ಒಂದೇ ಸಿನಿಮಾದಲ್ಲಿ ಸಲ್ಮಾನ್​, ಶಾರುಖ್​, ಹೃತಿಕ್​; ‘ಅವೆಂಜರ್ಸ್​ ಎಂಡ್​ಗೇಮ್​’ ರೀತಿ ಬಾಲಿವುಡ್​ ಪ್ಲ್ಯಾನ್​

ಒಂದೇ ಸಿನಿಮಾದಲ್ಲಿ ಸಲ್ಮಾನ್​, ಶಾರುಖ್​, ಹೃತಿಕ್​; ‘ಅವೆಂಜರ್ಸ್​ ಎಂಡ್​ಗೇಮ್​’ ರೀತಿ ಬಾಲಿವುಡ್​ ಪ್ಲ್ಯಾನ್​
ಶಾರುಖ್​ ಖಾನ್​, ಸಲ್ಮಾನ್​ ಖಾನ್​, ಹೃತಿಕ್​ ರೋಷನ್​

ಬಾಲಿವುಡ್​ನ ಮೂವರು ಸೂಪರ್​ ಸ್ಟಾರ್​ ನಟರು ಒಂದೇ ಸಿನಿಮಾದಲ್ಲಿ ನಟಿಸುವಂತೆ ಸ್ಕ್ರಿಪ್ಟ್​ ಸಿದ್ಧವಾಗುತ್ತಿದೆ. ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆಯ ಆದಿತ್ಯ ಚೋಪ್ರಾ ಅವರು ಈ ದೈತ್ಯ ಪ್ರಾಜೆಕ್ಟ್​ಗೆ ಬಂಡವಾಳ ಹೂಡಲಿದ್ದಾರೆ.

TV9kannada Web Team

| Edited By: Madan Kumar

Jan 30, 2022 | 9:44 AM

ಬಾಲಿವುಡ್​ನಲ್ಲಿ ಈಗಾಗಲೇ ಅನೇಕ ಮಲ್ಟಿಸ್ಟಾರ್ ಸಿನಿಮಾಗಳು ಬಂದಿವೆ. ಪ್ರೇಕ್ಷಕರು ಆ ರೀತಿಯ ಇನ್ನಷ್ಟು ಸಿನಿಮಾಗಳನ್ನು ನಿರೀಕ್ಷಿಸುತ್ತಿದ್ದಾರೆ. ಆ ನಿರೀಕ್ಷೆಯನ್ನು ಡಬಲ್​ ಮಾಡುವಂತಹ ಕೆಲವು ಅಂತೆ-ಕಂತೆಗಳು ಬಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿವೆ. ಹಿಂದಿ ಚಿತ್ರರಂಗದಲ್ಲಿ ನಟ ಸಲ್ಮಾನ್​ ಖಾನ್​ (Salman Khan) ಅವರು ತಮ್ಮದೇ ರೀತಿಯ ಛಾಪು ಮೂಡಿಸಿದ್ದಾರೆ. ಹಾಗೆಯೇ ಹೃತಿಕ್​ ರೋಷನ್​ (Hrithik Roshan) ಕೂಡ ಚಾರ್ಮ್​ ಹೊಂದಿದ್ದಾರೆ. ಇನ್ನು, ಶಾರುಖ್​ ಖಾನ್ (Shah Rukh Khan)​ ಅವರು ಸೋತರೂ ಅವರಿಗೆ ಇರುವ ಡಿಮ್ಯಾಂಡ್​ ಕುಸಿದಿಲ್ಲ. ಈ ಮೂವರು ಸ್ಟಾರ್​ ನಟರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಆ ಆಸೆ ಈಡೇರಿಸಲು ಬಾಲಿವುಡ್​ನಲ್ಲಿ ಒಂದು ಸಿನಿಮಾ ತಯಾರಾಗುತ್ತಿದೆ ಎಂಬ ಮಾಹಿತಿ ಕೇಳಿಬಂದಿದೆ. ಈ ಕುರಿತಂತೆ ಅನೇಕ ಬಗೆಯ ಗಾಸಿಪ್​ ಹರಡಿದೆ. ‘ವಾರ್​ 2’ ಸಿನಿಮಾದಲ್ಲಿಯೇ ಈ ಮೂವರೂ ಸ್ಟಾರ್​ ನಟರು ತೆರೆಹಂಚಿಕೊಳ್ಳುತ್ತಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಆದರೆ ಅದು ನಿಜವಲ್ಲ ಎಂಬ ಬಗ್ಗೆ ಸ್ಪಷ್ಟನೆ ಸಿಗುತ್ತಿದೆ.

