AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Genelia D’Souza Birthday: ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಈಗ ಎಲ್ಲಿದ್ದಾರೆಂದು ವಿವರಿಸುತ್ತದೆ ಈ ಫೊಟೊ ಗ್ಯಾಲರಿ!

Happy Birthday Genelia D'Souza: ಕನ್ನಡದ ‘ಸತ್ಯ ಈಸ್ ಇನ್ ಲವ್’ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿದ್ದ ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಜನ್ಮದಿನವಿಂದು. ಪ್ರಸ್ತುತ ಚಿತ್ರರಂಗದಿಂದ ದೂರವಾಗಿ ಕುಟುಂಬದೊಂದಿಗೆ ಸಮಯ ಕಳೆಯುತ್ತಿರುವ ಜೆನಿಲಿಯಾ, ತಮ್ಮ ಕುಟುಂಬದೊಂದಿಗಿರುವ ಚಿತ್ರಗಳು ಇಲ್ಲಿವೆ.

TV9 Web
| Edited By: |

Updated on:Aug 09, 2021 | 6:58 PM

Share
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ಚಿತ್ರದಲ್ಲಿ ಜೆನಿಲಿಯಾ ಮತ್ತು ರಿತೇಶ್ ದೇಶ್​ಮುಖ್ ಅವರೊಂದಿಗೆ, ದಂಪತಿಯ ಮೊದಲ ಮಗು ರಿಯಾನ್​ನನ್ನು ಕಾಣಬಹುದು

Genelia D'Souza with her family photo gallery

1 / 10
ಜೆನಿಲಿಯಾ ಡಿಸೋಜಾ ತಮ್ಮ ಮಕ್ಕಳು ಹಾಗೂ ತಾಯಿ ಜೆನಟ್ ಡಿಸೋಜಾ ಅವರೊಂದಿಗೆ ತೆಗೆಸಿಕೊಂಡ ಸುಂದರ ಚಿತ್ರ

Genelia D'Souza with her family photo gallery

2 / 10
ರಿತೇಶ್ ದೇಶ್​ಮುಖ್ ಹುಟ್ಟುಹಬ್ಬದ ಸಂದರ್ಭದಲ್ಲಿ ಜೆನಿಲಿಯಾ ಹಂಚಿಕೊಂಡ ಚಿತ್ರವಿದು. ಈ ತಾರಾ ಜೋಡಿ ದಾಂಪತ್ಯಕ್ಕೆ ಕಾಲಿರಿಸಿ ದಶಕ ಕಳೆದಿದೆ.

1987ರ ಆಗಸ್ಟ್ 5ರಂದು ಮುಂಬೈನಲ್ಲಿ ಜೆನಿಲಿಯಾ ಜನಿಸಿದರು. 2003ರಿಂದ ಚಿತ್ರರಂಗದಲ್ಲಿ ಸಕ್ರಿಯರಾದರು.

3 / 10
ಜೆನಿಲಿಯಾ ಡಿಸೋಜಾ ತಮ್ಮ ಅತ್ತೆಯೊಂದಿಗೆ. ಜೊತೆಯಲ್ಲಿ ಪತಿ ರಿತೇಶ್ ದೇಶ್​ಮುಖ್ ಕೂಡಾ ಇದ್ದಾರೆ. ಜೆನಿಲಿಯಾ ಅವರು ತಮ್ಮ ಅತ್ತೆ (ರಿತೇಶ್ ಅವರ ತಾಯಿ)ಯನ್ನು ಪ್ರೀತಿಯಿಂದ ‘ಆಯಿ’ ಎಂದು ಕರೆಯುತ್ತಾರಂತೆ. ಸಾಮಾಜಿಕಜಾಲತಾಣಗಳಲ್ಲಿ ಈ ಕುರಿತು ಅವರು ಹಂಚಿಕೊಳ್ಳುತ್ತಿರುತ್ತಾರೆ.

ಅಮಿತಾಭ್ ಬಚ್ಚನ್ ಜೊತೆಗೆ ‘ಪಾರ್ಕರ್ ಪೆನ್’ ಜಾಹಿರಾತಿನಲ್ಲಿ ಕಾಣಿಸಿಕೊಂಡ ಅವರು ಎಲ್ಲರ ಗಮನ ಸೆಳೆದರು. ಅಲ್ಲಿಂದ ಅವರಿಗೆ ಚಿತ್ರರಂಗದ ಬಾಗಿಲು ತೆರೆಯಿತು. 2003ರಲ್ಲಿ ‘ತುಜೆ ಮೇರಿ ಕಸಮ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.

4 / 10
ತಮ್ಮ ಮಗ ರಾಹಿಲ್​ ಜೊತೆಯಲ್ಲಿ ಜೆನಿಲಿಯಾ. ಜೆನಿಲಿಯಾ ಮತ್ತು ರಿತೇಶ್ ದಂಪತಿಗೆ ಇಬ್ಬರು ಮಕ್ಕಳು. ಮೊದಲ ಪುತ್ರನ ಹೆಸರು ರಿಯಾನ್, ಎರಡನೇ ಪುತ್ರನ ಹೆಸರು ರಾಹಿಲ್

ಜೆನಿಲಿಯಾ ಮುಖ್ಯವಾಗಿ ನೆಲೆಕಂಡುಕೊಂಡಿದ್ದು ತೆಲುಗು, ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ. 2003ರಿಂದ 2012ರವರೆಗೆ ಅವರು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು.

