ರಾಧಿಕಾ ಪಂಡಿತ್​ ಮೊಬೈಲ್​ನಲ್ಲಿ ಯಶ್​ ಹೆಸರು ಏನೆಂದು ಸೇವ್​ ಆಗಿದೆ? ವೈರಲ್​ ಆಯ್ತು ವಿಡಿಯೋ

ಪ್ರೀತಿ ವಿಚಾರವನ್ನು ಯಶ್-ರಾಧಿಕಾ ಗುಟ್ಟಾಗಿ ಇಟ್ಟಿದ್ದರು. ತೀರಾ ಆಪ್ತರು ಎನಿಸಿಕೊಂಡವರಿಗೆ ಮಾತ್ರ ಈ ವಿಚಾರದ ಬಗ್ಗೆ ಗೊತ್ತಿತ್ತು. ಎಂಗೇಜ್​ಮೆಂಟ್​ ಆದ ಬಳಿಕವೇ ಈ ವಿಚಾರ ಅಧಿಕೃತವಾಗಿತ್ತು.

ರಾಧಿಕಾ ಪಂಡಿತ್​ ಮೊಬೈಲ್​ನಲ್ಲಿ ಯಶ್​ ಹೆಸರು ಏನೆಂದು ಸೇವ್​ ಆಗಿದೆ? ವೈರಲ್​ ಆಯ್ತು ವಿಡಿಯೋ
ರಾಧಿಕಾ-ಯಶ್​

ಯಶ್ (Yash) ​ ಹಾಗೂ ರಾಧಿಕಾ ಪಂಡಿತ್ (Radhika Pandit)​ ವಿವಾಹವಾಗಿ ಕೆಲವು ವರ್ಷಗಳು ಕಳೆದಿವೆ. ಇಬ್ಬರೂ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ. ಇವರು ಅನೇಕರಿಗೆ ಮಾದರಿ ಆಗಿದ್ದಾರೆ. ಈ ಜೋಡಿಯ ಆದರ್ಶವನ್ನು ಫಾಲೋ ಮಾಡುವ ಸಾಕಷ್ಟು ಮಂದಿ ಇದ್ದಾರೆ. ಇಬ್ಬರೂ ಪ್ರೀತಿಸಿ ಮದುವೆ ಆದವರು. ಅನೇಕ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಇಬ್ಬರೂ ನಂತರ ಎಂಗೇಜ್​ಮೆಂಟ್​ ಮಾಡಿಕೊಳ್ಳುವ ಮೂಲಕ ಈ ವಿಚಾರವನ್ನು ಅಧಿಕೃತ ಮಾಡಿದ್ದರು. ಯಶ್​ ಜತೆಗಿನ ಪ್ರೀತಿ ವಿಚಾರದ ಬಗ್ಗೆ ರಾಧಿಕಾ ಪಂಡಿತ್​ ಹಲವು ವಿಚಾರಗಳನ್ನು ಈ ಮೊದಲು ರಿವೀಲ್​ ಮಾಡಿದ್ದರು. ಅದರಲ್ಲಿ ಒಂದು ವಿಡಿಯೋ ಈಗ ವೈರಲ್​ ಆಗುತ್ತಿದೆ. ಯಶ್​ಗೆ ರಾಧಿಕಾ ಒಂದು ನಿಕ್​ನೇಮ್​ ಇಟ್ಟಿದ್ದಾರೆ. ಅದನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ವಿಡಿಯೋ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರೀತಿ ವಿಚಾರವನ್ನು ಯಶ್-ರಾಧಿಕಾ ಗುಟ್ಟಾಗಿ ಇಟ್ಟಿದ್ದರು. ತೀರಾ ಆಪ್ತರು ಎನಿಸಿಕೊಂಡವರಿಗೆ ಮಾತ್ರ ಈ ವಿಚಾರದ ಬಗ್ಗೆ ಗೊತ್ತಿತ್ತು. ಎಂಗೇಜ್​ಮೆಂಟ್​ ಆದ ಬಳಿಕವೇ ಈ ವಿಚಾರ ಅಧಿಕೃತವಾಗಿತ್ತು. ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕೆ ಒಂದು ನಿಕ್​ನೇಮ್​ ಮೂಲಕ ಯಶ್​ ಹೆಸರನ್ನು ಸೇವ್​ ಮಾಡಿದ್ದರು ರಾಧಿಕಾ. ಈಗಲೂ ಅದೇ ಹೆಸರಿದೆ ಎಂದು ರಾಧಿಕಾ ಹೇಳಿಕೊಂಡಿದ್ದರು.

