Evelyn Sharma: ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಹಂಚಿಕೊಂಡ ಬಾಲಿವುಡ್​ ನಟಿ 

ನಟಿ ಎವೆಲಿನ್ ಶರ್ಮಾ ಅವರು ಕಳೆದ ವರ್ಷ ಮೇ 15ರಂದು ತಮ್ಮ ಬಾಯ್​ಫ್ರೆಂಡ್​ ತುಷಾನ್ ಭಿಂಡಿ ಜತೆ ವಿವಾಹವಾದರು. ಜೂನ್‌ನಲ್ಲಿ ಅವರು ಮದುವೆ ಫೋಟೋಗಳನ್ನು ಹಂಚಿಕೊಂಡರು. ನವೆಂಬರ್​ನಲ್ಲಿ ಅವರಿಗೆ ಮಗು ಜನಿಸಿತು.

Evelyn Sharma: ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಹಂಚಿಕೊಂಡ ಬಾಲಿವುಡ್​ ನಟಿ 
ಎವೆಲಿನ್ ಶರ್ಮಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jan 20, 2022 | 8:16 PM

ಎವೆಲಿನ್​ ಶರ್ಮಾ (Evelyn Sharma) ಅವರು ಬಾಲಿವುಡ್​ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಣಬೀರ್​ ಕಪೂರ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಯೇ ಜವಾನಿ ಹೇ ದಿವಾನಿ’ ಸಿನಿಮಾದಲ್ಲಿ ಎವೆಲಿನ್​ ಮಾಡಿದ ಪೋಷಕ ಪಾತ್ರ ಮೆಚ್ಚುಗೆ ಪಡೆದುಕೊಂಡಿತ್ತು. ಅವರಿಗೆ ಕಳೆದ ವರ್ಷ ನವೆಂಬರ್​ನಲ್ಲಿ ಮಗು ಜನಿಸಿದೆ. ಈಗ ಅವರು ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ, ಅದರ ಸ್ಟ್ರಗಲ್​ ಬಗ್ಗೆಯೂ ಬರೆದುಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಅಮ್ಮ ಮತ್ತು ಮಗುವಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ನಟಿ ಎವೆಲಿನ್ ಶರ್ಮಾ ಅವರು ಕಳೆದ ವರ್ಷ ಮೇ 15ರಂದು ತಮ್ಮ ಬಾಯ್​ಫ್ರೆಂಡ್​ ತುಷಾನ್ ಭಿಂಡಿ ಜತೆ ವಿವಾಹವಾದರು. ಜೂನ್‌ನಲ್ಲಿ ಅವರು ಮದುವೆ ಫೋಟೋಗಳನ್ನು ಹಂಚಿಕೊಂಡರು. ನವೆಂಬರ್​ನಲ್ಲಿ ಅವರಿಗೆ ಮಗು ಜನಿಸಿತು. ಅವಾ ಎಂದು ಮಗುವಿಗೆ ಹೆಸರಿಡಲಾಗಿದೆ. ಮಗುವಿನ ಜತೆಗಿನ ಹಲವು ಫೋಟೋಗಳನ್ನು ಎವೆಲಿನ್​ ಈ ಮೊದಲು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ತಾಯಿ ಆಗಿರುವ ಸಂಭ್ರಮವನ್ನು ಅಭಿಮಾನಿಗಳ ಎದುರು ವ್ಯಕ್ತಪಡಿಸುತ್ತಿದ್ದಾರೆ.

ಈಗ ಹೊಸ ಪೋಸ್ಟ್​ನಲ್ಲಿ ಮಗಳಿಗೆ ಹಾಲುಣಿಸುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಮಗು ಎದೆಹಾಲು ಕುಡಿಯುತ್ತಿದೆ. ಎವೆಲಿನ್​ ಅವರು ಕ್ಯಾಮೆರಾ ಕಡೆಗೆ ನೋಡಿದ್ದಾರೆ. ಅವರು ತಾಯಿ ಆಗಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಕ್ಯಾಪ್ಷನ್​ನಲ್ಲಿ ಅವರು ತಮ್ಮ ಸ್ಟ್ರಗಲ್​ ಬಗ್ಗೆ ವಿವರಿಸಿದ್ದಾರೆ. ಈ ಫೋಟೋಗೆ ಸ್ಮೈಲ್​ ಫಾರ್​ ದಿ ಕ್ಯಾಮೆರಾ ಹಾಗೂ ಥಿಂಗ್ಸ್​ ನೋ ಒನ್​ ವಾರ್ನ್ಸ್​ ಅಬೌಟ್​ ಎನ್ನುವ ಹ್ಯಾಶ್​ಟ್ಯಾಗ್​ ಹಾಕಿದ್ದಾರೆ.

ತುಷಾನ್​ ಆಸ್ಟ್ರೇಲಿಯಾ ಮೂಲದ ವೈದ್ಯ. ಅವರು ಉದ್ಯಮಿ ಕೂಡ ಹೌದು. ‘ಯೇ ಜವಾನಿ ಹೇ ದಿವಾನಿ’, ‘ಮೇ ತೆರಾ ಹೀರೋ’, ‘ಜಬ್​ ಹ್ಯಾರಿ ಮೆಟ್​ ಸೇಜಲ್​’, ‘ಸಾಹೋ’, ‘ನೌಟಂಕಿ ಸಾಲಾ’ ಮೊದಲಾದ ಚಿತ್ರಗಳಲ್ಲಿ ಎವೆಲಿನ್​ ನಟಿಸಿದ್ದಾರೆ. ಅವರು ಕೆಲವೇ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಅವರಿಗೆ ಅಭಿಮಾನಿ ಬಳಗ ದೊಡ್ದದಿದೆ. ಇನ್​​ಸ್ಟ್ರಾಗ್ರಾಮ್​ನಲ್ಲಿ ಅವರನ್ನು ಬರೋಬ್ಬರಿ 29 ಲಕ್ಷ ಜನರು ಹಿಂಬಾಲಿಸುತ್ತಿದ್ದಾರೆ. ‘ಸಾಹೋ’ ಬಳಿಕ ಅವರು ಯಾವುದೇ ಸಿನಿಮಾಗಳಲ್ಲೂ ನಟಿಸಿಲ್ಲ. ಮುಂದಿನ ಕೆಲ ವರ್ಷ ಅವರು ಕುಟುಂಬಕ್ಕೆ ಸಮಯ ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Amulya: ಅದ್ದೂರಿಯಾಗಿ ನಡೆದ ಅಮೂಲ್ಯ ಸೀಮಂತ ಶಾಸ್ತ್ರ; ಇಲ್ಲಿವೆ ಫೋಟೋಗಳು

ಹೊಸ ಫೋಟೋ ಹಂಚಿಕೊಂಡ ನಟಿ; ಕಂಕುಳ ಕೂದಲ ನೋಡಿ ಕೆಟ್ಟದಾಗಿ ಕಮೆಂಟ್​ ಹಾಕಿದ ಅಭಿಮಾನಿಗಳು

Published On - 8:14 pm, Thu, 20 January 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