ಅಜಯ್ ರಾವ್ ತಲೆ ಮೇಲೆ ಪುತ್ರಿ ಬರೆದ ಹೊಸ ಚಿತ್ರಕಥೆ: ಮುದ್ದಾದ ವಿಡಿಯೋ ವೈರಲ್
ಅಜಯ್ ರಾವ್ ಅವರು ಮಗಳ ಜೊತೆ ಇರುವ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೊಂದು ಚೆಂದದ ಕ್ಯಾಪ್ಷನ್ ಕೂಡ ಅವರ ನೀಡಿದ್ದಾರೆ.
ಸ್ಯಾಂಡಲ್ವುಡ್ ನಟ ಅಜಯ್ ರಾವ್ (Krishna Ajay Rao) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಕೆಲಸಗಳ ಬಿಡುವಿನಲ್ಲಿ ಅವರು ಕುಟುಂಬದವರ ಜೊತೆಗೆ ಕಾಲ ಕಳೆಯುತ್ತಾರೆ. ಮುದ್ದು ಮಗಳಾದ ಚೆರ್ರಿ (ಚರೀಷ್ಮಾ) ಜೊತೆ ಅಜಯ್ ರಾವ್ ಖುಷಿ ಖುಷಿಯಾಗಿ ವೀಕೆಂಡ್ ಎಂಜಾಯ್ ಮಾಡಿದ್ದಾರೆ. ಅಪ್ಪನ ಹೆಗಲ ಮೇಲೆ ಕುಳಿತು, ತಲೆಯ ಮೇಲೆ ಪೆನ್ನು ಪೇಪರ್ ಇಟ್ಟುಕೊಂಡು ಏನನ್ನೋ ಬರೆದಿದ್ದಾಳೆ ಪುಟಾಣಿ ಚೆರ್ರಿ (Cherishma Ajay Rao). ಈ ವಿಡಿಯೋವನ್ನು ಅಜಯ್ ರಾವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೊಂದು ಚೆಂದದ ಕ್ಯಾಪ್ಷನ್ ಕೂಡ ಅವರ ನೀಡಿದ್ದಾರೆ. ‘ನನ್ನ ತಲೆ ಮೇಲೆ ಒಂದು ಹೊಸ ಚಿತ್ರಕಥೆ ಮೂಡುತ್ತಾ ಇದೆ’ ಎಂದು ಅವರು ಬರೆದುಕೊಂಡಿದ್ದಾರೆ. ಅಪ್ಪ-ಮಗಳ ಈ ಕ್ಯೂಟ್ ವಿಡಿಯೋ ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಪುತ್ರಿಯ ಹಲವು ಫೋಟೋಗಳನ್ನು ಕೂಡ ಅಜಯ್ ರಾವ್ ಹಂಚಿಕೊಂಡಿದ್ದಾರೆ. ಅಜಯ್ ರಾವ್ ನಟನೆಯ ‘ಲವ್ ಯೂ ರಚ್ಚು’ (Love You Racchu) ಚಿತ್ರ ಕಳೆದ ವರ್ಷ ಡಿ.31ರಂದು ತೆರೆಕಂಡಿತ್ತು. ಆ ಚಿತ್ರದಲ್ಲಿ ಅಜಯ್ ರಾವ್ಗೆ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದರು.
ಇದನ್ನೂ ಓದಿ:
‘ಇದು ಪಬ್ಲಿಸಿಟಿ ಗಿಮಿಕ್ ಅಲ್ಲ’; ಅಜಯ್ ರಾವ್-ಗುರು ದೇಶಪಾಂಡೆ ಅಸಮಾಧಾನದ ಬಗ್ಗೆ ರಚಿತಾ ಮಾತು
‘ನಾನು ಯಾವ ಹಂತಕ್ಕೆ ಹೋಗೋಕೂ ರೆಡಿ’; ನಟ ಅಜಯ್ ರಾವ್ ಬಗ್ಗೆ ಗುರು ದೇಶಪಾಂಡೆ ಗರಂ