಾನಿಗಳ ಜತೆಗೂಡಿ ಬರ್ತ್ಡೇ ಆಚರಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದ್ದಾರೆ. ಇದು ಅವರ ಫ್ಯಾನ್ಸ್ಗೆ ಕೊಂಚ ಬೇಸರ ತರಿಸಿದೆ. ಆದರೆ, ಬೇರೆ ದಾರಿ ಇಲ್ಲ. ಹೀಗಾಗಿ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಿಖಿಲ್ಗೆ ವಿಶ್ ಮಾಡಿ ಸಂಭ್ರಮಿಸುತ್ತಿದ್ದಾರೆ.
ನಿಖಿಲ್ ಕುಮಾರ್ ಹೊಸ ಸಿನಿಮಾದ ಶೂಟಿಂಗ್ಗೆ ಇಳಿದಿದ್ದಾರೆ. ಈ ಸಿನಿಮಾವನ್ನು ಮಂಜು ಅಥರ್ವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಮಂಜು ಚಿತ್ರರಂಗದಲ್ಲಿ ಇದ್ದಾರೆ. ಯಶ್ ನಟನೆಯ ‘ಮಾಸ್ಟರ್ ಪೀಸ್’, ಶಿವರಾಜ್ಕುಮಾರ್ ಅಭಿನಯದ ‘ಮಫ್ತಿ’ ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ನೆನಪಿರಲಿ ಪ್ರೇಮ್ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’ ಸಿನಿಮಾಗೆ ಕೋ-ಡೈರೆಕ್ಟರ್ ಕೂಡ ಆಗಿದ್ದರು. ಇದೀಗ ಅವರು ನಿಖಿಲ್ ಅವರ ಸಿನಿಮಾದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದುಕೊಳ್ಳುತ್ತಿದ್ದಾರೆ. ಈ ಚಿತ್ರದ ಟೈಟಲ್ ಇಂದು ಘೋಷಣೆ ಆಗಲಿದೆ. ಜತೆಗೆ ಫಸ್ಟ್ ಪೋಸ್ಟರ್ ಕೂಡ ರಿಲೀಸ್ ಆಗುತ್ತಿದೆ. ಈ ಮೂಲಕ ನಿಖಿಲ್ ಬರ್ತ್ಡೇಗೆ ಅಭಿಮಾನಿಗಳಿಗೆ ಚಿತ್ರತಂಡದಿಂದ ಗಿಫ್ಟ್ ಸಿಗುತ್ತಿದೆ.
ಇದನ್ನೂ ಓದಿ: ನಿಖಿಲ್ ಕುಮಾರ್ ಹೊಸ ಚಿತ್ರಕ್ಕೆ ಸಿಕ್ತು ಚಾಲನೆ; ಯಶ್ ಚಿತ್ರದಲ್ಲಿ ಕೆಲಸ ಮಾಡಿದವರೇ ಈಗ ಡೈರೆಕ್ಟರ್
ಕೊವಿಡ್ ಹಿನ್ನೆಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್; ಅಭಿಮಾನಿಗಳಲ್ಲಿ ವಿಶೇಷ ಮನವಿ