Kajol: ಕಾಜೊಲ್​ಗೆ ಕೊವಿಡ್ ಪಾಸಿಟಿವ್; ಪುತ್ರಿ ನ್ಯಾಸಾಳ ಚಿತ್ರ ಹಂಚಿಕೊಂಡು ವಿಶೇಷ ಬರಹ ಬರೆದ ನಟಿ

Kajol: ಕಾಜೊಲ್​ಗೆ ಕೊವಿಡ್ ಪಾಸಿಟಿವ್; ಪುತ್ರಿ ನ್ಯಾಸಾಳ ಚಿತ್ರ ಹಂಚಿಕೊಂಡು ವಿಶೇಷ ಬರಹ ಬರೆದ ನಟಿ
ನ್ಯಾಸ, ಕಾಜೊಲ್

Nysa Devgan: ಇತ್ತೀಚೆಗಷ್ಟೇ ಹಲವು ಬಾಲಿವುಡ್ ತಾರೆಯರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಖ್ಯಾತ ನಟಿ ಕಾಜೊಲ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

TV9kannada Web Team

| Edited By: shivaprasad.hs

Jan 30, 2022 | 11:21 AM

ಇತ್ತೀಚೆಗೆ ಹಲವು ಬಾಲಿವುಡ್ ತಾರೆಯರಿಗೆ ಕೊವಿಡ್ (Covid) ಸೋಂಕು ಕಾಣಿಸಿಕೊಂಡಿತ್ತು. ಇದೀಗ ಖ್ಯಾತ ನಟಿ ಕಾಜೊಲ್ (Kajol) ಕೊವಿಡ್ ಪಾಸಿಟಿವ್ ಆಗಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯನ್ನು ನಟಿ ಹಂಚಿಕೊಂಡಿದ್ದಾರೆ. ಅಚ್ಚರಿಯೆಂಬಂತೆ ಕಾಜೊಲ್ ತಮ್ಮ ಚಿತ್ರದ ಬದಲಾಗಿ, ಪುತ್ರಿ ನ್ಯಾಸಾ ದೇವಗನ್ ಚಿತ್ರ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕಾರಣವನ್ನು ಅವರು ಹೇಳಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಜೊಲ್, ಅದರಲ್ಲಿ ಕೊವಿಡ್ ಸೋಂಕಿಗೆ ತುತ್ತಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಹಾಗೆಯೇ ಪುತ್ರಿ ನ್ಯಾಸಾ (Nysa Devgan) ನಗುತ್ತಿರುವ ಸುಂದರ ಚಿತ್ರವನ್ನು ಹಂಚಿಕೊಂಡಿರುವ ನಟಿ, ‘‘ನೆಗಡಿಯಾಗಿ ಕೆಂಪಾಗಿರುವ ನನ್ನ ಮೂಗನ್ನು ತೋರಿಸಲು ಇಷ್ಟವಿಲ್ಲ. ಆದ್ದರಿಂದ ಜಗತ್ತಿನಲ್ಲೇ ಅತ್ಯಂತ ಸುಂದರ ನಗುವನ್ನು ಇಲ್ಲಿ ಹಂಚಿಕೊಂಡಿದ್ದೇನೆ’’ ಎಂದು ಅವರು ಬರೆದುಕೊಂಡಿದ್ದಾರೆ. ಇದೀಗ ಕಾಜೊಲ್ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ.

ಕಾಜೊಲ್ ಹಂಚಿಕೊಂಡಿರುವ ಪೋಸ್ಟ್:

View this post on Instagram

A post shared by Kajol Devgan (@kajol)

ಕಾಜೊಲ್ ಹಂಚಿಕೊಂಡಿರುವ ಪೋಸ್ಟ್​ಗೆ ಬಾಲಿವುಡ್ ತಾರೆಯರು ಕಾಮೆಂಟ್ ಮಾಡಿ, ಶೀಘ್ರ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಪ್ರತಿಕ್ರಿಯಿಸಿ. ನ್ಯಾಸಾಳ ಸೌಂದರ್ಯವನ್ನು ಹೊಗಳಿದ್ದಾರೆ. ಅಭಿಮಾನಿಗಳು ಗುಣಮುಖರಾಗುವಂತೆ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ನ್ಯಾಸಾಳ ಕಣ್ಣು ಹಾಗೂ ಸೌಂದರ್ಯವನ್ನು ಹೊಗಳಿದ್ದಾರೆ.

