AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ಹಿನ್ನೆಲೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್​; ಅಭಿಮಾನಿಗಳಲ್ಲಿ ವಿಶೇಷ ಮನವಿ

Nikhil Kumaraswamy Birthday: ಬರ್ತ್​ಡೇ ಕುರಿತು ನಿಖಿಲ್​ ಕುಮಾರಸ್ವಾಮಿ ಅವರ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕವೇ ಎಲ್ಲರೂ ಮುಂಚಿತವಾಗಿ ವಿಶ್​ ಮಾಡುತ್ತಿದ್ದಾರೆ.

ಕೊವಿಡ್​ ಹಿನ್ನೆಲೆಯಲ್ಲಿ ನಿಖಿಲ್​ ಕುಮಾರಸ್ವಾಮಿ ಹುಟ್ಟುಹಬ್ಬ ಆಚರಣೆ ಕ್ಯಾನ್ಸಲ್​; ಅಭಿಮಾನಿಗಳಲ್ಲಿ ವಿಶೇಷ ಮನವಿ
ಪತ್ನಿ ರೇವತಿ ಮತ್ತು ಮಗು ಜೊತೆ ನಿಖಿಲ್​ ಕುಮಾರಸ್ವಾಮಿ
TV9 Web
| Edited By: |

Updated on: Jan 21, 2022 | 3:21 PM

Share

ಕೊರೊನಾ ವೈರಸ್​ (Coronavirus) ಹಾವಳಿಯಿಂದಾಗಿ ಅನೇಕ ಸಂಭ್ರಮಾಚರಣೆಗಳಿಗೆ ಬ್ರೇಕ್​ ಬಿದ್ದಿದೆ. ಕೊವಿಡ್​ ನಿಯಮಾವಳಿಗಳನ್ನು ಪಾಲಿಸುತ್ತ ಹುಟ್ಟುಹಬ್ಬದಂತಹ ಸೆಲೆಬ್ರೇಷನ್​ ಮಾಡುವುದು ಕಷ್ಟಸಾಧ್ಯ. ಅಲ್ಲದೇ, ಕೊರೊನಾ ಹರಡುವ ಭೀತಿ ಇರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕಿರುವುದು ಅತ್ಯಗತ್ಯ. ಅದೇ ಕಾರಣದಿಂದ ನಟ-ರಾಜಕಾರಣಿ ನಿಖಿಲ್​ ಕುಮಾರಸ್ವಾಮಿ ಅವರು ಈ ಬಾರಿ ತಮ್ಮ ಬರ್ತ್​ಡೇ ಆಚರಿಸಿಕೊಳ್ಳುತ್ತಿಲ್ಲ. ಅದನ್ನು ಸೋಶಿಯಲ್ ಮೀಡಿಯಾ ಮೂಲಕ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಜ.22ರಂದು ನಿಖಿಲ್​ ಕುಮಾರಸ್ವಾಮಿ ಹುಟ್ಟುಹಬ್ಬ(Nikhil Kumaraswamy Birthday) . ರಾಜಕೀಯ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲಿ ನಿಖಿಲ್​ ಸಕ್ರಿಯರಾಗಿರುವ ಕಾರಣ ಅವರ ಜನ್ಮದಿನವನ್ನು ಸಂಭ್ರಮಿಸಲು ಅನೇಕ ಜನರು ಒಂದೆಡೆ ಸೇರುತ್ತಾರೆ. ಆದರೆ ಈ ಬಾರಿ ಕೊವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಬರ್ತ್​ಡೇ ಆಚರಿಸಿಕೊಳ್ಳದಿರಲು ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ನಿರ್ಧರಿಸಿದ್ದಾರೆ. ಅದರ ಜೊತೆಗೆ ಅಭಿಮಾನಿಗಳಲ್ಲಿ ಒಂದು ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ.

