Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಮೃತಪಡುತ್ತಿರುವ ಶೇ.60ರಷ್ಟು ಜನರು ಲಸಿಕೆ ಹಾಕಿಸದವರು, ಭಾಗಶಃ ಲಸಿಕೆ ಪಡೆದವರು: ಅಧ್ಯಯನ ವರದಿ

ಕೊರೊನಾ ಎರಡನೇ ಅಲೆ ಇರುವ ಸಂದರ್ಭದಲ್ಲಿ ಅಂದರೆ ಏಪ್ರಿಲ್​​ನಲ್ಲಿ  ದಿನವೊಂದಕ್ಕೆ 28 ಸಾವಿರ ಕೇಸ್​ಗಳು ದಾಖಲಾದಾಗಲೇ ಆಸ್ಪತ್ರೆಗಳಲ್ಲಿ ಬೆಡ್​ಗಳಿಗೆ ಕೊರತೆ ಉಂಟಾಗಿತ್ತು. ಐಸಿಯು ಕೂಡ ಖಾಲಿ ಇರಲಿಲ್ಲ.

ಕೊರೊನಾದಿಂದ ಮೃತಪಡುತ್ತಿರುವ ಶೇ.60ರಷ್ಟು ಜನರು ಲಸಿಕೆ ಹಾಕಿಸದವರು, ಭಾಗಶಃ ಲಸಿಕೆ ಪಡೆದವರು: ಅಧ್ಯಯನ ವರದಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Jan 22, 2022 | 7:41 PM

ದೆಹಲಿ: ಸದ್ಯದ ಕೊರೊನಾ ಮೂರಲೇ ಅಲೆ (Corona 3rd Wave)ಸಂದರ್ಭದಲ್ಲಿ ಶೇ.60ರಷ್ಟು ಪ್ರಮಾಣದಲ್ಲಿ ಸಾವಿಗೆ ಕಾರಣರಾದವರು, ಕೊರೊನಾ ಲಸಿಕೆ ಪಡೆಯದವರು ಮತ್ತು ಭಾಗಶಃ ಲಸಿಕೆ ಪಡೆದು ಸೋಂಕಿಗೆ ಒಳಗಾದವರು ಎಂದು ಖಾಸಗಿ ಆಸ್ಪತ್ರೆಯೊಂದು ನಡೆಸಿದ ಅಧ್ಯಯನ ವರದಿ ಹೇಳಿದೆ. ಅಂದರೆ ಇದೀಗ ಕೊವಿಡ್ 19 ಮೂರನೇ ಅಲೆ ನಡೆಯುತ್ತಿದ್ದು, ಕಳೆದ ಬಾರಿಗೆ ಹೋಲಿಸಿದರೆ ಸಾವಿನ ಪ್ರಮಾಣ ಕಡಿಮೆ ಇದೆ. ಹಾಗಿದ್ದಾಗ್ಯೂ ದಿನವೊಂದರಲ್ಲಿ 400ಕ್ಕೂ ಹೆಚ್ಚಿನ ಜನರು ಸೋಂಕಿನಿಂದ ಸಾಯುತ್ತಿದ್ದಾರೆ. ಈ ಬಾರಿ ಕೊರೊನಾದಿಂದ ಸಾಯುತ್ತಿರುವವರಲ್ಲಿ ಶೇ.60ರಷ್ಟು ಜನರು ಒಂದೇ ಡೋಸ್ ಕೊರೊನಾ ಲಸಿಕೆ ಪಡೆದವರು ಅಥವಾ ಒಂದೂ ಡೋಸ್ ಲಸಿಕೆ ಪಡೆಯದೆ ಇರುವವರು ಎಂದು ಅಧ್ಯಯನ ಹೇಳಿದೆ.

ದೆಹಲಿಯ ಮ್ಯಾಕ್ಸ್ ಹೆಲ್ತ್​ಕೇರ್​ ಖಾಸಗಿ ಆಸ್ಪತ್ರೆ ಈ ಅಧ್ಯಯನ ನಡೆಸಿದೆ. ಈ ಬಾರಿ ಸೋಂಕಿನಿಂದ ಮೃತಪಡುತ್ತಿರುವವರು ಬಹುತೇಕ 70 ವರ್ಷ ಮೇಲ್ಪಟ್ಟವರು. ಅದೂ ಕೂಡ ಕಿಡ್ನಿ, ಹಾರ್ಟ್​, ಡಯಾಬಿಟಿಸ್, ಕ್ಯಾನ್ಸರ್​​ನಂತಹ ಬೇರೆ ಕೆಲವು ರೋಗಗಳಿಂದ ಬಳಲುತ್ತಿರುವವರೇ ಹೆಚ್ಚಾಗಿ ಸಾಯುತ್ತಿದ್ದಾರೆ ಎಂದೂ ಅಧ್ಯಯನ ವರದಿ ಹೇಳಿದೆ. ಕೊರೊನಾದ ಕಳೆದ ಎರಡು ಅಲೆಗಳಿಗೆ ಹೋಲಿಸಿದರೆ ಈ ಬಾರಿ ಕೇವಲ ಶೇ.23.4ರಷ್ಟು ಜನರಿಗೆ ಮಾತ್ರ ವೈದ್ಯಕೀಯ ಆಮ್ಲಜನಕದ ಅವಶ್ಯಕತೆ ಬೇಕಾಗುತ್ತಿದೆ. ಮೊದಲ ಅಲೆಯಲ್ಲಿ ಶೇ.63 ರಷ್ಟು ಜನರಿಗೆ ಆಮ್ಲಜನಕ ಬೇಕಿತ್ತು. ಆದರೆ ಎರಡನೇ ಅಲೆಯಲ್ಲಿ ಶೇ.74ರಷ್ಟು ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಬೇಕಾಗಿತ್ತು ಎಂದು ಅಧ್ಯಯನ ವರದಿ ಹೇಳಿದೆ.