ಕಾಜೊಲ್ ಹಾಗೂ ಅಜಯ್ ದೇವಗನ್​ ಪುತ್ರಿ ನ್ಯಾಸಾಳನ್ನು 2003ರ ಏಪ್ರಿಲ್ 20ರಂದು ಬರಮಾಡಿಕೊಂಡಿದ್ದರು. 18 ವರ್ಷದ ನ್ಯಾಸಾ ಪ್ರಸ್ತುತ ಸ್ವಿಟ್ಜರ್​ಲ್ಯಾಂಡ್​ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನ್ಯಾಸಾ ದೇವಗನ್ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲವಾದರೂ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿ ಖಾತೆಗಳೇ ಬಹಳಷ್ಟಿವೆ. ಆದರೆ ನ್ಯಾಸಾರ ಇನ್ಸ್ಟಾಗ್ರಾಂ ಖಾತೆ ಪ್ರೈವೇಟ್ ಆಗಿದೆ. ತಾರಾ ಪುತ್ರಿಯನ್ನು ಗಮನಿಸುವ ಜನರು ಹೆಚ್ಚಿದ್ದು, ಅವರ ಚಲನ-ವಲನಗಳು ದೊಡ್ಡ ಸುದ್ದಿಯಾಗುತ್ತದೆ. ಇತ್ತೀಚೆಗೆ ಕಾಜೊಲ್ ಈ ಹಿಂದೆ ಧರಿಸಿದ್ದ ಮಾದರಿಯದ್ದೇ ದಿರಿಸನ್ನು ಧರಿಸಿ ಚಿತ್ರ ಹಂಚಿಕೊಂಡಿದ್ದ ನ್ಯಾಸಾರ ಫೋಟೋಗಳು ವೈರಲ್ ಆಗಿದ್ದವು.

ಚಿತ್ರಗಳ ವಿಷಯಕ್ಕೆ ಬಂದರೆ ಕಾಜೊಲ್ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ರೇವತಿ ನಿರ್ದೇಶನದ ‘ದಿ ಲಾಸ್ಟ್ ಹುರ್ರೇ’ (The Last Hurrah) ಚಿತ್ರದಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ. ನೈಜ ಘಟನೆಯಾಧಾರಿತ ಚಿತ್ರ ಇದಾಗಿದ್ದು, ತಾಯಿಯೊಬ್ಬಳ ಕತೆಯನ್ನು ಕಟ್ಟಿಕೊಡಲಿದೆ.

ಇದನ್ನೂ ಓದಿ:

Nysa Devgan: ಇನ್ನೂ ಬಾಲಿವುಡ್​ಗೆ ಕಾಲಿಡದ ಅಜಯ್- ಕಾಜೊಲ್ ಪುತ್ರಿಯ ಚಿತ್ರಗಳು ವೈರಲ್; ಇದಕ್ಕಿದೆ ವಿಶೇಷ ಕಾರಣ

ಒಂದೇ ಸಿನಿಮಾದಲ್ಲಿ ಸಲ್ಮಾನ್​, ಶಾರುಖ್​, ಹೃತಿಕ್​; ‘ಅವೆಂಜರ್ಸ್​ ಎಂಡ್​ಗೇಮ್​’ ರೀತಿ ಬಾಲಿವುಡ್​ ಪ್ಲ್ಯಾನ್​

Follow us on

Related Stories

Most Read Stories

Click on your DTH Provider to Add TV9 Kannada