AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Radhika Pandit: ಹೊಸ ಫೋಟೋದಲ್ಲಿ ಮಿಂಚಿದ ರಾಧಿಕಾ ಪಂಡಿತ್​; ಅಭಿಮಾನಿಗಳು ಫುಲ್​ ಫಿದಾ

ರಾಧಿಕಾ ಪಂಡಿತ್​ ಅವರು ಯಶ್​ ಜತೆ ಅನೇಕ ಬಾರಿ ಮಾಲ್ಡೀವ್ಸ್​ಗೆ ತೆರಳಿದ್ದರು. ಅಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ರಾಧಿಕಾ ಪಂಡಿತ್​ ಹಂಚಿಕೊಂಡಿದ್ದಾರೆ.

Radhika Pandit: ಹೊಸ ಫೋಟೋದಲ್ಲಿ ಮಿಂಚಿದ ರಾಧಿಕಾ ಪಂಡಿತ್​; ಅಭಿಮಾನಿಗಳು ಫುಲ್​ ಫಿದಾ
ರಾಧಿಕಾ ಪಂಡಿತ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jan 19, 2022 | 2:50 PM

Share

ನಟಿ ರಾಧಿಕಾ ಪಂಡಿತ್ (Radhika Pandit)​ ಅವರಿಗೆ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಆದರೆ, ಅವರು ನಟನೆಯಿಂದ ದೂರ ಉಳಿದಿದ್ದಾರೆ. ಸಂಪೂರ್ಣ ಸಮಯವನ್ನು ರಾಧಿಕಾ ಕುಟುಂಬಕ್ಕೆ ನೀಡುತ್ತಿದ್ದಾರೆ. ಆಯ್ರಾ ಹಾಗೂ ಯಥರ್ವ್​​ ಆರೈಕೆಯಲ್ಲಿ ರಾಧಿಕಾ ಪಂಡಿತ್​ ಬ್ಯುಸಿ ಆಗಿದ್ದಾರೆ. ಆದರೆ, ಅವರು ಅಭಿಮಾನಿಗಳಿಂದ ಎಂದಿಗೂ ದೂರವಾಗಿಲ್ಲ. ಸದಾ ಒಂದಿಲ್ಲೊಂದು ಫೋಟೋ ಹಂಚಿಕೊಳ್ಳುವ ಮೂಲಕ ಅವರು ಅಭಿಮಾನಿಗಳ ಜತೆ ಸಂಪರ್ಕದಲ್ಲಿ ಇರುತ್ತಾರೆ. ಯಶ್​ ಜತೆಗೆ ಇರುವ ಫೋಟೋ ಹಂಚಿಕೊಳ್ಳುತ್ತಾರೆ. ಮಕ್ಕಳ ಬಗ್ಗೆ ಅಪ್​ಡೇಟ್​ ನೀಡುತ್ತಾರೆ. ಇದರ ಜತೆಗೆ ತಮ್ಮ ಫೋಟೋಗಳನ್ನು ರಾಧಿಕಾ ಶೇರ್​ ಮಾಡಿಕೊಳ್ಳುತ್ತಾರೆ. ಈಗ ಹೊಸ ಫೋಟೋದಲ್ಲಿ ರಾಧಿಕಾ ಮಿಂಚಿದ್ದಾರೆ.

ರಾಧಿಕಾ ಪಂಡಿತ್​ ಅವರು ಯಶ್​ ಜತೆ ಅನೇಕ ಬಾರಿ ಮಾಲ್ಡೀವ್ಸ್​ಗೆ ತೆರಳಿದ್ದರು. ಅಲ್ಲಿ ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ರಾಧಿಕಾ ಪಂಡಿತ್​ ಹಂಚಿಕೊಂಡಿದ್ದಾರೆ. ‘ನನ್ನ ಪಾಕೆಟ್​ನಲ್ಲಿ ಸ್ವಲ್ಪ ಸೂರ್ಯನ ಕಿರಣ’ ಎಂದು ರಾಧಿಕಾ ಪಂಡಿತ್​ ಬರೆದುಕೊಂಡಿದ್ದಾರೆ. ಈ ಫೋಟೋ ಸಖತ್​ ವೈರಲ್​ ಆಗುತ್ತಿದೆ. ಅಭಿಮಾನಿಗಳು ಈ ಫೋಟೋಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

