ಸಲ್ಮಾನ್​ ಖಾನ್​ ಜತೆ ಕೆಲಸ ಮಾಡಿದ್ರೆ ಆಗುವ ಲಾಭ-ನಷ್ಟದ ಬಗ್ಗೆ ಬಾಯ್ಬಿಟ್ಟ ಪ್ರೇಯಸಿ ಯೂಲಿಯಾ

ಸಲ್ಮಾನ್​ ಖಾನ್​ ಜತೆ ಕೆಲಸ ಮಾಡಿದ್ರೆ ಆಗುವ ಲಾಭ-ನಷ್ಟದ ಬಗ್ಗೆ ಬಾಯ್ಬಿಟ್ಟ ಪ್ರೇಯಸಿ ಯೂಲಿಯಾ
‘ಮೈ ಚಲಾ’ ಹಾಡಿನ ಪೋಸ್ಟರ್​

Main Chala song: ಯೂಲಿಯಾ ವಂಟೂರ್​ ಓರ್ವ ಗಾಯಕಿಯೂ ಹೌದು. ‘ಮೈ ಚಲಾ’ ಹಾಡಿಗೆ ಅವರು ಧ್ವನಿ ನೀಡಿದ್ದಾರೆ. ಈ ಗೀತೆಯಲ್ಲಿ ಸಲ್ಮಾನ್​ ಖಾನ್​ ಮತ್ತು ಪ್ರಗ್ಯಾ ಜೈಸ್ವಾಲ್​ ಜೋಡಿಯಾಗಿ ನಟಿಸಿದ್ದಾರೆ.

TV9kannada Web Team

| Edited By: Madan Kumar

Jan 28, 2022 | 11:49 AM

ನಟ ಸಲ್ಮಾನ್​ ಖಾನ್​ಗೆ (Salman Khan) ಈಗ 56 ವರ್ಷ ವಯಸ್ಸು. ಆದ್ರೂ ಇನ್ನೂ ಮದುವೆ ಆಗಿಲ್ಲ. ಸಲ್ಲು ಭಾಯ್​ ಶಾದಿ ಯಾವಾಗ ಎಂಬ ಪ್ರಶ್ನೆ ದಶಕಗಳಿಂದಲೂ ಕೇಳಿಬರುತ್ತಲೇ ಇದೆ. ಆದರೆ ಅದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಈ ನಡುವೆ ಸಲ್ಮಾನ್​ ಖಾನ್​ ಅವರ ಹೆಸರು ಅನೇಕ ಸುಂದರಿಯರ (Salman Khan Girlfriend) ಜೊತೆಗೆ ತಳುಕು ಹಾಕಿಕೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ರೊಮೇನಿಯನ್​ ಬೆಡಗಿ ಯೂಲಿಯಾ ವಂಟೂರ್​ (Iulia Vantur) ಜೊತೆ ಸಲ್ಮಾನ್​ ಖಾನ್​ ಒಡನಾಟ ಹೆಚ್ಚಿದೆ. ಅನೇಕ ಸಂದರ್ಭಗಳಲ್ಲಿ ಅವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಲ್ಮಾನ್​ ಖಾನ್​ ಬಳಗದಲ್ಲಿಯೇ ಯೂಲಿಯಾ ವಂಟೂರ್​ ಅವರು ಜಾಗ ಪಡೆದುಕೊಂಡಿದ್ದಾರೆ. ಸಲ್ಲು ಇದ್ದಲ್ಲಿ ಯೂಲಿಯಾ ಇದ್ದೇ ಇರುತ್ತಾರೆ ಎಂಬ ಮಾತು ಕೇಳಿಬರುತ್ತದೆ. ಈಗ ಈ ಜೋಡಿ ಒಂದು ಹಾಡಿನಲ್ಲಿ ಜೊತೆಯಾಗಿ ಕೆಲಸ ಮಾಡಿದೆ. ಹೀಗೆ ಸಲ್ಮಾನ್​ ಖಾನ್​ ಜೊತೆ ಕೆಲಸ ಮಾಡುವ ಅವಕಾಶ ಎಲ್ಲರಿಗೂ ಸಿಗೋದಿಲ್ಲ. ಒಂದು ವೇಳೆ ಸಿಕ್ಕರೆ ಅದರ ಲಾಭ-ನಷ್ಟಗಳು ಏನು ಎಂಬುದರ ಬಗ್ಗೆ ಯೂಲಿಯಾ ವಂಟೂರ್​ ಮಾತನಾಡಿದ್ದಾರೆ. ‘ಇ ಟೈಮ್ಸ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರಗಳ ಬಗ್ಗೆ ಬಾಯ್ಬಿಟ್ಟಿದ್ದಾರೆ.

ಯೂಲಿಯಾ ವಂಟೂರ್​ ಓರ್ವ ಗಾಯಕಿಯೂ ಹೌದು. ಗಾಯಕ ಗುರು ರಂಧವಾ ಜೊತೆ ಸೇರಿ ಅವರು ‘ಮೈ ಚಲಾ’ ಹಾಡಿಗೆ ಧ್ವನಿ ನೀಡಿದ್ದಾರೆ. ಈ ಹಾಡಿನಲ್ಲಿ ಸಲ್ಮಾನ್​ ಖಾನ್​ ಮತ್ತು ಪ್ರಗ್ಯಾ ಜೈಸ್ವಾಲ್​ ಅವರು ನಟಿಸಿದ್ದಾರೆ. ಸಲ್ಲು ಜತೆ ಕೆಲಸ ಮಾಡಿದ ಅನುಭವವನ್ನು ಯೂಲಿಯಾ ವಂಟೂರ್​ ಹಂಚಿಕೊಂಡಿದ್ದಾರೆ. ಸಲ್ಮಾನ್​ ಖಾನ್​ ಓರ್ವ ಸೂಪರ್​ ಸ್ಟಾರ್. ಅವರ ಜೊತೆ ಕೆಲಸ ಮಾಡಿದರೆ ಲಾಭವೂ ಇದೆ, ನಷ್ಟವೂ ಇದೆ.