ಕೊರೊನಾ ಎರಡನೇ ಅಲೆ ಇರುವ ಸಂದರ್ಭದಲ್ಲಿ ಅಂದರೆ ಏಪ್ರಿಲ್​​ನಲ್ಲಿ  ದಿನವೊಂದಕ್ಕೆ 28 ಸಾವಿರ ಕೇಸ್​ಗಳು ದಾಖಲಾದಾಗಲೇ ಆಸ್ಪತ್ರೆಗಳಲ್ಲಿ ಬೆಡ್​ಗಳಿಗೆ ಕೊರತೆ ಉಂಟಾಗಿತ್ತು. ಐಸಿಯು ಕೂಡ ಖಾಲಿ ಇರಲಿಲ್ಲ. ಆದರೆ ಪ್ರಸ್ತುತ ಮೂರನೇ ತರಂಗದಲ್ಲಿ ಕಳೆದ ವಾರ ಕೊರೊನಾ ಸೋಂಕಿತರ ಸಂಖ್ಯೆ ಉತ್ತುಂಗದಲ್ಲಿ ಇದ್ದರೂ, ಆಸ್ಪತ್ರೆಗಳಲ್ಲಿ ಬೆಡ್​ಗಳು ಲಭ್ಯವಿದ್ದವು. ಯಾವುದೇ ತೊಂದರೆಯೂ ಆಗಲಿಲ್ಲ ಎಂದು ಅಧ್ಯಯನದಲ್ಲಿ ವಿಶ್ಲೇಷಿಸಲಾಗಿದೆ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ನಮ್ಮ ಆಸ್ಪತ್ರೆಯಲ್ಲಿ 20,883 ಸೋಂಕಿತರು ದಾಖಲಾಗಿದ್ದರು. ಎರಡನೇ ಅಲೆ ಸಂದರ್ಭದಲ್ಲಿ 12,444 ಮತ್ತು ಮೂರನೇ ಅಲೆ (ಈಗಿನ ಅಲೆ)ಯಲ್ಲಿ 1,378 ಮಂದಿ ದಾಖಲಾಗಿದ್ದಾರೆ ಎಂದೂ ಮ್ಯಾಕ್ಸ್ ಆಸ್ಪತ್ರೆ ತಿಳಿಸಿದೆ. ಇನ್ನು ಸಾವಿನ ದರ ಮೊದಲ ಅಲೆಯಲ್ಲಿ ಶೇ.7.2ರಷ್ಟಿತ್ತು. ಇದು ಎರಡನೇ ಅಲೆಯಲ್ಲಿ ಶೇ.10.5ರಷ್ಟಾಯ್ತು ಮತ್ತು ಸದ್ಯದ ಪರಿಸ್ಥಿತಿಯಲ್ಲಿ ಶೇ.6ರಷ್ಟಿದೆ ಎಂದು ಆಸ್ಪತ್ರೆ ಅಧ್ಯಯನದಲ್ಲಿ ಹೇಳಿದೆ. ಹಾಗಿದ್ದಾಗ್ಯೂ ಮ್ಯಾಕ್ಸ್ ಆಸ್ಪತ್ರೆ ತನ್ನಲ್ಲಿ ಲಭ್ಯವಿರುವ ದತ್ತಾಂಶಗಳನ್ನು ಆಧರಿಸಿ ಈ ಅಧ್ಯಯನ ನಡೆಸಿದೆ.

ಇದನ್ನೂ ಓದಿ: ದಯಾಮರಣ ಕೋರಿ ಹಾಸನದ 300ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಂದ ರಾಷ್ಟ್ರಪತಿ, ಸಿಎಂಗೆ ಪತ್ರ

ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ರಜತ್ ಪಾಟಿದರ್ ಆಟಕ್ಕೆ ಬೆರಗಾದ ಕಿಂಗ್ ಕೊಹ್ಲಿ; ವಿಡಿಯೋ
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ಸಮನ್ವಯ ಸಮಿತಿಯ ಅವಶ್ಯಕತೆ ಮನಗಾಣುತ್ತಿರುವ ಕೆಲ ನಾಯಕರು
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ನಿವೇದಿತಾ ನಿರ್ಮಾಣದ ‘ಫೈರ್ ಫ್ಲೈ’ ಚಿತ್ರದಲ್ಲಿ ಹೊಸಬರೇ ಜಾಸ್ತಿ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ನಿರ್ಮಾಪಕಿಯಾಗಿ ನಿವೇದಿತಾ ಶಿವರಾಜ್​ಕುಮಾರ್​ ಮೊದಲ ಸಂದರ್ಶನ; ಲೈವ್ ನೋಡಿ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ವಾರಾಹಿ ಪಂಜುರ್ಲಿ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಬಂದಾಗ ಏನೆಲ್ಲ ನಡೆಯಿತು?
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