‘ಯಶ್​ ನಂಬರ್​ ನನ್ನ ಮೊಬೈಲ್​ನಲ್ಲಿ ಇದ್ದಾಗಿನಿಂದಲೂ ನಾನು ಹೆಸರನ್ನು ಚೇಂಜ್​ ಮಾಡೇ ಇಲ್ಲ. ಡೇಟಿಂಗ್ ಮಾಡುವ ಟೈಮ್​ನಲ್ಲಿ ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಒಂದು ಹೆಸರಿಟ್ಟಿದ್ದೆ. ‘ಡೊಲ್ಲ’ ಎಂದು ಯಶ್​ ಹೆಸರನ್ನು ಸೇವ್​ ಮಾಡಿಕೊಂಡಿದ್ದೆ. ನನ್ನ ಮಾತೃಭಾಷೆ ಕೊಂಕಣಿಯಲ್ಲಿ ಡೊಲ್ಲಾ ಎಂದರೆ ಫ್ಯಾಟ್​ ಎಂದರ್ಥ’ ಎಂದು ರಾಧಿಕಾ ಪಂಡಿತ್ ಹೇಳಿಕೊಂಡಿದ್ದರು.

ರಾಧಿಕಾ ಪಂಡಿತ್​ ನಟನೆಯಿಂದ ದೂರ ಉಳಿದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ನಟನೆಯ ಯಾವ ಸಿನಿಮಾ ಕೂಡ ತೆರೆಗೆ ಬಂದಿಲ್ಲ. ಅವರು ಮತ್ತೆ ನಟನೆಗೆ ಮರಳಬೇಕು ಎನ್ನುವ ಇಂಗಿತವನ್ನು ಎಲ್ಲರೂ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಅದು ಈವರೆಗೆ ಸಾಧ್ಯವಾಗಿಲ್ಲ. ಯಶ್​ ‘ಕೆಜಿಎಫ್​ 2’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇತ್ತೀಚೆಗೆ ಈ ಸಿನಿಮಾ ತಂಡ ಕೆಲ ಪ್ಯಾಚ್​ವರ್ಕ್​ ಕೆಲಸಗಳ ಶೂಟಿಂಗ್​ನಲ್ಲಿ ತೊಡಗಿಕೊಂಡಿತ್ತು. ಅದರ ಫೋಟೋಗಳನ್ನು ನಟಿ ಶ್ರೀನಿಧಿ ಶೆಟ್ಟಿ ಹಂಚಿಕೊಂಡಿದ್ದರು. ಕೊವಿಡ್​ ಕಾರಣದಿಂದ ‘ಕೆಜಿಎಫ್​ 2’ ರಿಲೀಸ್​ ದಿನಾಂಕ ಮುಂದೂಡಲ್ಪಡುತ್ತದೆಯೇ ಎನ್ನುವ ಆತಂಕ ಅಭಿಮಾನಿಗಳಲ್ಲಿ ಇದೆ.

ಇದನ್ನೂ ಓದಿ: Yash Birthday: ಯಶ್​ ಜನ್ಮದಿನಕ್ಕೆ ಆಯ್ರಾ, ಯಥರ್ವ್​ ಕೊಟ್ಟ ಗಿಫ್ಟ್​ ಏನು? ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್​

ಯಶ್ -ರಾಧಿಕಾ ಪಂಡಿತ್ ಮುದ್ದು ಮಕ್ಕಳ ಕ್ಯೂಟ್ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್

Published On - 1:42 pm, Thu, 13 January 22

Click on your DTH Provider to Add TV9 Kannada