AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉದಯೋನ್ಮುಖ ನಟಿಯ ಜತೆ ಹೃತಿಕ್​ ರೋಷನ್​ ಲವ್ವಿಡವ್ವಿ?​ ಲೀಕ್​ ಆಯ್ತು ಫೋಟೋ

ಸುಸಾನೆ ಖಾನ್ ಹಾಗೂ ಹೃತಿಕ್​ ರೋಷನ್​ ಇಬ್ಬರೂ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳು. 2000ರಲ್ಲಿ ಮದುವೆ ಆಗಿದ್ದ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆದಿತ್ತು. ಆ ಬಳಿಕ ಇಬ್ಬರೂ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಉದಯೋನ್ಮುಖ ನಟಿಯ ಜತೆ ಹೃತಿಕ್​ ರೋಷನ್​ ಲವ್ವಿಡವ್ವಿ?​ ಲೀಕ್​ ಆಯ್ತು ಫೋಟೋ
ಹೃತಿಕ್​-ಸಬಾ ಆಜಾದ್
TV9 Web
| Edited By: |

Updated on:Jan 29, 2022 | 9:23 PM

Share

ನಟ ಹೃತಿಕ್​ ರೋಷನ್​ (Hrithik Roshan) ಅವರು ವೈಯಕ್ತಿಕ ವಿಚಾರವನ್ನು ಹೆಚ್ಚು ಗುಟ್ಟಾಗಿ ಇಡೋಕೆ ನೋಡುತ್ತಾರೆ. ಏನೇ ಇದ್ದರೂ ಅವರು ಮಾಧ್ಯಮದ ಮುಂದೆ ಬಾಯ್ಬಿಡುವುದಿಲ್ಲ. ಇದು ಇಂದು ನಿನ್ನೆಯ ವಿಚಾರ ಅಲ್ಲ. ಹೃತಿಕ್​ ಈ ಮೊದಲಿನಿಂದಲೂ ಇದೇ ನಿಯಮ ಪಾಲಿಸಿಕೊಂಡು ಬಂದಿದ್ದಾರೆ. ಆದರೆ, ಅವರು ದೊಡ್ಡ ಸೆಲೆಬ್ರಿಟಿ. ಎಲ್ಲಾ ವಿಚಾರವನ್ನು ಗುಟ್ಟಾಗಿ ಇಡೋಕೆ ಸಾಧ್ಯವಿಲ್ಲ. ಕೆಲ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ (Social Media)  ಲೀಕ್​ ಆಗಿ ಬಿಡುತ್ತವೆ. ಹೃತಿಕ್​ ಮನೆಯಿಂದ ಹೊರಬಿದ್ದರೆ ಸಾಕು ಪಾಪರಾಜಿಗಳು ಅವರನ್ನು ಹಿಂಬಾಲಿಸುತ್ತಾರೆ. ಈಗ ಹೃತಿಕ್​ ಪ್ರೀತಿ ಪ್ರೇಮದ ವಿಚಾರದಲ್ಲಿ ಮತ್ತೆ ಸುದ್ದಿಯಲ್ಲಿದ್ದಾರೆ. ಯುವ ನಟಿಯ ಜತೆಗೆ ಅವರು ಡೇಟಿಂಗ್​ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅವರಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಸುಸಾನೆ ಖಾನ್ ಹಾಗೂ ಹೃತಿಕ್​ ರೋಷನ್​ ಮದುವೆ ಆಗಿದ್ದರು. ಇವರಿಗೆ ಇಬ್ಬರು ಮಕ್ಕಳು. 2000ರಲ್ಲಿ ಮದುವೆ ಆಗಿದ್ದ ಈ ಜೋಡಿ 2014ರಲ್ಲಿ ವಿಚ್ಛೇದನ ಪಡೆದಿತ್ತು. ಆ ಬಳಿಕ ಇಬ್ಬರೂ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಮಕ್ಕಳನ್ನು ಟ್ರಿಪ್​ಗೆ ಕರೆದುಕೊಂಡು ಹೋಗಿದ್ದಾರೆ. ಈಗ ಹೃತಿಕ್​ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ವರದಿ ಆಗಿದೆ. ಹಾಗಿದ್ದರೆ ಯಾರ ಜತೆ? ಯುವ ನಟಿ ಸಬಾ ಆಜಾದ್ ಜತೆಗೆ.

