ದೇವರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಹಿಂದಿ ಕಿರುತೆರೆ ನಟಿ ಶ್ವೇತಾ ತಿವಾರಿ
ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾನೆ ಎಂದು ವಿವಾದಾತ್ಮಕ ಹೇಳಿಕೆಯನ್ನು ಕಿರುತೆರೆ ನಟಿ ಶ್ವೇತಾ ತಿವಾರಿ ಹೇಳಿದ್ದಾರೆ. ಇದನ್ನು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಖಂಡಿಸಿದ್ದಾರೆ.
ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ ಅವರು ದೇವರ ಕುರಿತಾಗಿ ಹೇಳಿಕೆಯೊಂದನ್ನು ನೀಡಿ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ. ತಮ್ಮ ಒಳಉಡುಪುಗಳ ಬಗ್ಗೆ ಹೇಳಿಕೆ ನೀಡುವಾಗ ದೇವರನ್ನು ಉಲ್ಲೇಖಿಸಿ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ, ಅವರು ಫ್ಯಾಶನ್ಗೆ ಆಧರಿಸಿದ ತನ್ನ ಮುಂಬರುವ ವೆಬ್ ಸರಣಿ ‘ಶೋ ಸ್ಟಾಪರ್’ ಪ್ರಚಾರ ಮಾಡಲು ಭೋಪಾಲ್ಗೆ ಬಂದಾಗ ಈ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಟಿ ಶ್ವೇತಾ ತನ್ನ ಬ್ರಾ ಗಾತ್ರವನ್ನು ‘ದೇವರು’ ತೆಗೆದುಕೊಳ್ಳುತ್ತಿದ್ದಾನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇವರ ಬಗ್ಗೆ ಈ ರೀತಿಯಾಗೆ ತಮಾಷೆ ಮಾಡಿದಕ್ಕೆ ಹಲವರು ಇದು ಸರಿಯಲ್ಲ ಎಂದು ಟೀಕಿಸಿದ್ದಾರೆ.
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಶ್ವೇತಾ ತಿವಾರಿ ಅವರ ಹೇಳಿಕೆಯನ್ನು ತನಿಖೆ ಮಾಡಿ 24 ಗಂಟೆಗಳ ಒಳಗೆ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ನರೋತ್ತಮ್ ಮಿಶ್ರಾ, “ನಾನು ನಟಿ ಶ್ವೇತಾ ತಿವಾರಿ ಹೇಳಿಕೆಯನ್ನು ಕೇಳಿದ್ದೇನೆ ಮತ್ತು ಅದನ್ನು ತೀವ್ರವಾಗಿ ಖಂಡಿಸುತ್ತೇನೆ. ನಾನು ಈ ಬಗ್ಗೆ ತನಿಖೆ ನಡೆಸಿ 24 ಗಂಟೆಗಳ ಒಳಗೆ ವರದಿ ನೀಡುವಂತೆ ಭೋಪಾಲ್ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದೇನೆ. ನಂತರ, ಈ ವಿಷಯದಲ್ಲಿ ಏನು ಕ್ರಮ ಕೈಗೊಳ್ಳಬಹುದು ಎಂಬುದನ್ನು ನಾವು ವಿಚಾರಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ನಟಿ ಶ್ವೇತಾ ತಿವಾರಿ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅದರಲ್ಲಿ ಅವರು ತಮ್ಮ ಒಳ ಉಡುಪುಗಳ ಬಗ್ಗೆ ಮಾತನಾಡುವಾಗ ದೇವರನ್ನು ಉಲ್ಲೇಖಿಸಿದ್ದಾರೆ. “ಮೇರಿ ಬ್ರಾ ಕಾ ಸೈಜ್ ಭಗವಾನ್ ಲೇ ರಹೇ ಹೈ,” ಎಂದು ಹೇಳಿದ್ದಾರೆ.
ಶ್ವೇತಾ ತಿವಾರಿ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯ ಮತ್ತು ಪ್ರೀತಿಪಾತ್ರ ನಟಿಯರಲ್ಲಿ ಒಬ್ಬರು. ಅವರು ‘ಕಸೌತಿ ಜಿಂದಗಿ ಕೇ’ ನಲ್ಲಿ ಪ್ರೇರಣಾ ಪಾತ್ರವನ್ನು ನಿರ್ವಹಿಸುವ ಮೂಲಕ ಮನೆಮಾತಾಗಿದ್ದರು. ಅಷ್ಟೇ ಅಲ್ಲದೇ ಖತ್ರೋನ್ ಕೆ ಖಿಲಾಡಿ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡರು. ಅರ್ಜುನ್ ಬಿಜ್ಲಾನಿ, ದಿವ್ಯಾಂಕಾ ತ್ರಿಪಾಠಿ, ವರುಣ್ ಸೂದ್ ಮತ್ತು ವಿಶಾಲ್ ಆದಿತ್ಯ ಸಿಂಗ್ ಅವರೊಂದಿಗೆ ಟಾಪ್ 5 ಸ್ಪರ್ಧಿಗಳಲ್ಲಿ ಇವರು ಒಬ್ಬರಾಗಿದ್ದರು.
ಇದನ್ನೂಓದಿ;
‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ಗೆ ಸತತ ಸೋಲು; ಈಗಲಾದರೂ ಸಿಗಲಿದೆಯೇ ಯಶಸ್ಸು?
ವಿವಾದದಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ; ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