ಮದುವೆ ಆಗ್ತೀನಿ ಎಂದಾಗ ದಾನಿಶ್​ಗೆ ಪುನೀತ್​ ಕಡೆಯಿಂದ ಸಿಕ್ಕಿತ್ತು ವಿಶೇಷ ಟಿಪ್ಸ್

ಮದುವೆ ಆಗ್ತೀನಿ ಎಂದಾಗ ದಾನಿಶ್​ಗೆ ಪುನೀತ್​ ಕಡೆಯಿಂದ ಸಿಕ್ಕಿತ್ತು ವಿಶೇಷ ಟಿಪ್ಸ್
ಪುನೀತ್​-ದಾನಿಶ್​ ಹಾಗೂ ಅನ್ಯಾ

ದಾನಿಶ್​ ಸೇಠ್​ ಅವರ ನಟನೆಯ ‘ಒನ್​ ಕಟ್​ ಟೂ ಕಟ್​’ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾವನ್ನು ‘ಪಿಆರ್​ಕೆ ಪ್ರೊಡಕ್ಷನ್​’ ನಿರ್ಮಾಣ ಮಾಡಿದೆ. ಪಿಆರ್​ಕೆ ಜತೆ ಅವರು ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ.

TV9kannada Web Team

| Edited By: Rajesh Duggumane

Jan 27, 2022 | 4:51 PM

ಕಾಮಿಡಿಯನ್ ಹಾಗೂ ನಟ ದಾನಿಶ್​ ಸೇಠ್ (Danish Sait)​ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದಲ್ಲಿ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ‘ಹಂಬಲ್ ಪೊಲಿಟಿಶಿಯನ್ ನೋಗರಾಜ್’ ವೆಬ್​ ಸರಣಿ ರಿಲೀಸ್​ ಆಗಿ ಮೆಚ್ಚುಗೆ ಪಡೆದುಕೊಂಡಿದೆ. ಈಗ ‘ಒನ್​ ಕಟ್​ ಟೂ ಕಟ್​’  (One Cut Two cut ) ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರದ ಬಗ್ಗೆ ಮಾತನಾಡುವಾಗ ಪುನೀತ್ ಅವರನ್ನು ದಾನಿಶ್ ನೆನಪಿಸಿಕೊಂಡರು. ಮದುವೆ ದಿನ ದಾನಿಶ್​ಗೆ ವಿಶೇಷ ಮಾತೊಂದನ್ನು ಪುನೀತ್​ ಹೇಳಿದ್ದರು. ಇದನ್ನು ಅವರು ನೆನಪಿಸಿಕೊಂಡಿದ್ದಾರೆ.

​ ಅನ್ಯಾ ರಂಗಸ್ವಾಮಿ ಜತೆ ದಾನಿಶ್ ಸಿಂಪಲ್​ ಆಗಿ ಮದುವೆ ಆಗಿದ್ದರು. ಕಳೆದ ವರ್ಷ ಜೂನ್​ 9ರಂದು ಮದುವೆ ನೋಂದಣಿ ಮಾಡಿಸಿಕೊಂಡರೆ, ಜೂನ್​ 10ರಂದು ಆಪ್ತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು. ‘ನಾನು ಮತ್ತು ಅನ್ಯಾ ನಮ್ಮ ಕುಟುಂಬದವರು ಹಾಗೂ ಆಪ್ತರು ಎನಿಸಿಕೊಂಡ 15 ಜನರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡೆವು. ಜೂನ್​ 9ರಂದು ನಾವು ಮದುವೆ ನೋಂದಣಿ ಮಾಡಿಕೊಂಡಿದ್ದೆವು. ನಮ್ಮನ್ನು ನೀವು ಆಶೀರ್ವದಿಸಿ’ ಎಂದು ದಾನಿಶ್​ ಬರೆದುಕೊಂಡಿದ್ದರು. ಈಗ ಅವರು ಪುನೀತ್​ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.

‘ಮದುವೆ ದಿನ ಪುನೀತ್ ಅವರು ನನಗೆ ಕರೆ ಮಾಡಿದ್ದರು. ಈ ವೇಳೆ ಫ್ಯಾಮಿಲಿಗೆ ಯಾವಾಗಲೂ ಮೊದಲ ಆದ್ಯತೆ ನೀಡಬೇಕು ಎಂದಿದ್ದರು. ಪುನೀತ್​ ಅವರು ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕುಟುಂಬಕ್ಕೆ ಅವರು ಆದ್ಯತೆ ನೀಡುತ್ತಿದ್ದರು. ಅವರು ನಮಗೆ ಮಾದರಿ’ ಎಂದಿದ್ದಾರೆ ದಾನಿಶ್. ಪುನೀತ್​ ಅವರನ್ನು ನೆನಪಿಸಿಕೊಳ್ಳುವಾಗ ಭಾವುಕರಾದರು ದಾನಿಶ್.

ದಾನಿಶ್​ ಸೇಠ್​ ಅವರ ನಟನೆಯ ‘ಒನ್​ ಕಟ್​ ಟೂ ಕಟ್​’ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾವನ್ನು ‘ಪಿಆರ್​ಕೆ ಪ್ರೊಡಕ್ಷನ್​’ ನಿರ್ಮಾಣ ಮಾಡಿದೆ. ಪಿಆರ್​ಕೆ ಜತೆ ಅವರು ನಟಿಸುತ್ತಿರುವ ಎರಡನೇ ಸಿನಿಮಾ ಇದಾಗಿದೆ. ಈ ಚಿತ್ರವನ್ನು ಪುನೀತ್​ ರಾಜ್​ಕುಮಾರ್​ ವೀಕ್ಷಣೆ ಮಾಡಿದ್ದರು. ಅಲ್ಲದೆ, ಆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಇದನ್ನು ಕೂಡ ದಾನಿಶ್​ ನೆನಪಿಸಿಕೊಂಡಿದ್ದಾರೆ. ‘ಪುನೀತ್​ ಅವರು ‘ಒನ್​ ಕಟ್​ ಟೂ ಕಟ್​’ ಚಿತ್ರ ವೀಕ್ಷಣೆ ಮಾಡಿದ್ದರು. ನನ್ನ ನಟನೆ ಅವರಿಗೆ ತುಂಬಾನೇ ಇಷ್ಟವಾಗಿತ್ತು. ಅವರು ಕರೆದು ಆ ಬಗ್ಗೆ ಮಾತನಾಡಿದ್ದರು’ ಎಂದಿದ್ದಾರೆ ದಾನಿಶ್​.

ಇದನ್ನೂ ಓದಿ: Humble Politiciann Nograj: ಮತ್ತೆ ‘ಹಂಬಲ್ ಪೊಲಿಟಿಶಿಯನ್’ ಆದ ದಾನಿಶ್; ಮಜವಾದ ಟ್ರೈಲರ್ ಇಲ್ಲಿದೆ

ನಟ ದಾನಿಶ್​ ಸೇಠ್​ಗೆ ಅಭಿನಂದನೆ ತಿಳಿಸಿದ ಕ್ರಿಕೆಟರ್​​ ಕೆ.ಎಲ್​. ರಾಹುಲ್​; ಕಾರಣ ಏನು?

Follow us on

Related Stories

Most Read Stories

Click on your DTH Provider to Add TV9 Kannada