ಹುಟ್ಟುಹಬ್ಬಕ್ಕಿಂತ ಒಂದು ದಿನ ಮುಂಚಿತವಾಗಿ, ಅಂದರೆ ಜ.21ರಂದು ನಿಖಿಲ್​ ಕುಮಾರಸ್ವಾಮಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್​ ಮಾಡಿದ್ದಾರೆ. ‘ಕೊವಿಡ್ ಸಂಕಷ್ಟದ ಸಮಯದಲ್ಲಿ ಅದ್ದೂರಿ ಹುಟ್ಟುಹಬ್ಬದ ಆಚರಣೆಗೆ ನನ್ನ ಮನಸ್ಸು ಒಪ್ಪುತ್ತಿಲ್ಲ. ಹಾಗಾಗಿ ಈ ವರ್ಷ ನಾನು ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿಲ್ಲ. ಕೊವಿಡ್ ಸಂಕಷ್ಟದಲ್ಲಿ ಇರುವವರಿಗೆ ಅಭಿಮಾನಿಗಳು, ಕಾರ್ಯಕರ್ತರು ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ತಾವಿದ್ದಲ್ಲಿಂದಲೇ ನನಗೆ ಹರಸಿ. ಒಂದು ಅರ್ಥಪೂರ್ಣ ಆಚರಣೆಗೆ ಕೈಜೋಡಿಸಿ’ ಎಂದು ನಿಖಿಲ್​ ಮನವಿ ಮಾಡಿಕೊಂಡಿದ್ದಾರೆ.

ನಿಖಿಲ್​ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕವೇ ಎಲ್ಲರೂ ಮುಂಚಿತವಾಗಿ ವಿಶ್​ ಮಾಡುತ್ತಿದ್ದಾರೆ. ಬರ್ತ್​ಡೇ ಪ್ರಯುಕ್ತ ಅಭಿಮಾನಿಗಳಿಗೆ ಹೊಸ ಗಿಫ್ಟ್​ ಸಿಗಲಿದೆ. ಏನದು? ನಿಖಿಲ್​ ಕುಮಾರಸ್ವಾಮಿ ನಟಿಸಲಿರುವ ಹೊಸ ಚಿತ್ರದ ಟೈಟಲ್​ ಲಾಂಚ್​ ಆಗಲಿದೆ. ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಈಗಾಗಲೇ ‘ರೈಡರ್’, ‘ಜಾಗ್ವಾರ್’ ಮುಂತಾದ ಸಿನಿಮಾಗಳ ಮೂಲಕ ನಿಖಿಲ್​ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಅವರ ಹುಟ್ಟುಹಬ್ಬದ ದಿನವೇ ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಇದು ಅವರ 5ನೇ ಸಿನಿಮಾ ಆಗಿರಲಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಈ ಚಿತ್ರದ ಶೀರ್ಷಿಕೆ ಏನು? ನಿಖಿಲ್​ ಅವರ ಲುಕ್​ ಹೇಗಿರಲಿದೆ ಎಂಬುದಕ್ಕೆ ನಾಳೆ (ಜ.22) ಉತ್ತರ ಸಿಗಲಿದೆ. ಅದಕ್ಕಾಗಿ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಈ ಸಿನಿಮಾಗೆ ಶೂಟಿಂಗ್​ ಶುರುವಾಗಿದೆ. ಮಂಜು ಅಥರ್ವ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ರೈಡರ್​’ ಚಿತ್ರ ನೋಡಿ ಜನ ಹೇಗೆ ಕಮೆಂಟ್​ ಮಾಡಿದಾರೆ? ಅಸಲಿ ವಿಚಾರ ತೆರೆದಿಟ್ಟ ನಿಖಿಲ್​

‘ಚಿತ್ರರಂಗಕ್ಕೆ ಪುನೀತ್​ ರೀತಿಯ ನಟ ಬೇಕು; ನಿಖಿಲ್​ ಹೆಚ್ಚು ಸಿನಿಮಾ ಮಾಡಲಿ’: ಎಚ್​​.ಡಿ. ಕುಮಾರಸ್ವಾಮಿ

Follow Us
TV9 Web
TV9 Web

TV9 Kannada

Read More
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಲ್ಲಿ ಹಳಿಗೆ ಜಿಗಿದ ವ್ಯಕ್ತಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
'ರಾಹುಲ್ ಗಾಂಧಿ ಎಡಪಂಥೀಯ ಸಿದ್ಧಾಂತ ಹೇರಲು ಯತ್ನಿಸುತ್ತಿದ್ದಾರೆ'; ಫಡ್ನವೀಸ್
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