2016ರಲ್ಲಿ ‘ಸಂತು ಸ್ಟ್ರೇಟ್​ ಫಾರ್ವರ್ಡ್​’ ಚಿತ್ರ ತೆರೆಗೆ ಬಂದ ನಂತರದಲ್ಲಿ ರಾಧಿಕಾ ಪಂಡಿತ್​ ಒಂದು ಬ್ರೇಕ್​ ಪಡೆದುಕೊಂಡರು. ಆ ಬಳಿಕ 2019ರಲ್ಲಿ ತೆರೆಗೆ ಬಂದ ‘ಆದಿ ಲಕ್ಷ್ಮೀ ಪುರಾಣ’ ಚಿತ್ರದಲ್ಲಿ ರಾಧಿಕಾ ನಟಿಸಿದ್ದರು. ಇದಾದ ನಂತರದಲ್ಲಿ ಅವರು ಯಾವುದೇ ಚಿತ್ರ ಒಪ್ಪಿಕೊಂಡಿಲ್ಲ. ಅವರು ಬೇಗೆ ಬಣ್ಣದ ಲೋಕಕ್ಕೆ ಮರಳಲಿ ಎಂಬುದು ಅಭಿಮಾನಿಗಳ ಆಸೆ.

ಇತ್ತೀಚೆಗೆ ರಾಧಿಕಾ ಪಂಡಿತ್​ ಹಳೆಯ ವಿಡಿಯೋ ವೈರಲ್​ ಆಗಿತ್ತು. ಪ್ರೀತಿ ವಿಚಾರವನ್ನು ಯಶ್-ರಾಧಿಕಾ ಗುಟ್ಟಾಗಿ ಇಟ್ಟಿದ್ದರು. ತೀರಾ ಆಪ್ತರು ಎನಿಸಿಕೊಂಡವರಿಗೆ ಮಾತ್ರ ಈ ವಿಚಾರದ ಬಗ್ಗೆ ಗೊತ್ತಿತ್ತು. ಎಂಗೇಜ್​ಮೆಂಟ್​ ಆದ ಬಳಿಕವೇ ಈ ವಿಚಾರ ಅಧಿಕೃತವಾಗಿತ್ತು. ಯಾರಿಗೂ ತಿಳಿಯಬಾರದು ಎನ್ನುವ ಕಾರಣಕ್ಕೆ ಒಂದು ನಿಕ್​ನೇಮ್​ ಮೂಲಕ ಯಶ್​ ಹೆಸರನ್ನು ಸೇವ್​ ಮಾಡಿದ್ದರು ರಾಧಿಕಾ. ಈಗಲೂ ಅದೇ ಹೆಸರಿದೆ ಎಂದು ರಾಧಿಕಾ ಹೇಳಿಕೊಂಡಿದ್ದರು.

‘ಯಶ್​ ನಂಬರ್​ ನನ್ನ ಮೊಬೈಲ್​ನಲ್ಲಿ ಇದ್ದಾಗಿನಿಂದಲೂ ನಾನು ಹೆಸರನ್ನು ಚೇಂಜ್​ ಮಾಡೇ ಇಲ್ಲ. ಡೇಟಿಂಗ್ ಮಾಡುವ ಟೈಮ್​ನಲ್ಲಿ ಯಾರಿಗೂ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಒಂದು ಹೆಸರಿಟ್ಟಿದ್ದೆ. ‘ಡೊಲ್ಲ’ ಎಂದು ಯಶ್​ ಹೆಸರನ್ನು ಸೇವ್​ ಮಾಡಿಕೊಂಡಿದ್ದೆ. ನನ್ನ ಮಾತೃಭಾಷೆ ಕೊಂಕಣಿಯಲ್ಲಿ ಡೊಲ್ಲಾ ಎಂದರೆ ಫ್ಯಾಟ್​ ಎಂದರ್ಥ’ ಎಂದು ರಾಧಿಕಾ ಪಂಡಿತ್ ಹೇಳಿಕೊಂಡಿದ್ದರು.

ಇದನ್ನೂ ಓದಿ: ರಾಧಿಕಾ ಪಂಡಿತ್ ಎದುರು ಆಯ್ರಾ ಮಸ್ತ್ ಪೋಸ್

ಯಶ್ ರಾಧಿಕಾ ಪಂಡಿತ್ ಮುದ್ದು ಮಕ್ಕಳ ಕ್ಯೂಟ್ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕ್ಸ್

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