Genelia D’Souza Birthday: ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಈಗ ಎಲ್ಲಿದ್ದಾರೆಂದು ವಿವರಿಸುತ್ತದೆ ಈ ಫೊಟೊ ಗ್ಯಾಲರಿ!
Happy Birthday Genelia D'Souza: ಕನ್ನಡದ ‘ಸತ್ಯ ಈಸ್ ಇನ್ ಲವ್’ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಜನ್ಮದಿನವಿಂದು. ಪ್ರಸ್ತುತ ಚಿತ್ರರಂಗದಿಂದ ದೂರವಾಗಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಜೆನಿಲಿಯಾ, ತಮ್ಮ ಕುಟುಂಬದೊಂದಿಗಿರುವ ಚಿತ್ರಗಳು ಇಲ್ಲಿವೆ.
Updated on:Aug 09, 2021 | 6:58 PM

Genelia D'Souza with her family photo gallery

Genelia D'Souza with her family photo gallery

1987ರ ಆಗಸ್ಟ್ 5ರಂದು ಮುಂಬೈನಲ್ಲಿ ಜೆನಿಲಿಯಾ ಜನಿಸಿದರು. 2003ರಿಂದ ಚಿತ್ರರಂಗದಲ್ಲಿ ಸಕ್ರಿಯರಾದರು.

ಅಮಿತಾಭ್ ಬಚ್ಚನ್ ಜೊತೆಗೆ ‘ಪಾರ್ಕರ್ ಪೆನ್’ ಜಾಹಿರಾತಿನಲ್ಲಿ ಕಾಣಿಸಿಕೊಂಡ ಅವರು ಎಲ್ಲರ ಗಮನ ಸೆಳೆದರು. ಅಲ್ಲಿಂದ ಅವರಿಗೆ ಚಿತ್ರರಂಗದ ಬಾಗಿಲು ತೆರೆಯಿತು. 2003ರಲ್ಲಿ ‘ತುಜೆ ಮೇರಿ ಕಸಮ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.

ಜೆನಿಲಿಯಾ ಮುಖ್ಯವಾಗಿ ನೆಲೆಕಂಡುಕೊಂಡಿದ್ದು ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ. 2003ರಿಂದ 2012ರವರೆಗೆ ಅವರು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.

‘ಬೊಮ್ಮರಿಲು’ ಚಿತ್ರದ ನಟನೆಗಾಗಿ 2006ರಲ್ಲಿ ಜೆನಿಲಿಯಾ ಅವರಿಗೆ ಫಿಲ್ಮ್ಫೇರ್ ಪ್ರಶಸ್ತಿ ಲಭಿಸಿತು.

2008ರಲ್ಲಿ ‘ಸತ್ಯ ಈಸ್ ಇನ್ ಲವ್’ ಚಿತ್ರದ ಮೂಲಕ ಕನ್ನಡಕ್ಕೂ ಜೆನಿಲಿಯಾ ಕಾಲಿಟ್ಟರು.

2008ರ ನಂತರ ಮರಳಿ ಬಾಲಿವುಡ್ ಚಿತ್ರಗಳಲ್ಲೂ ಜೆನಿಲಿಯಾ ಕಾಣಿಸಿಕೊಳ್ಳತೊಡಗಿದರು.

2012ರಲ್ಲಿ ರಿತೇಶ್ ದೇಶ್ಮುಖ್ ಅವರೊಂದಿಗೆ ಜೆನಿಲಿಯಾ ವಿವಾಹವಾದರು. ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ನಡೆಯಿತು.

ಸದ್ಯ ಜೆನಿಲಿಯಾ ಚಿತ್ರರಂಗದಿಂದ ದೂರ ಉಳಿದಿದ್ದು, ಮಕ್ಕಳೊಂದಿಗೆ, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.
Published On - 12:04 pm, Thu, 5 August 21



















