ಹೇಗೆ ಸಾಗ್ತಿದೆ ಮೇಘನಾ ರಾಜ್​ ಕಮ್​ಬ್ಯಾಕ್​ ಜರ್ನಿ? ವಿಡಿಯೋ ಮೂಲಕ ಖುಷಿ ಹಂಚಿಕೊಂಡ ನಟಿ

ನಟಿ ಮೇಘನಾ ರಾಜ್​ ಅವರು ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ಅವರು ಆ್ಯಕ್ಟೀವ್​ ಆಗಿದ್ದಾರೆ.

TV9kannada Web Team

| Edited By: Madan Kumar

Jan 22, 2022 | 3:47 PM

ಕಾರಣಾಂತರಗಳಿಂದ ಒಂದಷ್ಟು ದಿನಗಳ ಕಾಲ ನಟನೆಯಿಂದ ದೂರ ಉಳಿದುಕೊಂಡಿದ್ದ ನಟಿ ಮೇಘನಾ ರಾಜ್​ ಸರ್ಜಾ (Meghana Raj Sarja) ಅವರು ಈಗ ಮತ್ತೆ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಹೊಸ ಹೊಸ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಕಿರುತೆರೆಯ ರಿಯಾಲಿಟಿ ಶೋನಲ್ಲಿ ಅವರು ಜಡ್ಜ್​ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಫ್ಯಾನ್ಸ್​ ಜೊತೆ ಮೇಘನಾ ಸಂಪರ್ಕದಲ್ಲಿ ಇರುತ್ತಾರೆ. ಕಲರ್ಸ್​ ಕನ್ನಡ ವಾಹಿನಿಯ (Colors Kannada) ‘ಡಾನ್ಸಿಂಗ್​ ಚಾಂಪಿಯನ್​’ ಕಾರ್ಯಕ್ರಮದಲ್ಲಿ ಜಡ್ಜ್​ ಆಗಿರುವ ಅವರು ಈಗೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಈ ಕಾರ್ಯಕ್ರಮದ ತೆರೆ ಹಿಂದಿನ ಝಲಕ್​ ಈ ವಿಡಿಯೋದಲ್ಲಿ ಇದೆ. ಜ.8ರಿಂದ ‘ಡಾನ್ಸಿಂಗ್ ಚಾಂಪಿಯನ್​’ (Dancing Champion) ಶೋ ಆರಂಭ ಆಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಇದರಲ್ಲಿ ಮೇಘನಾ ರಾಜ್​ ಅವರು ಸೆಲೆಬ್ರಿಟಿ ಜಡ್ಜ್​ ಆಗಿ ಭಾಗವಹಿಸುತ್ತಿದ್ದಾರೆ. ಇದರ ಜೊತೆ ಪುತ್ರ ರಾಯನ್​ ರಾಜ್​ ಸರ್ಜಾನ ಆರೈಕೆ ಕಡೆಗೂ ಮೇಘನಾ ಗಮನ ಹರಿಸಿದ್ದಾರೆ.

ಇದನ್ನೂ ಓದಿ:

ಡಾನ್ಸಿಂಗ್​ ಚಾಂಪಿಯನ್​ ಶೋನಲ್ಲಿ ಚಿರು-ರಾಯನ್​ ಬಗ್ಗೆ ಮೇಘನಾ ರಾಜ್​ ಸರ್ಜಾ ಹೃದಯಸ್ಪರ್ಶಿ ಮಾತು

ಕ್ರಿಸ್​ಮಸ್​ ಆಚರಿಸಿದ ಚಿರು ಪುತ್ರ ರಾಯನ್​; ಮೇಘನಾ ರಾಜ್​ ಹಂಚಿಕೊಂಡ ಫೋಟೋಗಳು ಇಲ್ಲಿವೆ

Follow us on

Click on your DTH Provider to Add TV9 Kannada