ಬಾಲಿವುಡ್ ತಾರೆಯರಿಗೆ ‘ಪುಷ್ಪ’ ಕಪಾಳಮೋಕ್ಷ ಮಾಡಿದೆ ಎಂದ ವಿವಾದಿತ ನಟ
ರಣವೀರ್ ಸಿಂಗ್ ನಟನೆಯ ‘83’ ಸಿನಿಮಾ ಕೂಡ ‘ಪುಷ್ಪ’ ಚಿತ್ರಕ್ಕೆ ದೊಡ್ಡ ಪ್ರತಿಸ್ಪರ್ಧಿಯಾಗಿತ್ತು. ಆದರೆ, ಇದನ್ನು ‘ಪುಷ್ಪ’ ಸಿನಿಮಾ ಮೆಟ್ಟಿ ನಿಂತಿದೆ. ಬಾಲಿವುಡ್ನಲ್ಲೇ ಸಿದ್ಧವಾದ ‘83’ ಕಲೆಕ್ಷನ್ ಮಾಡಿದ್ದು ಕೇವಲ 103 ಕೋಟಿ ರೂಪಾಯಿ.
ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ ಸಿನಿಮಾ (Pushpa Movie) ವಿಶ್ವಾದ್ಯಂತ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಹಿಟ್ ಆಗೋಕೆ ಹಲವು ಕಾರಣಗಳಿವೆ. ಅಲ್ಲು ಅರ್ಜುನ್ ನಟನೆಯ ಸಿನಿಮಾವೊಂದು ಇದೇ ಮೊದಲ ಬಾರಿಗೆ ಹಿಂದಿಗೆ ಡಬ್ ಆಗಿ ಚಿತ್ರಮಂದಿರದಲ್ಲಿ ತೆರೆಕಂಡಿದೆ. ಈ ಚಿತ್ರ ಹಿಂದಿ ಬಾಕ್ಸ್ ಆಫೀಸ್ನಲ್ಲಿ 96 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರಿಂದ ಎಲ್ಲರೂ ಹುಬ್ಬೇರಿಸುವಂತಾಗಿದೆ. ದಕ್ಷಿಣ ಭಾರತದ ಸಿನಿಮಾ ಹಿಂದಿ ಚಿತ್ರರಂಗದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿ ಮಾಡಿರುವುದಕ್ಕೆ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಅಚ್ಚರಿ ಎಂದರೆ ಬಾಲಿವುಡ್ನ ಕೆಲವರು ಇದನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ. ಅಲ್ಲದೆ, ಬಾಲಿವುಡ್ ನಟರನ್ನು ಟೀಕಿಸಿದ್ದಾರೆ.
ನಟ, ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್. ಖಾನ್ ಅವರು ಎಲ್ಲರಿಗಿಂತ ಭಿನ್ನ. ಬಾಲಿವುಡ್ನ ಅನೇಕ ಸ್ಟಾರ್ ಕಲಾವಿದರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ಕಲಾವಿದರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಾರೆ. ಈ ಹಿಂದೆ ಅನೇಕ ಬಾರಿ ಸಲ್ಮಾನ್ ಖಾನ್ ವಿರುದ್ಧ ಕಮಾಲ್ ಆರ್. ಖಾನ್ ಗುಡುಗಿದ್ದುಂಟು. ಈಗ ಎಲ್ಲಾ ಬಾಲಿವುಡ್ ಸ್ಟಾರ್ಗಳನ್ನು ಒಟ್ಟಾಗಿ ಸೇರಿಸಿ ಟೀಕಿಸಿದ್ದಾರೆ.
ರಣವೀರ್ ಸಿಂಗ್ ನಟನೆಯ ‘83’ ಸಿನಿಮಾ ಕೂಡ ‘ಪುಷ್ಪ’ ಚಿತ್ರಕ್ಕೆ ದೊಡ್ಡ ಪ್ರತಿಸ್ಪರ್ಧಿಯಾಗಿತ್ತು. ಆದರೆ, ಇದನ್ನು ‘ಪುಷ್ಪ’ ಸಿನಿಮಾ ಮೆಟ್ಟಿ ನಿಂತಿದೆ. ಬಾಲಿವುಡ್ನಲ್ಲೇ ಸಿದ್ಧವಾದ ‘83’ ಕಲೆಕ್ಷನ್ ಮಾಡಿದ್ದು ಕೇವಲ 103 ಕೋಟಿ ರೂಪಾಯಿ. ಆದರೆ, ‘ಪುಷ್ಪ’ ಹಿಂದಿ ಡಬ್ಬಿಂಗ್ ವರ್ಷನ್ ಬಾಚಿಕೊಂಡಿದ್ದು 96 ಕೋಟಿ ರೂಪಾಯಿ. ಇದೇ ವಿಚಾರ ಇಟ್ಟುಕೊಂಡು ಕಮಾಲ್ ಟೀಕಿಸಿದ್ದಾರೆ.
Film #Pushpa has done approx ₹100Cr business in Hindi circuit. Huge congratulations to @alluarjun for such a great achievement! It’s a slap on the face of Bollywood stars.
