AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kajol Birthday: ಪಟಪಟನೆ ಮಾತನಾಡುವ ಕಾಜೊಲ್; ಸುಮ್ಮನಿರುವ ಅಜಯ್ ದೇವಗನ್- ಸಂಸಾರ ಸರಿಗಮ ಹೇಗೆ?

Ajay Devgan and Kajol: ಇಂದು, (ಆಗಸ್ಟ್ 5) ಜನ್ಮದಿನ ಆಚರಿಸಿಕೊಳ್ಳುತ್ತಿರುವ ಕಾಜೊಲ್ ಅವರನ್ನು‌ ಮದುವೆಯಾಗುವುದಕ್ಕೆ ಅಜಯ್ ದೇವಗನ್‌ ಮನೆಯಲ್ಲಿ ಬಹಳ‌ ಅನಿರೀಕ್ಷಿತವಾಗಿ ಪ್ರತಿಕ್ರಿಯಿಸಿದ್ದರಂತೆ. ಆ ಕುರಿತು ಅಜಯ್ ದೇವಗನ್ ಮಾತನಾಡಿದ್ದಾರೆ.

Kajol Birthday: ಪಟಪಟನೆ ಮಾತನಾಡುವ ಕಾಜೊಲ್; ಸುಮ್ಮನಿರುವ ಅಜಯ್ ದೇವಗನ್- ಸಂಸಾರ ಸರಿಗಮ ಹೇಗೆ?
ಕಾಜೊಲ್ ಮತ್ತು ಅಜಯ್ ದೇವಗನ್
TV9 Web
| Updated By: shivaprasad.hs|

Updated on: Aug 05, 2021 | 1:46 PM

Share

ಬಾಲಿವುಡ್‌ನ ಖ್ಯಾತ ನಟಿ ಕಾಜೊಲ್ ಅವರಿಗೆ ಇಂದು 47ನೇ ಜನ್ಮದಿನದ ಸಂಭ್ರಮ. ಪಟಪಟನೆ ಮಾತನಾಡುವ, ಸದಾ ನಗುತ್ತಾ ಖುಷಿಯಿಂದಿರುವ ಅವರ ವ್ಯಕ್ತಿತ್ವಕ್ಕೆ ಮರು ಹೋಗದವರು ಕಡಿಮೆ. ಇಂತಿಪ್ಪ ಕಾಜೊಲ್ ಸಪ್ತಪದಿ ತುಳಿದಿದ್ದು, ನಟ ಅಜಯ್ ದೇವಗನ್ ಅವರೊಂದಿಗೆ. ಆದರೆ, ಅಜಯ್ ದೇವಗನ್ ಮನೆಯಲ್ಲಿ ಎಲ್ಲರೂ ಮೌನದಿಂದಿರುವವರು. ಹಾಗಿರುವಾಗ ಕಾಜೊಲ್‌ಅಜಯ್ ಮನೆಯಲ್ಲಿ ಬದಲಾವಣೆ ತಂದರೇ? ಎರಡು ಭಿನ್ನ ವ್ಯಕ್ತಿತ್ವಗಳ ಸಂಸಾರ ಸರಿಗಮ ಇದುವರೆಗೆ ಹೇಗಿದೆ? ಇದನ್ನು ಹಂಚಿಕೊಂಡಿದ್ದಾರೆ ಅಜಯ್ ದೇವಗನ್.

ಹಿಂದೂಸ್ತಾನ್ ಟೈಮ್ಸ್ ಗೆ ಈ ಮೊದಲೊಮ್ಮೆ ನೀಡಿದ್ದ ಸಂದರ್ಶನದಲ್ಲಿ ಅಜಯ್ ದೇವಗನ್ ತಮ್ಮ ಪತ್ನಿಯ ವ್ಯಕ್ತಿತ್ವ ಅವರ ಮನೆಯಲ್ಲಿ ತಂದ ಬದಲಾವಣೆಯ ಕುರಿತು ತಿಳಿಸಿದ್ದರು. ಕಾಜೊಲ್ ಅವರು ಮನೆಗೆ ಬಂದಾಗ ಅಜಯ್ ಕುಟುಂಬದವರಿಗೆ ಬಹಳ ಸಂತಸವಾಗಿತ್ತಂತೆ. ಕಾರಣ, ಕೊನೆಗೂ ಕುಟುಂಬಕ್ಕೆ ಮಾತನಾಡುವವರೊಬ್ಬರು ಬಂದಿದ್ದಾರೆ ಎಂದು! ವಾಸ್ತವವಾಗಿ ಅಜಯ್ ದೇವಗನ್ ಮನೆಯಲ್ಲಿ ಎಲ್ಲರೂ ಮೌನವಾಗಿರುವುದೇ ಹೆಚ್ಚಂತೆ. ಅಗತ್ಯವಿದ್ದರಷ್ಟೇ ಮಾತು. ಆದರೆ ಕಾಜೊಲ್ ಬಂದ ಮೇಲೆ ವಾತಾವರಣ ಬದಲಾಯಿತಂತೆ. ಸಂಸಾರದ ಯಶಸ್ಸಿಗೂ ಇದೇ ಕಾರಣ ಎನ್ನುವ ಅಜಯ್, ‘ಇಬ್ಬರಲ್ಲಿ ಒಬ್ಬರಾದರೂ ಮಾತನಾಡಲೇಬೇಕು. ಇಬ್ಬರೂ ಸುಮ್ಮನಿದ್ದರೆ ಅದು ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಕಾಜೊಲ್ ಮಾತನಾಡುತ್ತಾರೆ; ನಾನು ಸುಮ್ಮನಿರುತ್ತೇನೆ’ ಎಂದಿದ್ದಾರೆ.

ಕಾಜೊಲ್ ಮತ್ತು ನೀವು(ಅಜಯ್) ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿಯೇ ಎಂಬ ಪ್ರಶ್ನೆಗೆ ನಗುತ್ತಲೇ ಹೌದು ಎನ್ನುತ್ತಾರೆ ಅಜಯ್ ದೇವಗನ್. “ನಾನು ಕಾಜೊಲ್ ಅವರನ್ನು ಬದಲಾಗಬೇಕೆಂದು ಬಯಸಿಲ್ಲ. ಅವರಿದ್ದಂತೆಯೇ ಸ್ವೀಕರಿಸಿದ್ದೇನೆ. ಕಾಜೊಲ್ ಅವರೆಡೆಗೆ ನಾನು ಹೇಗೆ ಆಕರ್ಷಿತನಾದೆ ತಿಳಿದಿಲ್ಲ. ವಾಸ್ತವವಾಗಿ ನಮ್ಮಿಬ್ಬರಿಗೂ ತಿಳಿದಿಲ್ಲ. ನಾವೀರ್ವರೂ ಮಾತನಾಡಲು ಪ್ರಾರಂಭಿಸಿದೆವು. ಸ್ನೇಹಿತರಾದೆವು. ನಂತರ ಮದುವೆಯಾಗೋಣ ಎಂದು ತೀರ್ಮಾನಿಸಿದೆವು. ನಾವು ಪ್ರಪೋಸ್ ಎಲ್ಲಾ ಮಾಡಿಯೇ‌ ಇಲ್ಲ, ಸ್ವಾಭಾವಿಕವಾಗಿ ನಮ್ಮ ಸಂಬಂಧ ಗಟ್ಟಿಗೊಂಡಿತು” ಎಂದಿದ್ದಾರೆ ಅಜಯ್ ದೇವಗನ್.

ಅವರಿಬ್ಬರೂ ಮೊದಲ ಬಾರಿಗೆ ಭೇಟಿಯಾದಾಗ ಹೇಗಿತ್ತು ಎನ್ನುವುದನ್ನೂ ತಿಳಿಸಿದ ಅಜಯ್, “ಹಲ್ಚಲ್ ಚಿತ್ರದ ಚಿತ್ರೀಕರಣಕ್ಕೂ‌ಮೊದು ಇಬ್ಬರೂ ಭೇಟಿಯಾಗಿದ್ದೆವು. ಪುನಃ ಭೇಟಿಯಾಗುವುದಕ್ಕೆ ನನಗೇನು ಕಾತರವಿರಲಿಲ್ಲ. ಅವರು ಮತ್ತೆ ಸಿಕ್ಕಿದಾಗ ಜೋರಾಗಿ ಮಾತನಾಡುವ, ಒಂದು ಕ್ಷಣವೂ ಬಿಡದೇ ಹರಟುವ ಹುಡುಗಿಯಾಗಿ ಕಂಡಿದ್ದರು. ಜೊತೆಗೆ ನಮ್ಮಿಬ್ಬರ ವ್ಯಕ್ತಿತ್ವದಲ್ಲೂ ಸಾಕಷ್ಟು ಮೂಲಭೂತ ವ್ಯತ್ಯಾಸಗಳಿದ್ದವು. ಆದರೆ, ಏನಾಗಬೇಕೋ, ಅದಾಗುತ್ತದೆ. ಹಾಗೇ ಆಯಿತು” ಎಂದು ನಗುತ್ತಾರೆ ಅಜಯ್.

1999ರಲ್ಲಿ‌ನದುವೆಯಾದ ಈ ಬಾಲಿವುಡ್ ತಾರಾ ಜೋಡಿಗೆ ಈಗ ನ್ಯಾಸ(ಪುತ್ರಿ) ಮತ್ತು ಯುಗ್(ಪುತ್ರ) ಎಂಬ ಈರ್ವರು ಮಕ್ಕಳಿದ್ದಾರೆ. ಈ ಜೋಡಿ1995ರಲ್ಲಿ ತೆರೆಗೆ ಬಂದ ‘ಹಲ್ಚಲ್’ (Hulchul) ಚಿತ್ರದ ಚಿತ್ರೀಕರಣದಲ್ಲಿ‌ ಮೊದಲ ಬಾರಿಗೆ ಭೇಟಿಯಾಗಿ, ಒಟ್ಟಿಗೇ ಅಭಿನಯಿಸಿದ್ದರು. ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕಾಜೊಲ್, ಈ ವರ್ಷ ನೆಟ್ಫ್ಲಿಕ್ಸ್ ನಲ್ಲಿ ತೆರೆಕಂಡ ‘ತ್ರಿಭಂಗ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:

Ashika Ranganath: ಕನ್ನಡದ ಜನಪ್ರಿಯ ನಟಿ ಆಶಿಕಾ ರಂಗನಾಥ್​ ಫೊಟೊ ಗ್ಯಾಲರಿ ಇಲ್ಲಿದೆ

Genelia D’Souza Birthday: ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಈಗ ಎಲ್ಲಿದ್ದಾರೆಂದು ವಿವರಿಸುತ್ತದೆ ಈ ಫೊಟೊ ಗ್ಯಾಲರಿ!

(Ajay Devgan family happily receives Kajol because she is only talkative person in their family says Ajay Devgan)

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!