‘ಹೃತಿಕ್​ ರೋಷನ್​ ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ರಹಸ್ಯವಾಗಿ ಇಡಲು ಆದ್ಯತೆ ನೀಡುತ್ತಾರೆ. ಅವರು ಸದ್ಯ ಉದಯೋನ್ಮುಖ ನಟಿ ಸಬಾ ಆಜಾದ್ ಅವರ ಜತೆ ಸುತ್ತಾಡುತ್ತಿದ್ದಾರೆ. ಈಗ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಶಾರುಖ್​ ಗೆಳೆಯ ಹೇಳಿರುವುದಾಗಿ ಬಾಲಿವುಡ್​ ಹಂಗಾಮ ವರದಿ ಮಾಡಿದೆ.

ಸಬಾ ಆಜಾದ್​ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2008ರಲ್ಲಿ. ಅಲ್ಲಿಂದ ಇಲ್ಲಿಯವರೆಗೆ ಅವರು ಬೆರಳೆಣಿಕೆ ಸಿನಿಮಾಗಳನ್ನು ಮಾಡಿದ್ದಾರೆ. ಸಾಕಷ್ಟು ಮ್ಯೂಸಿಕ್​ ವಿಡಿಯೋ​ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈಗ ಅವರು ಹೃತಿಕ್​ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಸಿನಿಮಾ ವಿಚಾರಕ್ಕೆ ಬರೋದಾದರೆ, ‘ವಿಕ್ರಮ್​ ವೇದ’ ಸಿನಿಮಾದಲ್ಲಿ ಹೃತಿಕ್​ ಬ್ಯುಸಿ ಆಗಿದ್ದಾರೆ. ತಮಿಳಲ್ಲಿ ತೆರೆಗೆ ಬಂದ ‘ವಿಕ್ರಮ್​ ವೇದ’ ಸಿನಿಮಾ ಸೂಪರ್ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ವಿಕ್ರಮ್​ ಆಗಿ ಮಾಧವನ್  ಕಾಣಿಸಿಕೊಂಡರೆ, ವೇದ ಆಗಿ ವಿಜಯ್​ ಸೇತುಪತಿ ಮಿಂಚಿದ್ದರು. ಇವರ ಕಾಂಬಿನೇಷನ್​ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾ ಸೂಪರ್ ಹಿಟ್​ ಆದ ಬೆನ್ನಲ್ಲೇ ಅದನ್ನು ರಿಮೇಕ್​ ಮಾಡಲು ಬಾಲಿವುಡ್ ​ ಮಂದಿ ಮುಂದೆ ಬಂದಿದ್ದಾರೆ. ಹೃತಿಕ್​ ರೋಷನ್​  ಈ ಸಿನಿಮಾದಲ್ಲಿ ವೇದ ಎಂಬ ಗ್ಯಾಂಗ್​​ಸ್ಟರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಬರ್ತ್​ಡೇ ಅಂಗವಾಗಿ ಜನವರಿ 10ರಂದು ಲುಕ್​ ರಿಲೀಸ್​ ಆಗಿತ್ತು. ಈ ಲುಕ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು.

ಇದನ್ನೂ ಓದಿ: ‘ಮಾಫಿಯಾ ಪಪ್ಪುಗಳು ಆರ್ಯನ್​ ಖಾನ್​ ರಕ್ಷಣೆಗೆ ಬಂದರು’; ಹೃತಿಕ್​ಗೆ ತಿರುಗೇಟು ನೀಡಿದ ಕಂಗನಾ  

Hrithik Roshan on Aryan Khan Case: ಆರ್ಯನ್ ಪರ ಮತ್ತೊಮ್ಮೆ ಬ್ಯಾಟ್ ಬೀಸಿದ ಹೃತಿಕ್; ಈ ಬಾರಿ ಹೇಳಿದ್ದೇನು?

Published On - 8:47 pm, Sat, 29 January 22

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್