ಕಳೆದ 6 ತಿಂಗಳಿನಿಂದ ಪ್ರದೀಪ್ ರಾಜ್ ಅವರಿಗೆ ಆರೋಗ್ಯ ಕೈಕೊಟ್ಟಿತ್ತು. ಆ ಬಗ್ಗೆ ಅವರ ಸಹೋದರ ಪ್ರಶಾಂತ್ ರಾಜ್ ಮಾಹಿತಿ ನೀಡಿದ್ದಾರೆ. ‘ಕೊರೊನಾ ಸೋಂಕು ತಗುಲಿತ್ತು. 6 ತಿಂಗಳಿಂದ ಲಿವರ್ ಸಮಸ್ಯೆ ಆಗಿತ್ತು. ಅನೇಕ ಆಸ್ಪತ್ರೆಗಳಿಗೆ ತೋರಿಸಿದ್ದೆವು. ಕಳೆದ 15 ವರ್ಷದಿಂದಲೂ ಅವರಿಗೆ ಡಯಾಬಿಟಿಸ್ ಇತ್ತು. ಕೊರೊನಾ ಲಾಕ್ಡೌನ್ ಸಮಯದಲ್ಲಿ ಅವರು ಕಾಳಜಿ ವಹಿಸಲಿಲ್ಲ. ಅದರಿಂದ ಒಳಗಡೆ ಇನ್ಫೆಕ್ಷನ್ ಆಯಿತು’ ಎಂದು ಪ್ರಶಾಂತ್ ರಾಜ್ ಮಾಹಿತಿ ನೀಡಿದ್ದಾರೆ.
‘ನಮ್ಮ ಸ್ವಂತ ಊರು ಪಾಂಡಿಚೆರಿ. ಹಾಗಾಗಿ ಕಳೆದ ಆಗಸ್ಟ್ನಿಂದ ಇಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆವು. ಮಧ್ಯರಾತ್ರಿ 3 ಗಂಟೆಗೆ ಕೊನೆಯುಸಿರೆಳೆದರು. ತಮಗೆ ಇನ್ನೂ ಚಿಕ್ಕ ವಯಸ್ಸು, ಮಾತ್ರೆ ತಗೊಂಡ್ರೆ ಸರಿಯಾಗತ್ತೆ ಅಂತ ಅವರು ನಿರ್ಲಕ್ಷ್ಯ ಮಾಡಿದ್ರು’ ಎಂದು ಪ್ರಶಾಂತ್ ರಾಜ್ ಮಾಹಿತಿ ತಿಳಿಸಿದ್ದಾರೆ.
ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಪ್ರದೀಪ್ ರಾಜ್ ಅಗಲಿದ್ದಾರೆ. ಗುರುವಾರ (ಜ.20) ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಾಂಡಿಚರಿಯಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ. ನಿಧನದ ಸುದ್ದಿ ತಿಳಿದು ಕನ್ನಡ ಚಿತ್ರರಂಗದ ಅನೇಕರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ:
Covid-19: ಕೊವಿಡ್ನಿಂದ ಮೃತಪಟ್ಟವರ ದೇಹದಲ್ಲೂ 9 ದಿನ ಕೊರೊನಾವೈರಸ್ ಜೀವಂತವಾಗಿರುತ್ತದೆ!
ಕೊರೊನಾ 3ನೇ ಅಲೆ ಉತ್ತುಂಗದಲ್ಲಿ ಪ್ರತಿದಿನದ ಸೋಂಕು ಪ್ರಕರಣಗಳು 1 ಲಕ್ಷ ದಾಟಬಹುದು: ಆರೋಗ್ಯ ಸಚಿವ ಸುಧಾಕರ