‘ಸಿನಿಮಾ ರಂಗದಲ್ಲಿ ನಮ್ಮಂಥ ಹಳಬರಿಗೆ ಈಗ ಅವಕಾಶವಿಲ್ಲ’; ಹಿರಿಯ ನಟನ ಬೇಸರ

‘ಸಿನಿಮಾ ರಂಗದಲ್ಲಿ ನಮ್ಮಂಥ ಹಳಬರಿಗೆ ಈಗ ಅವಕಾಶವಿಲ್ಲ’; ಹಿರಿಯ ನಟನ ಬೇಸರ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 23, 2022 | 6:09 AM

ಹಿರಿಯ ನಟರಿಗೆ ಅವಕಾಶವಿಲ್ಲ ಎನ್ನುವ ಆರೋಪವನ್ನು ಒಂದಷ್ಟು ಮಂದಿ ಮಾಡುತ್ತಿದ್ದಾರೆ. ಇದಕ್ಕೆ ಹಿರಿಯ ನಟ ಬೆಂಗಳೂರು ನಾಗೇಶ್​ ಧ್ವನಿಗೂಡಿಸಿದ್ದಾರೆ.

ಚಿತ್ರರಂಗಕ್ಕೆ ನಿತ್ಯ ಹೊಸಹೊಸ ಕಲಾವಿದರ ಸೇರ್ಪಡೆ ಆಗುತ್ತಲೇ ಇರುತ್ತದೆ. ಟ್ಯಾಲೆಂಟ್​ ಇದ್ದವರಿಗೆ ಮಣೆ ಹಾಕಲಾಗುತ್ತದೆ. ಇದರ ಜತೆಗೆ ಹೊಸಹೊಸ ಕಲಾವಿದರಿಗೆ ಹೆಚ್ಚು ಅವಕಾಶ ನೀಡಲಾಗುತ್ತಿದೆ. ಈ ಮಧ್ಯೆ ಸ್ಯಾಂಡಲ್​ವುಡ್​ನಲ್ಲಿ (Sandalwood) ಹಿರಿಯ ನಟರಿಗೆ ಅವಕಾಶವಿಲ್ಲ ಎನ್ನುವ ಆರೋಪವನ್ನು ಒಂದಷ್ಟು ಮಂದಿ ಮಾಡುತ್ತಿದ್ದಾರೆ. ಇದಕ್ಕೆ ಹಿರಿಯ ನಟ ಬೆಂಗಳೂರು ನಾಗೇಶ್ (Bengaluru Nagesh)​ ಧ್ವನಿಗೂಡಿಸಿದ್ದಾರೆ. ‘ಸಿನಿಮಾ ರಂಗದಲ್ಲಿ ನಮಗೆ ಅವಕಾಶ ಸಿಗುತ್ತಿಲ್ಲ. ಆದರೆ, ಕಿರುತೆರೆಗಳು (Serial Industry) ನಮ್ಮ ಕೈ ಹಿಡಿದಿವೆ’ ಎಂದಿದ್ದಾರೆ ಅವರು. ‘ಗಂಧದ ಗುಡಿ’, ‘ಮಯೂರ’ ಮೊದಲಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ನಾಗೇಶ್​ ಅವರು ಕೆಲಸ ಮಾಡಿದ್ದರು. ‘ಗುರು ಶಿಷ್ಯರು’, ‘ಬಂಗಾರದ ಮನುಷ್ಯ’, ‘ಶರಪಂಜರ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದರು. ಚಿತ್ರರಂಗಕ್ಕೆ ಸಾಕಷ್ಟು ಸೇವೆಯನ್ನ ಸಲ್ಲಿಸಿರುವ ಬೆಂಗಳೂರು ನಾಗೇಶ್ ತಮ್ಮ ಸಿನಿ ಜೀವನವನ್ನು ಮೆಲುಕು ಹಾಕಿದ್ದಾರೆ.  

ಇದನ್ನೂ ಓದಿ: ‘ಗಂಧದ ಗುಡಿ’ ಬಳಿಕ ರಾಜ್​ಕುಮಾರ್​-ವಿಷ್ಣುವರ್ಧನ್​ ಏಕೆ ಒಟ್ಟಾಗಿ ನಟಿಸಲಿಲ್ಲ? ಕಾರಣ ನೀಡಿದ ಹಿರಿಯ ನಟ

‘ಲೀಲಾವತಿ ರೀತಿ ಅದಿತಿ ಪ್ರಭುದೇವಗೂ ಒಳ್ಳೆಯ ಗುಣ ಇದೆ’: ಹಿರಿಯ ನಟ ಬೆಂಗಳೂರು ನಾಗೇಶ್​