ಸಲ್ಮಾನ್​ ಖಾನ್​ ಜತೆ ಕೆಲಸ ಮಾಡುವವರು ಅವರ ನೆರಳಿನಿಂದ ಹೊರಬಂದು ಸ್ವಂತವಾಗಿ ಗುರುತಿಸಿಕೊಳ್ಳುವುದು ಕಷ್ಟ. ‘ಇದೊಂದು ಅನಾನುಕೂಲ. ನಾವು ಅವರ ನೆರಳಿನಿಂದ ಹೊರಬರಬೇಕು ಎಂದರೆ ತುಂಬಾ ಶ್ರಮಪಡಬೇಕು’ ಎಂದು ಯೂಲಿಯಾ ಹೇಳಿದ್ದಾರೆ. ಸಲ್ಮಾನ್​ ಖಾನ್​ ಅವರಿಗೆ ಚಿತ್ರರಂಗದಲ್ಲಿ ಹಲವು ದಶಕಗಳ ಅನುಭವ ಇದೆ. ಅದರಿಂದ ಅವರ ಜೊತೆಗೆ ಇರುವವರಿಗೆ ಸಹಾಯ ಆಗುತ್ತದೆ. ಆದರೆ ಸ್ವಂತವಾಗಿ ಗುರುತಿಸಿಕೊಳ್ಳಬೇಕು ಎನ್ನುವವರು ತುಂಬ ಕಷ್ಟಪಡಬೇಕು ಎಂಬುದನ್ನು ಯೂಲಿಯಾ ಒಪ್ಪಿಕೊಂಡಿದ್ದಾರೆ.

‘ನಿಮ್ಮನ್ನು ನಾನು ಮುಟ್ಟಬಹುದೇ?’

‘ಮೈ ಚಲಾ’ ಮ್ಯೂಸಿಕ್​ ವಿಡಿಯೋದಲ್ಲಿ ಪ್ರಗ್ಯಾ ಜೈಸ್ವಾಲ್​ ಮತ್ತು ಸಲ್ಮಾನ್​ ಖಾನ್​ ಅವರು ಜೊತೆಯಾಗಿ ನಟಿಸಿದ್ದಾರೆ. ಮೊದಲ ದಿನದ ಶೂಟಿಂಗ್​ ಅನುಭವದ ಬಗ್ಗೆ ಅವರು ಇತ್ತೀಚೆಗೆ ಮಾತನಾಡಿದ್ದರು. ‘ಮೊದಲ ದಿನ ನಾನು ಸಲ್ಮಾನ್​ ಖಾನ್​ ಅವರನ್ನು ಭೇಟಿ ಆದಾಗ ನಾನು ಏನು ಮಾಡಬಹುದು, ಏನು ಮಾಡಬಾರದು ಎಂಬ ಬಗ್ಗೆ ಅರಿವು ನನಗೆ ಇರಲಿಲ್ಲ. ಸಲ್ಮಾನ್​ ಖಾನ್​ ಅವರಂಥ ದೊಡ್ಡ ಸ್ಟಾರ್​ ನಟನನ್ನು ಭೇಟಿಯಾದಾಗ ಅವರಿಗೆ ಕಿರಿಕಿರಿ ಆಗುವಂತೆ ನಾವು ನಡೆದುಕೊಳ್ಳಬಾರದು. ಅಪ್ಪಿತಪ್ಪಿಯೂ ಕೂಡ ಅವರಿಗೆ ಕೋಪ ಬರುವಂತೆ ನಾವು ವರ್ತಿಸಬಾರದು. ಹಾಗಾಗಿ ನಾನು ಹೆಚ್ಚಿನ ಎಚ್ಚರಿಕೆಯಿಂದ ನಡೆದುಕೊಂಡೆ. ನಿಮ್ಮನ್ನು ನಾನು ಮುಟ್ಟಬಹುದೇ ಅಂತ ಮೊದಲ ಬಾರಿಗೆ ಅನುಮತಿ ಕೇಳಿದೆ’ ಎಂದು ಪ್ರಗ್ಯಾ ಜೈಸ್ವಾಲ್​ ಹೇಳಿದ್ದರು.

ಇದನ್ನೂ ಓದಿ:

ಸಲ್ಮಾನ್​ ಖಾನ್​ ಪರ ಲಾಯರ್​ ಶ್ರೀಕಾಂತ್​ ಶಿವಡೆ ಕ್ಯಾನ್ಸರ್​ನಿಂದ ನಿಧನ; ‘ತಕ್ಕ ಶಿಕ್ಷೆ ಸಿಕ್ತು’ ಎಂದ ನೆಟ್ಟಿಗರು

‘ನನ್ನ ಧರ್ಮದ ಬಗ್ಗೆ ಮಾತಾಡ್ಬೇಡಿ’; ಪಕ್ಕದ ಮನೆಯವರಿಗೆ ಎಚ್ಚರಿಕೆ ನೀಡಿ ಕೇಸ್​ ಜಡಿದ ಸಲ್ಮಾನ್​ ಖಾನ್

Follow us on

Related Stories

Most Read Stories

Click on your DTH Provider to Add TV9 Kannada