5 / 10
ತಮ್ಮ ತಂದೆ ನೈಲ್ ಡಿಸೋಜಾ ಅವರೊಂದಿಗೆ ಜೆನಿಲಿಯಾ. ನೈಲ್ ಡಿಸೋಜಾ ಅವರು ಟಾಟಾ ಕಂಪನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

‘ಬೊಮ್ಮರಿಲು’ ಚಿತ್ರದ ನಟನೆಗಾಗಿ 2006ರಲ್ಲಿ ಜೆನಿಲಿಯಾ ಅವರಿಗೆ ಫಿಲ್ಮ್​ಫೇರ್ ಪ್ರಶಸ್ತಿ ಲಭಿಸಿತು.

6 / 10
ತಮ್ಮ ಸಹೋದರ ನಿಗೆಲ್ ಡಿಸೋಜಾ ಅವರೊಂದಿಗೆ ಜೆನಿಲಿಯಾ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ನಿಗೆಲ್ ಕೆಲಸ ಮಾಡುತ್ತಿದ್ದಾರೆ.

2008ರಲ್ಲಿ ‘ಸತ್ಯ ಈಸ್ ಇನ್ ಲವ್’ ಚಿತ್ರದ ಮೂಲಕ ಕನ್ನಡಕ್ಕೂ ಜೆನಿಲಿಯಾ ಕಾಲಿಟ್ಟರು.

7 / 10
ತಮ್ಮ ತಾಯಿಯವರೊಂದಿಗೆ ಜೆನಿಲಿಯಾ

2008ರ ನಂತರ ಮರಳಿ ಬಾಲಿವುಡ್ ಚಿತ್ರಗಳಲ್ಲೂ ಜೆನಿಲಿಯಾ ಕಾಣಿಸಿಕೊಳ್ಳತೊಡಗಿದರು.

8 / 10
ತಮ್ಮ ಅತ್ತೆ ವೈಶಾಲಿ ದೇಶ್​ಮುಖ್ ಮತ್ತು ಇಬ್ಬರು ಮಕ್ಕಳೊಂದಿಗೆ ಜೆನಿಲಿಯಾ ಡಿಸೋಜಾ

2012ರಲ್ಲಿ ರಿತೇಶ್ ದೇಶ್​ಮುಖ್ ಅವರೊಂದಿಗೆ ಜೆನಿಲಿಯಾ ವಿವಾಹವಾದರು. ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ನಡೆಯಿತು.

9 / 10
ರಿತೇಶ್ ದೇಶ್​ಮುಖ್ ಹಾಗೂ ಜೆನಿಲಿಯಾ ಡಿಸೋಜಾ

ಸದ್ಯ ಜೆನಿಲಿಯಾ ಚಿತ್ರರಂಗದಿಂದ ದೂರ ಉಳಿದಿದ್ದು, ಮಕ್ಕಳೊಂದಿಗೆ, ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.

10 / 10

Published On - 12:04 pm, Thu, 5 August 21

SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
SC ST ಸಮುದಾಯದವರಿಗೆ ಸೈಟ್: ಸತೀಶ್ ಜಾರಕಿಹೊಳಿ ಮಹತ್ವದ ಘೋಷಣೆ
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಅಸಮಾಧಾನ ಸ್ಫೋಟ: ಪ್ರೀತಂಗೆ ನಿಖಿಲ್ ಕೌಂಟರ್
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಗಂಡ 12 ಸಾವಿರದ ಬಟ್ಟೆ ತೆಗೆದುಕೊಟ್ಟಿಲ್ಲ ಎಂದು ಕಣ್ಣೀರು ಹಾಕಿದ ಪತ್ನಿ
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
ಬೆಂಗಳೂರಲ್ಲಿ ಬಿಎಂಟಿಸಿಯಿಂದ ಮತ್ತೊಂದು ಡೆಡ್ಲಿ ಆ್ಯಕ್ಸಿಡೆಂಟ್!
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
‘ನನ್ನನ್ನು ಹಾಗೆ ಕರೀ ಬೇಡಿ ಪ್ಲೀಸ್’; ಎಲ್ಲರ ಎದುರು ಕೋರಿಕೊಂಡ ಗಿಲ್ಲಿ ನಟ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಮೋದಿ ವಿರುದ್ಧ ಕಾಂಗ್ರೆಸ್ ಫ್ಲೆಕ್ಸ್: ಪೊಲೀಸ್ ದೂರು ದಾಖಲಿಸಿದ ಬಿಜೆಪಿ
ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​
ಪತ್ನಿಗೆ ಡಿವೋರ್ಸ್​​ ನೀಡದೆ 2ನೇ ಮದುವೆಗೆ ಯತ್ನ: ವ್ಯಕ್ತಿಗೆ ಡಬಲ್​​ ಶಾಕ್​
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ನಿರ್ಮಾಣವಾಗುತ್ತಿರುವ ಹಿಂದೂ ದೇವಾಲಯದ ಗೋಡೆ ಕೆಡವಿದ ಮುಸ್ಲಿಂ ಮಹಿಳೆಯರು
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಕಲಾಕಾರ ಈ ಕಮಲಾಕರ: ಜ್ಯೋತಿಷಿಯ ನವರಂಗಿ ಆಟದ ಸ್ಪೋಟಕ ಆಡಿಯೋ ಇಲ್ಲಿದೆ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