ಶಾರುಖ್​ ಖಾನ್​ ಅವರು ಈಗ ‘ಪಠಾಣ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹೃತಿಕ್ ರೋಷನ್​ ಅವರು ಶೀಘ್ರದಲ್ಲೇ ‘ವಾರ್​ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಅತ್ತ, ಸಲ್ಮಾನ್​ ಖಾನ್​ ಅವರು ‘ಟೈಗರ್​ 3’ ಚಿತ್ರದ ಕೊನೇ ಹಂತದ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ಸಲ್ಮಾನ್​ ಖಾನ್​ ಅವರ ಟೈಗರ್​ ಪಾತ್ರ ಮತ್ತು ಶಾರುಖ್​ ಅವರ ಪಠಾಣ್​ ಪಾತ್ರ ‘ವಾರ್​ 2’ ಸಿನಿಮಾದಲ್ಲಿ ಇರುವುದಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಹಾಗಾದರೆ ಬಾಲಿವುಡ್​ ಮಂದಿಯ ಪ್ಲ್ಯಾನ್​ ಏನು? ಆ ಬಗ್ಗೆಯೂ ಕೆಲವು ವಿವರಗಳು ಸಿಕ್ಕಿವೆ.

ಹೃತಿಕ್​ ರೋಷನ್​ ಅವರು ‘ವಾರ್​ 2’ ಸಿನಿಮಾವನ್ನು ಬಿಡುಗಡೆ ಗೊಳಿಸಿದ ನಂತರವಷ್ಟೇ ಅಭಿಮಾನಿಗಳು ಬಯಸಿದಂತೆ ಮಲ್ಟಿಸ್ಟಾರ್​ ಸಿನಿಮಾ ಸಿದ್ಧವಾಗಲಿದೆ. ಟೈಗರ್​ (ಸಲ್ಮಾನ್​), ಪಠಾಣ್ (ಶಾರುಖ್​) ಹಾಗೂ ವಾರ್ ಸಿನಿಮಾದ ಕಬೀರ್​ (ಹೃತಿಕ್​) ಪಾತ್ರಗಳನ್ನು ಜೊತೆಯಾಗಿಸಿ ಒಂದು ಸ್ಪೈ ಥ್ರಿಲ್ಲರ್​ ಸಿನಿಮಾ ಮಾಡಬೇಕು ಎಂದು ಸಿದ್ಧತೆ ನಡೆಯುತ್ತಿದೆ. ಆ ಸಿನಿಮಾದಲ್ಲಿ ಸಲ್ಮಾನ್​ ಖಾನ್​ಗೆ ಜೋಡಿಯಾಗಿ ಕತ್ರಿನಾ ಕೈಫ್​ ಮತ್ತು ಶಾರುಖ್​ ಖಾನ್​ಗೆ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

ಯಶ್​ ರಾಜ್​ ಫಿಲ್ಮ್ಸ್​ ಸಂಸ್ಥೆಯ ಆದಿತ್ಯ ಚೋಪ್ರಾ ಅವರು ಈ ದೈತ್ಯ ಪ್ರಾಜೆಕ್ಟ್​ಗೆ ಬಂಡವಾಳ ಹೂಡಲಿದ್ದಾರೆ. ಬಾಲಿವುಡ್​ನ ಮೂವರು ಸೂಪರ್​ ಸ್ಟಾರ್​ ನಟರು ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಅದು ತುಂಬ ಮಹತ್ವದ್ದಾಗಿರಲಿದೆ. ಹಾಗಾಗಿ ಇದು ಹಾಲಿವುಡ್​ನ ‘ಅವೆಂಜರ್ಸ್​ ಎಂಡ್​ಗೇಮ್​’ ಸಿನಿಮಾ ರೀತಿಯ ಫೀಲ್​ ನೀಡಲಿದೆ ಅಂತ ಮೂಲಗಳು ತಿಳಿಸಿವೆ ಎಂದು ಪಿಂಕ್​ವಿಲ್ಲಾ ವೆಬ್​ಸೈಟ್​ ವರದಿ ಮಾಡಿದೆ.

ಇದನ್ನೂ ಓದಿ:

ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಶಾರುಖ್​ ಖಾನ್​ ಮನೆಗೆ ನುಗ್ಗಿದ್ದ ಕಪಿಲ್​ ಶರ್ಮಾ; ಮುಂದೇನಾಯ್ತು?

ಸಲ್ಮಾನ್​ ಖಾನ್​ ಜತೆ ಕೆಲಸ ಮಾಡಿದ್ರೆ ಆಗುವ ಲಾಭ-ನಷ್ಟದ ಬಗ್ಗೆ ಬಾಯ್ಬಿಟ್ಟ ಪ್ರೇಯಸಿ ಯೂಲಿಯಾ

Follow us on

Related Stories

Most Read Stories

Click on your DTH Provider to Add TV9 Kannada