ಮಗಳು ಆಯ್ರಾಗೆ ಕನ್ನಡ ಪಾಠ; ರಾಧಿಕಾ ಪಂಡಿತ್ ಹಂಚಿಕೊಂಡ್ರು ವಿಶೇಷ ವಿಡಿಯೋ
ವಿಡಿಯೋವನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅವರು ‘ವೀಕೆಂಡ್ ಸ್ಪೆಷಲ್ ಕ್ಲಾಸ್’ ಎಂದು ಕ್ಯಾಪ್ಷನ್ ನೀಡಿದ್ದಾರೆ. ವರ್ಣಮಾಲೆಯ ಸ್ವರಗಳನ್ನು ಆಯ್ರಾ ಈಗಾಗಲೇ ಕಲಿತಿದ್ದಾಳೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.
ಮನೆಯೇ ಮೊದಲ ಪಾಠಶಾಲೆ ಎಂಬ ಮಾತಿದೆ. ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರ ವಿಚಾರದಲ್ಲೂ ಈ ಮಾತು ಸತ್ಯ. ಅದಕ್ಕೆ ‘ರಾಕಿಂಗ್ ಸ್ಟಾರ್’ ಯಶ್ ಫ್ಯಾಮಿಲಿ ಕೂಡ ಹೊರತಲ್ಲ. ರಾಧಿಕಾ ಪಂಡಿತ್-ಯಶ್ ದಂಪತಿಯ ಮಗಳು ಆಯ್ರಾ ಈಗ ಮೂರು ವರ್ಷದ ಕಂದ. ನಿಧಾನವಾಗಿ ಆಕೆ ಅಕ್ಷರಾಭ್ಯಾಸ ಮಾಡುತ್ತಿದ್ದಾಳೆ. ಮನೆಯಲ್ಲಿ ಆಕೆಗೆ ಕನ್ನಡ ವರ್ಣಮಾಲೆಯನ್ನು ಹೇಳಿಕೊಡಲಾಗಿದೆ. ವೀಕೆಂಡ್ನಲ್ಲಿ ಸಿನಿಮಾದ ಯಾವುದೇ ಕೆಲಸದಲ್ಲೂ ಯಶ್ ಭಾಗಿ ಆಗಿಲ್ಲ. ಮಗಳಿಗೆ ಅಆಇಈ ಹೇಳಿಕೊಡುವುದರಲ್ಲಿ ಅವರು ತನ್ಮಯರಾಗಿದ್ದಾರೆ. ಆ ವಿಡಿಯೋವನ್ನು ಹಂಚಿಕೊಂಡಿರುವ ರಾಧಿಕಾ ಪಂಡಿತ್ ಅವರು ‘ವೀಕೆಂಡ್ ಸ್ಪೆಷಲ್ ಕ್ಲಾಸ್’ ಎಂದು ಕ್ಯಾಪ್ಷನ್ ನೀಡಿದ್ದಾರೆ. ವರ್ಣಮಾಲೆಯ ಸ್ವರಗಳನ್ನು ಆಯ್ರಾ ಈಗಾಗಲೇ ಕಲಿತಿದ್ದಾಳೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಇನ್ನೇನಿದ್ದರು ಆಕೆ ವ್ಯಂಜನಗಳನ್ನು ಕಲಿಯುವುದು ಮಾತ್ರ ಬಾಕಿ. ಅದನ್ನು ಕಲಿಸಲು ಯಶ್ ಪ್ರಯತ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ರಾಕಿಂಗ್ ದಂಪತಿಯ ಮುದ್ದು ಮಗಳಿಗೆ ಆಟದ ಜೊತೆ ಪಾಠ ನಡೆಯುತ್ತಿದೆ.
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ

