ನಟ ದಾನಿಶ್ ಸೇಠ್ಗೆ ಅಭಿನಂದನೆ ತಿಳಿಸಿದ ಕ್ರಿಕೆಟರ್ ಕೆ.ಎಲ್. ರಾಹುಲ್; ಕಾರಣ ಏನು?
‘ಫ್ರೆಂಚ್ ಬಿರಿಯಾನಿ’ ಹಾಗೂ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಚಿತ್ರಗಳಲ್ಲಿ ದಾನಿಶ್ ಅಭಿನಯಿಸಿದ್ದಾರೆ. ಅವರ ನಟನೆಯ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಕಥೆ ವೆಬ್ ಸಿರೀಸ್ ಆಗಿ ವೂಟ್ ಸೆಲೆಕ್ಟ್ ಆ್ಯಪ್ನಲ್ಲಿ ರಿಲೀಸ್ ಆಗಿದೆ.
ದಾನಿಶ್ ಸೇಠ್ (Danish Sait) ಅವರು ನಟನಾಗಿ, ನಿರೂಪಕನಾಗಿ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಆರ್ಸಿಬಿ ಇನ್ಸೈಡರ್ (RCB Insider) ಕೂಡ ಹೌದು. ಮಾಡಿರುವ ಎರಡೂ ಸಿನಿಮಾಗಳಲ್ಲಿ ಭಿನ್ನ ಪಾತ್ರವನ್ನು ಮಾಡುವ ಮೂಲಕ ಅವರು ಅನೇಕರಿಗೆ ಇಷ್ಟವಾಗಿದ್ದಾರೆ. ಈಗ ಟೀಂ ಇಂಡಿಯಾ ಆಟಗಾರ, ಕನ್ನಡಿಗ ಕೆ.ಎಲ್. ರಾಹುಲ್ (KL Rahul) ಅವರು ದಾನಿಶ್ಗೆ ಅಭಿನಂದನೆ ತಿಳಿಸಿದ್ದಾರೆ. ಈ ಬಗ್ಗೆ ರಾಹುಲ್ ವಿಶೇಷ ಪೋಸ್ಟರ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಅವರು ದಾನಿಶ್ಗೆ ಅಭಿನಂದನೆ ಹೇಳೋಕೆ ಕಾರಣವೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
‘ಫ್ರೆಂಚ್ ಬಿರಿಯಾನಿ’ ಹಾಗೂ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಚಿತ್ರಗಳಲ್ಲಿ ದಾನಿಶ್ ಅಭಿನಯಿಸಿದ್ದಾರೆ. ಅವರ ನಟನೆಯ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಕಥೆ ವೆಬ್ ಸಿರೀಸ್ ಆಗಿ ವೂಟ್ ಸೆಲೆಕ್ಟ್ ಆ್ಯಪ್ನಲ್ಲಿ ರಿಲೀಸ್ ಆಗಿದೆ. ಅವರ ನಟನೆ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಕಾರಣಕ್ಕೆ ಕೆ.ಎಲ್. ರಾಹುಲ್ ಕೂಡ ದಾನಿಶ್ಗೆ ಅಭಿನಂದನಾ ಸ್ಟೇಟಸ್ ಹಾಕಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ‘ಹಂಬಲ್ ಪೊಲಿಟಿಷಿಯನ್ ನಾಗರಾಜ್’ ಪೋಸ್ಟರ್ ಹಾಕಿರುವ ರಾಹುಲ್ ಅವರು ‘ಅಭಿನಂದನೆಗಳು ದಾನಿಶ್ ಸೇಠ್’ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದಾನಿಶ್, ‘ನನಗೆ ಕೆ.ಎಲ್. ರಾಹುಲ್ ಉತ್ತಮ ಗೆಳೆಯ’ ಎಂದಿದ್ದರು. ಇಬ್ಬರೂ ಕನ್ನಡದವರು. ಈ ಮೊದಲು ರಾಹುಲ್ ಕೂಡ ಆರ್ಸಿಬಿಯಲ್ಲೇ ಇದ್ದರು. ಈ ಕಾರಣಕ್ಕೆ ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಇದೆ.
ದಾನಿಶ್ ಸೇಠ್ ಜೊತೆಗೆ ಪ್ರಕಾಶ್ ಬೆಳವಾಡಿ, ವಿಜಯ್ ಚೆಂಡೂರ್, ದಿಶಾ ಮದನ್ ಮುಂತಾದವರು ಈ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಸಾದ್ ಖಾನ್ ನಿರ್ದೇಶನ ಮಾಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವೂಟ್ ಸೆಲೆಕ್ಟ್ ಮೂಲಕ 2022ರ ಜ.6ರಂದು ಈ ವೆಬ್ ಸರಣಿ ಬಿಡುಗಡೆ ಆಗಿದೆ.
ಇದು ಒಟ್ಟು 10 ಎಪಿಸೋಡ್ ಹೊಂದಿರುವ ಕಾಮಿಡಿ ಆಧಾರಿತ ವೆಬ್ ಸೀರಿಸ್. ನಾಗರಾಜ್ ಒಬ್ಬ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಾನೆ. ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡಲಿದ್ದಾನೆ ಎಂಬುದು ಇಲ್ಲಿನ ಹೈಲೈಟ್.
ಇದನ್ನೂ ಓದಿ: Humble Politiciann Nograj: ಮತ್ತೆ ‘ಹಂಬಲ್ ಪೊಲಿಟಿಶಿಯನ್’ ಆದ ದಾನಿಶ್; ಮಜವಾದ ಟ್ರೈಲರ್ ಇಲ್ಲಿದೆ
ದಾನಿಶ್ ಸೇಠ್ ಸಹೋದರಿ ಕುಬ್ರಾ ಸೇಠ್ಗೆ ‘ಫೌಂಡೇಶನ್’ ಅವಕಾಶ; ಹಾಲಿವುಡ್ ಕಲಾವಿದರ ಜತೆ ನಟನೆ
Published On - 5:05 pm, Mon, 10 January 22