AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀದೇವಿ ಅವರ ಅಪರೂಪದ ಫೋಟೋ ಹಂಚಿಕೊಂಡ ಪತಿ ಬೋನಿ ಕಪೂರ್​

ಶ್ರೀದೇವಿ ಅವರು ದುಬೈನಲ್ಲಿ ಮೃತಪಟ್ಟಿದ್ದರು. ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿ ಕೊನೆಯುಸಿರು ಎಳೆಯುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ.

ಶ್ರೀದೇವಿ ಅವರ ಅಪರೂಪದ ಫೋಟೋ ಹಂಚಿಕೊಂಡ ಪತಿ ಬೋನಿ ಕಪೂರ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jan 19, 2022 | 4:14 PM

Share

ಮೈಮಾಟದಲ್ಲಿ, ನಟನೆಯಲ್ಲಿ ಶ್ರೀದೇವಿಯನ್ನು (Sridevi ) ಮೀರಿಸುವ ಮತ್ತೋರ್ವ ನಟಿ ಇರಲಿಲ್ಲ. ಅವರಿಗೆ ಸಾಕಷ್ಟು ಜನರು ಅಭಿಮಾನಿಗಳಿದ್ದರು. ಅವರಿಲ್ಲದೆ ಕೆಲವು ವರ್ಷಗಳು ಕಳೆದಿವೆ. ಅವರನ್ನು ನೆನಪು ಮಾಡಿಕೊಳ್ಳುವ ಕೆಲಸ ಎಲ್ಲ ಕಡೆಗಳಲ್ಲೂ ಆಗುತ್ತಿದೆ. ಶ್ರೀದೇವಿಯನ್ನು ಮಗಳು ಜಾನ್ವಿ ಕಪೂರ್​ (Janhvi Kapoor), ಅವರ ಪತಿ ಬೋನಿ ಕಪೂರ್ (Boney Kapoor)​ ನೆನಪಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಬೋನಿ ಕಪೂರ್​ ಅವರು ಇನ್​​ಸ್ಟ್ರಾಗ್ರಾಂಗೆ ಕಾಲಿಟ್ಟಿದ್ದಾರೆ. ಅವರು ಬಂದ ದಿನವೇ ಕುಟುಂಬದ ಸದಸ್ಯರ ಜತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಶ್ರೀದೇವಿ ಅವರ ಫೋಟೋ ಎಲ್ಲರ ಗಮನ ಸೆಳೆದಿದೆ.

ಶ್ರೀದೇವಿ ಅವರು ದುಬೈನಲ್ಲಿ ಮೃತಪಟ್ಟಿದ್ದರು. ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿ ಕೊನೆಯುಸಿರು ಎಳೆಯುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ ಉಂಟಾಗಿದೆ. ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಈಗ ಬೋನಿ ಅವರು ಶ್ರೀದೇವಿ ಅವರ ಹಳೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೋ ಎಲ್ಲರ ಗಮನ ಸೆಳೆದಿದೆ.

ದುರ್ಗಾ ಪೂಜೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಬೋನಿ ಕಪೂರ್​ ಹಂಚಿಕೊಂಡಿದ್ದಾರೆ. ಶ್ರೀದೇವಿ ಅವರು ಬಿಳಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬೆನ್ನಿನ ಮೇಲೆ ಬೋನಿ ಎಂದು ಕುಂಕುಮದಲ್ಲಿ ಬರೆಯಲಾಗಿದೆ. 2012ರಲ್ಲಿ ತೆಗೆದ ಫೋಟೋ ಇದಾಗಿದೆ. ‘2012ರಲ್ಲಿ ಲಖನೌನಲ್ಲಿ ದುರ್ಗಾ ಪೂಜೆ ಸಂದರ್ಭದಲ್ಲಿ ತೆಗೆದ ಫೋಟೋ’ ಎಂದು ಕ್ಯಾಪ್ಶನ್​ ನೀಡಿದ್ದಾರೆ ಬೋನಿ.

ಬೋನಿ ಕಪೂರ್​ ಅವರು ಬಾಲಿವುಡ್​ನ ಖ್ಯಾತ ನಿರ್ಮಾಪಕ. ಅವರು ಹಲವು ಸೂಪರ್​ ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಇದರ ಜತೆಗೆ ಅವರು ಕುಟುಂಬಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಮಗಳು ಜಾನ್ವಿ ಕಪೂರ್​ ಮೇಲೆ ಅವರಿಗೆ ಅಪಾರ ಪ್ರೀತಿ ಇದೆ. ಇದೇ ಮೊದಲ ಬಾರಿಗೆ ಅವರು ತಮ್ಮ ತಂದೆ ಬೋನಿ ಕಪೂರ್​ ನಿರ್ಮಾಣ ಮಾಡಲಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ‘ಮಿಲಿ’ ಎಂದು ಹೆಸರು ಇಡಲಾಗಿದೆ. ಅಪ್ಪನ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶ್ರೀದೇವಿ ಮಗಳ ಬಜಾರಿತನ ಹೇಗಿದೆ ನೋಡಿ; ವೈರಲ್​ ಆಯ್ತು ಜಾನ್ವಿ ಕಪೂರ್​ ಜಗಳದ ವಿಡಿಯೋ

12 ವರ್ಷ ಹಿರಿಯ ಮಹಿಳೆ ಜತೆಗಿನ ಪ್ರೀತಿ ಬಗ್ಗೆ ಬಾಯಿ ಬಿಟ್ಟ ಅರ್ಜುನ್​ ಕಪೂರ್​; ಬೇರೆ ಕಾರಣಕ್ಕೆ ತಂದೆ ಬೋನಿ ಕಪೂರ್​ ಕಣ್ಣೀರು