ಸಲ್ಮಾನ್​ ಖಾನ್​ ಪರ ಲಾಯರ್​ ಶ್ರೀಕಾಂತ್​ ಶಿವಡೆ ಕ್ಯಾನ್ಸರ್​ನಿಂದ ನಿಧನ; ‘ತಕ್ಕ ಶಿಕ್ಷೆ ಸಿಕ್ತು’ ಎಂದ ನೆಟ್ಟಿಗರು

ಸಲ್ಮಾನ್​ ಖಾನ್​ ಪರ ಲಾಯರ್​ ಶ್ರೀಕಾಂತ್​ ಶಿವಡೆ ಕ್ಯಾನ್ಸರ್​ನಿಂದ ನಿಧನ; ‘ತಕ್ಕ ಶಿಕ್ಷೆ ಸಿಕ್ತು’ ಎಂದ ನೆಟ್ಟಿಗರು
ಸಲ್ಮಾನ್ ಖಾನ್, ಶ್ರೀಕಾಂತ್ ಶಿವಡೆ

Shrikant Shivade Death: ಖ್ಯಾತ ಕ್ರಿಮಿನಲ್​ ಲಾಯರ್​ ಶ್ರೀಕಾಂತ್​ ಶಿವಡೆ ನಿಧನದ ಸುದ್ದಿಯು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ. ಅದಕ್ಕೆ ಕಮೆಂಟ್​ ಮಾಡಿರುವ ಅನೇಕರು ಹಿಡಿಶಾಪ ಹಾಕಿದ್ದಾರೆ.

TV9kannada Web Team

| Edited By: Madan Kumar

Jan 20, 2022 | 9:11 AM

ಖ್ಯಾತ ಕ್ರಿಮಿನಲ್​ ಲಾಯರ್​ ಶ್ರೀಕಾಂತ್​ ಶಿವಡೆ (Shrikant Shivade) ನಿಧನರಾಗಿದ್ದಾರೆ. ಅನೇಕ ಹೈ-ಪ್ರೊಫೈಲ್​ ಕೇಸ್​ಗಳಲ್ಲಿ ವಾದ ಮಾಡುವ ಮೂಲಕ ಅವರು ಹೆಸರು ಗಳಿಸಿದ್ದರು. ಹಲವು ದಿನಗಳಿಂದ ಶ್ರೀಕಾಂತ್ ಶಿವಡೆ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ ರಕ್ತದ ಕ್ಯಾನ್ಸರ್​ (Cancer) ಆಗಿತ್ತು ಎಂಬ ಮಾಹಿತಿ ಹೇಳಿಬಂದಿದೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ (ಜ.19) ಅವರು ನಿಧನರಾದರು. ಸಲ್ಮಾನ್​ ಖಾನ್ (Salman Khan)​, ಸೈಫ್​ ಅಲಿ ಖಾನ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಕೇಸ್​ ನಿಭಾಯಿಸಿದ್ದು ಇದೇ ಶ್ರೀಕಾಂತ್​ ಶಿವಡೆ. ಸಲ್ಮಾನ್​ ಖಾನ್​ ಅವರ ಹಿಟ್​ ಆ್ಯಂಡ್​ ರನ್​ ಕೇಸ್​ ಕೈಗೆತ್ತಿಕೊಳ್ಳುವ ಮೂಲಕ ಅವರು ಫೇಮಸ್​ ಆಗಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ನೆಟ್ಟಿಗರು ಸಹಜವಾಗಿಯೇ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಆದರೆ ಕೆಲವರು ನೆಗೆಟಿವ್​ ಕಮೆಂಟ್​ ಮಾಡಿದ್ದಾರೆ. ‘ಇಂಥವರಿಗೆ ಹೀಗೆಯೇ ಆಗಬೇಕು’ ಎಂದು ಖಾರವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಬಾಲಿವುಡ್​ ಸೆಲೆಬ್ರಿಟಿಗಳು ಮತ್ತು ದೊಡ್ಡ ದೊಡ್ಡ ಉದ್ಯಮಿಗಳ ಪರವಾಗಿ ಶ್ರೀಕಾಂತ್​ ಶಿವಡೆ ವಕಾಲತ್ತು ವಹಿಸುತ್ತಿದ್ದರು. ಅತ್ಯಾಚಾರದ ಕೇಸ್​ನಲ್ಲಿ ಜೈಲು ಸೇರಿದ ಶೈನಿ ಅಹುಜಾ ಪರವಾಗಿಯೂ ಅವರು ವಾದ ಮಾಡಿದ್ದರು. 2ಜಿ ಸ್ಪೆಕ್ಟ್ರಂ ಹಗರಣದ ಆರೋಪಿಗಳಿಗೂ ಶ್ರೀಕಾಂತ್​ ಶಿವದೆ ಲಾಯರ್​ ಆಗಿದ್ದರು. ಹಾಗಾಗಿ ಅವರ ಬಗ್ಗೆ ಅನೇಕರಿಗೆ ಅಸಮಾಧಾನವಿತ್ತು.

ಶ್ರೀಕಾಂತ್​ ಶಿವಡೆ ನಿಧನದ ಸುದ್ದಿಯನ್ನು ವೈರಲ್​ ಭಯಾನಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಕಮೆಂಟ್​ ಮಾಡಿರುವ ಅನೇಕರು ಹಿಡಿಶಾಪ ಹಾಕಿದ್ದಾರೆ. ‘ಕ್ರಿಮಿನಲ್​ಗಳನ್ನು ಇವರು ರಕ್ಷಿಸುತ್ತಿದ್ದರು. ಅದಕ್ಕಾಗಿಯೇ ಈ ರೀತಿ ಆಗಿದೆ. ಕರ್ಮ ಬಿಡುವುದಿಲ್ಲ. ಎಲ್ಲರೂ ಸಾಯಲೇಬೇಕು. ಆದರೆ ಎಂಥ ಸಾವು ಬರುತ್ತದೆ ಎಂಬುದು ಮುಖ್ಯ. ಇಂಥವರ ವಿಚಾರದಲ್ಲಿ ಕರುಣೆಯೇ ಬೇಕಾಗಿಲ್ಲ’ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ವಜ್ರ ವ್ಯಾಪಾರಿ ಭರತ್​ ಷಾ ಕೇಸ್​, ಶೀನಾ ಬೋರಾ ಮರ್ಡರ್​ ಕೇಸ್​ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಶ್ರೀಕಾಂತ್ ಶಿವಡೆ ವಕಾಲತ್ತು ವಹಿಸಿದ್ದರು. ತಾಯಿ, ಪತ್ನಿ, ಓರ್ವ ಮಗ ಹಾಗೂ ಮಗಳನ್ನು ಅವರು ಅಗಲಿದ್ದಾರೆ.

ಇದನ್ನೂ ಓದಿ:

ನಟ ಸಲ್ಮಾನ್ ಖಾನ್ ಬೇಟೆಯಾಡಿದ್ದ ಕೃಷ್ಣ ಮೃಗದ ನೆನಪಲ್ಲಿ ನಿರ್ಮಾಣ ಆಗಲಿದೆ ಬೃಹತ್​ ಸ್ಮಾರಕ

Pradeep Raj Death: ಕೊರೊನಾ ಸೋಂಕಿನಿಂದ ‘ಕಿರಾತಕ’ ಚಿತ್ರದ​ ನಿರ್ದೇಶಕ ಪ್ರದೀಪ್​ ರಾಜ್​ ನಿಧನ

Follow us on

Related Stories

Most Read Stories

Click on your DTH Provider to Add TV9 Kannada