— KRK (@kamaalrkhan) January 27, 2022
‘ಪುಷ್ಪ ಚಿತ್ರ ಹಿಂದಿ ಅವತರಣಿಕೆ ಸುಮಾರು 100 ಕೋಟಿ ಗಳಿಕೆ ಮಾಡಿದೆ. ಇಂತಹ ದೊಡ್ಡ ಸಾಧನೆಗಾಗಿ ಅಲ್ಲು ಅರ್ಜುನ್ ಅವರಿಗೆ ದೊಡ್ಡ ಅಭಿನಂದನೆಗಳು. ಇದು ಬಾಲಿವುಡ್ ತಾರೆಯರಿಗೆ ಮಾಡಿದ ಕಪಾಳಮೋಕ್ಷ’ ಎಂದಿದ್ದಾರೆ ಕಮಾಲ್ ಆರ್. ಖಾನ್.
‘ಪುಷ್ಪ 2’ಗೆ ಬೇಡಿಕೆ…
‘ಪುಷ್ಪ 2’ ಸಿನಿಮಾ ಮೇಲೆ ಎಲ್ಲರ ಕಣ್ಣಿದೆ. ಈ ಸಿನಿಮಾದ ಶೂಟಿಂಗ್ ಇನ್ನೇನು ಆರಂಭಗೊಳ್ಳಬೇಕಿದೆ. ಅದಕ್ಕೂ ಮೊದಲೇ ಈ ಚಿತ್ರಕ್ಕೆ 400 ಕೋಟಿ ರೂಪಾಯಿ ಬೇಡಿಕೆ ಬಂದಿದೆ. ಕೊವಿಡ್ ಕಾಣಿಸಿಕೊಂಡ ನಂತರದಲ್ಲಿ ಎಲ್ಲ ಕಡೆಗಳಲ್ಲೂ ಒಟಿಟಿಯದ್ದೇ ಹವಾ. ಬಹುಬೇಗನೆ ಒಟಿಟಿ ವ್ಯಾಪ್ತಿ ಹೆಚ್ಚುತ್ತಿದೆ. ದೊಡ್ಡದೊಡ್ಡ ಸಿನಿಮಾಗಳ ಮೇಲೆ ಒಟಿಟಿ ಸಂಸ್ಥೆಗಳು ಕಣ್ಣಿಡುತ್ತಿವೆ. ಥಿಯೇಟರ್ಗೂ ಮೊದಲೇ ಸಿನಿಮಾ ತಮ್ಮ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಆದರೆ, ಅದಕ್ಕೆ ಹೆಚ್ಚು ಬೇಡಿಕೆ ಸೃಷ್ಟಿಯಾಗಲಿದೆ ಎಂಬುದನ್ನು ಒಟಿಟಿ ಸಂಸ್ಥೆಗಳು ಅರಿತಿವೆ. ಆದರೆ, ‘ಪುಷ್ಪ 2’ ಸಂಸ್ಥೆಗೆ ಬಂದಿದ್ದು ಒಟಿಟಿ ಬೇಡಿಕೆಯಾ? ಅಲ್ಲ. ಚಿತ್ರಮಂದಿರ ಹಕ್ಕನ್ನು ನೀಡುವಂತೆ ಕೋರಿ ಖ್ಯಾತ ನಿರ್ಮಾಣ ಸಂಸ್ಥೆಯೊಂದು 400 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ.
‘ಪುಷ್ಪ’ ಸಿನಿಮಾದ ಅದ್ದೂರಿತನ, ದೃಶ್ಯ ವೈಭವ ಪ್ರೇಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ ‘ಪುಷ್ಪ 2’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಕಾರಣಕ್ಕೆ ಅನೇಕರು ಇದರ ಲಾಭ ಪಡೆಯೋಕೆ ಪ್ರಯತ್ನಿಸುತ್ತಿದ್ದಾರೆ. ಎಲ್ಲ ಭಾಷೆಗಳಲ್ಲಿ ‘ಪುಷ್ಪ’ ಸಿನಿಮಾ ರಿಲೀಸ್ ಮಾಡಲು ಚಿತ್ರದ ಥಿಯೇಟರ್ ಹಕ್ಕುಗಳನ್ನು ನೀಡುವಂತೆ ಉತ್ತರ ಭಾರತದ ನಿರ್ಮಾಣ ಸಂಸ್ಥೆ ಮುಂದೆ ಬಂದಿದ್ದು, ದೊಡ್ಡ ಮೊತ್ತದ ಆಫರ್ ನೀಡಿದೆ. ಈ ವಿಚಾರದ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಇದನ್ನೂ ಓದಿ: Viral Video; ಪುಷ್ಪ ಚಿತ್ರದ ಶ್ರೀವಲ್ಲಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಅಪ್ಪ-ಮಗಳು
ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಹೇಗೆ? ‘ಪುಷ್ಪ’ ಚಿತ್ರದ ಟ್ರೇಡ್ ಸೀಕ್ರೆಟ್ ಇಲ್ಲಿದೆ..