ವಿವಾದದಲ್ಲಿ ರಾಮ್​ ಚರಣ್​ ಪತ್ನಿ ಉಪಾಸನಾ; ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ

ಉಪಾಸನಾ ಅವರು ನಟ ರಾಮ್​ ಚರಣ್​ ಪತ್ನಿ, ಅಪೋಲೋ ಫೌಂಡೇಷನ್​ನ ಉಪಾಧ್ಯಕ್ಷೆ, ಬಿ ಪಾಸಿಟಿವ್​ ಮ್ಯಾಗಜಿನ್​ನ ಎಡಿಟರ್​. ಅವರು ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆ.

ವಿವಾದದಲ್ಲಿ ರಾಮ್​ ಚರಣ್​ ಪತ್ನಿ ಉಪಾಸನಾ; ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ
ಉಪಾಸನಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 27, 2022 | 2:22 PM

ವೈಯಕ್ತಿಕ ಅಭಿಪ್ರಾಯ ಹಂಚಿಕೊಳ್ಳುವಾಗ ತುಂಬಾನೇ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್​ ಮೀಡಿಯಾ ಸಾಕಷ್ಟು ಸ್ಟ್ರಾಂಗ್​ ಆಗಿರುವುದರಿಂದ ಟ್ರೋಲ್​ ಆಗಲು, ಟೀಕೆಗೆ ಒಳಗಾಗಲು ಹೆಚ್ಚು ಸಮಯ ಬೇಡ. ಅದೇ ರೀತಿ ಈಗ ರಾಮ್​ ಚರಣ್ (Ram Charan) ಪತ್ನಿ​ ಉಪಾಸನಾ (Ram Charan wife Upasana ) ಅವರು ವಿವಾದ ಒಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜನವರಿ 26ರ ಪೋಸ್ಟ್​ ಹಾಕುವ ಭರದಲ್ಲಿ ಅವರು ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಸದ್ಯ, ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.  

ಉಪಾಸನಾ ಅವರು ನಟ ರಾಮ್​ ಚರಣ್​ ಪತ್ನಿ, ಅಪೋಲೋ ಫೌಂಡೇಷನ್​ನ ಉಪಾಧ್ಯಕ್ಷೆ, ಬಿ ಪಾಸಿಟಿವ್​ ಮ್ಯಾಗಜಿನ್​ನ ಎಡಿಟರ್​. ಅವರು ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆ. ಅವರ ಸೋಶಿಯಲ್​ ವರ್ಕ್​ಗೆ ಸಾಕಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಈಗ ಸೋಶಿಯಲ್​ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ದೇವಸ್ಥಾನದ ಗೋಪುರದ ಫೋಟೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಗೋಪುರದ ಮೇಲೆ ದೇವರ ಬದಲು ಜನರಿದ್ದಾರೆ. ಇದು ಎಡಿಟ್​ ಮಾಡಲಾದ ಫೋಟೋ. ಈ ಪೋಸ್ಟ್ ಇಷ್ಟಪಟ್ಟಿರುವ ಅವರು ಅದಕ್ಕೆ ಕ್ಯಾಪ್ಶನ್​ ನೀಡಿದ್ದಾರೆ. ‘ಪ್ರಗತಿಪರ, ಸಹಿಷ್ಣು ರಾಷ್ಟ್ರವನ್ನು ನಿರ್ಮಿಸಲು ಒಟ್ಟಾಗಿ ತೊಡಗೋಣ. ನನ್ನ ತಾಯಿ ಈ ಫೋಟೋ ಕಳಿಸಿದ್ದರು. ನನಗೆ ಇದು ಇಷ್ಟವಾಯಿತು. ಇದನ್ನು ಮಾಡಿದವರಿಗೆ ನಾನು ಮೆಚ್ಚುಗೆ ವ್ಯಕ್ತಪಡಿಸಬೇಕು’ ಎಂದು ಬರೆದುಕೊಂಡಿದ್ದಾರೆ ಅವರು.

ಒಂದು ವರ್ಗದ ಜನರು ಅವರ ಮಾತನ್ನು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಉಪಾಸನಾ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಬರೆದುಕೊಂಡಿದ್ದಾರೆ. ‘ಹಿಂದೂಗಳ ದೇವಸ್ಥಾನಕ್ಕೆ ಈ ರೀತಿ ಮಾಡಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದೀರಿ. ಬೇರೆ ಧರ್ಮದವರ ಪುಣ್ಯಕ್ಷೇತ್ರಗಳ ಮೇಲೂ ಇದೇ ರೀತಿ ಮಾಡಿ, ಅದನ್ನು ಪೋಸ್ಟ್ ಮಾಡುವ ಧೈರ್ಯ ಇದೆಯೇ’ ಎಂದು ಕೆಲವರು ಪ್ರಶ್ನಿಸಿದ್ದಾರೆ. ‘ನಮ್ಮ ಸಂಸ್ಕೃತಿ ಬಗ್ಗೆ ಕೊಂಚವಾದರೂ ಗೌರವ ಕೊಡಿ. ಇದನ್ನು ನಾವು ಒಪ್ಪುವುದಿಲ್ಲ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಈ ಬಗ್ಗೆ ಉಪಾಸನಾ ಅವರು ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಿಲ್ಲ. ಅವರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕಳೆದ ವರ್ಷ ಉಪಾಸನಾ ಹೈದರಾಬಾದ್​ನ ಝೂನಿಂದ ಸಿಂಹಗಳನ್ನು ದತ್ತು ಪಡೆದಿದ್ದರು. ವಿಕ್ಕಿ ಹಾಗೂ ಲಕ್ಷ್ಮೀ ಹೆಸರಿನ ಸಿಂಹಗಳನ್ನು ಇವರು ದತ್ತು ಪಡೆದಿದ್ದರು. ಒಂದು ವರ್ಷ ಇವುಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಉಪಾಸನಾ ತೆಗೆದುಕೊಂಡಿದ್ದು, ಇದಕ್ಕಾಗಿ 2 ಲಕ್ಷ ರೂ ಚೆಕ್​ಅನ್ನು ನೀಡಿದ್ದರು. ಕೊವಿಡ್ ತಂದ ಅನಿಶ್ಚಿತತೆಯಿಂದ ಸಾಕಷ್ಟು ಝೂಗಳು ಸಂಕಷ್ಟಕ್ಕೆ ಸಿಲುಕಿವೆ. ಯಾವುದೇ ಪ್ರವಾಸಿಗರು ಬರದೆ ಝೂನಲ್ಲಿರುವ ಪ್ರಾಣಿಗಳನ್ನು ನೋಡಿಕೊಳ್ಳುವುದು ಕಷ್ಟವಾಗಿದೆ.

ಇದನ್ನೂ ಓದಿ: ‘ನಾನು ದೊಡ್ಡವನಾದ್ಮೇಲೆ ರಾಮ್​ ಚರಣ್​, ಜ್ಯೂ. ಎನ್​ಟಿಆರ್​ ರೀತಿ ಡ್ಯಾನ್ಸ್​ ಮಾಡ್ತೀನಿ’: ಸಲ್ಮಾನ್​ ಖಾನ್​

‘RRR’ ಚಿತ್ರದ ವೇಳೆ ರಾಮ್​ ಚರಣ್​ಗೆ ಸಿಕ್ಕಿದ್ರಂತೆ ಹೊಸ ಸಹೋದರ; ಯಾರದು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